ಕೋಟೆನಾಡು ಚಿತ್ರದುರ್ಗದಲ್ಲಿ 'ಕೋಟಿಗೊಬ್ಬ 3' ಪ್ರಿ-ರಿಲೀಸ್ ಕಾರ್ಯಕ್ರಮ
ಏಪ್ರಿಲ್ 29 ರಂದು ತೆರೆಗೆ ಬರಲಿರುವ "ಕೋಟಿಗೊಬ್ಬ 3" ಬಿಡುಗಡೆಗಾಗಿ ಸುದೀಪ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರೆ, ಈ ಕಮರ್ಷಿಯಲ್ ಎಂಟರ್ಟೈನರ್ ನಿರ್ಮಾಪಕರು ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮ / ಆಡಿಯೊ ಬಿಡುಗಡೆಯನ್ನು ಕೋಟೆನಾಡು ಚಿತ್ರದುರ್ಗದಲ್ಲಿ ಆಯೋಜಿಸಲು ಸಜ್ಜಾಗಿದ್ದಾರೆ.
Published: 22nd March 2021 11:10 AM | Last Updated: 22nd March 2021 11:10 AM | A+A A-

ಸುದೀಪ್
ಏಪ್ರಿಲ್ 29 ರಂದು ತೆರೆಗೆ ಬರಲಿರುವ "ಕೋಟಿಗೊಬ್ಬ 3" ಬಿಡುಗಡೆಗಾಗಿ ಸುದೀಪ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರೆ, ಈ ಕಮರ್ಷಿಯಲ್ ಎಂಟರ್ಟೈನರ್ ನಿರ್ಮಾಪಕರು ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮ / ಆಡಿಯೊ ಬಿಡುಗಡೆಯನ್ನು ಕೋಟೆನಾಡು ಚಿತ್ರದುರ್ಗದಲ್ಲಿ ಆಯೋಜಿಸಲು ಸಜ್ಜಾಗಿದ್ದಾರೆ.
ನಿರ್ಮಾಪಕ, ಸೂರಪ್ಪ ಬಾಬು ಮತ್ತು ನಟ ಸುದೀಪ್ ಇತ್ತೀಚೆಗೆ ನಡೆಸಿದ್ದ ಸಭೆಯ ವೇಳೆ ಕಾರ್ಯಕ್ರಮದ ರೂಪುರೇಷೆ ಹಾಗೂ ಸ್ಥಳದ ಕುರಿತು ನಿರ್ಧರಿಸಲಾಗಿದೆ.
ತಂಡ ಇದಾಗಲೇ ಕಾರ್ಯಕ್ರಮದ ಪೂರ್ವಸಿದ್ದತೆಯಲ್ಲಿದೆ. ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಯೋಜನೆ ರೂಪಿಸಲಾಗುತ್ತಿದೆ. ಏಪ್ರಿಲ್ 20 ರಂದು ಈ ಖಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ. ಆದರೆ ದಿನಾಂಕದ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.ಏತನ್ಮಧ್ಯೆ, ತಯಾರಕರು ತಮ್ಮ ಮುಂದಿನ ಚಿತ್ರದ ತಯಾರಿ ನಡೆಸಿದ್ದು ಅದರ ವಿವರಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.
2021 ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಕೋಟಿಗೊಬ್ಬ 3 ಕಥೆಯನ್ನು ನಟ ಸುದೀಪ್ ಸ್ವತಃ ಬರೆದಿದ್ದಾರೆ. ಇದು ಶಿವ ಕಾರ್ತಿಕ್ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಮಡೋನ್ನಾ ಸೆಬಾಸ್ಟಿಯನ್ ಮತ್ತು ಶ್ರದ್ಧಾ ದಾಸ್ ನಾಯಕಿಯರಾಗಿರುವ ಈ ಚಿತ್ರದಲ್ಲಿ ಬಿ-ಟೌನ್ ಹೀರೋ ಅಫ್ತಾಬ್ ಶಿವದಾಸನಿ ಪ್ರಮುಖ ಪಾತ್ರದಲ್ಲಿದ್ದಾರೆ. ತಬಲಾ ನಾಣಿ, ರವಿಶಂಕರ್, ರಾಜೇಶ್ ನಟರಂಗ ಅವರೂ ಅಭಿನಯಿಸಿರುವ ಸಿನಿಮಾದಲ್ಲಿ ಆಶಿಕಾ ರಂಗನಾಥ್ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಶೇಖರ್ ಚಂದ್ರು ಕ್ಯಾಮೆರಾ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಈ ಸಿನಿಮಾಗಿದೆ.