ಟಾಲಿವುಡ್ ಎಂಟ್ರಿಗೆ 'ಕೋಟಿಗೊಬ್ಬ 3' ರೆಡಿ!

ಕಿಚ್ಚ ಸುದೀಪ್ ಅಭಿನಯದ "ಕೊಟಿಗೊಬ್ಬ 3" ಟಾಲಿವುಡ್‌ ಪ್ರವೇಶಿಸುವ ಇತ್ತೀಚಿನ ಚಿತ್ರವಾಗಿದೆ. 

Published: 27th March 2021 11:20 AM  |   Last Updated: 27th March 2021 12:35 PM   |  A+A-


ಸುದೀಪ್

Posted By : Raghavendra Adiga
Source : The New Indian Express

ಕಿಚ್ಚ ಸುದೀಪ್ ಅಭಿನಯದ "ಕೊಟಿಗೊಬ್ಬ 3" ಟಾಲಿವುಡ್‌ ಪ್ರವೇಶಿಸುವ ಇತ್ತೀಚಿನ ಚಿತ್ರವಾಗಿದೆ. ಸೂರಪ್ಪ ಬಾಬು ನಿರ್ಮಾಣದ ಬಹು ನಿರೀಕ್ಷಿತ ಕಮರ್ಷಿಯಲ್ ಎಂಟರ್ಟೈನರ್ ಶಿವ ಕಾರ್ತಿಕ್ ನಿರ್ದೇಶನದ ಚೊಚ್ಚಲ ಚಿತ್ರವಾದ "ಕೋಟಿಗೊಬ್ಬ 3" ಈಗಾಗಲೇ ತನ್ನ ಹಾಡುಗಳು ಮತ್ತು ಟ್ರೇಲರ್‌ಗಳೊಂದಿಗೆ ಪ್ರಿ ರಿಲೀಸ್ ಹವಾ ಸೃಷ್ಟಿಸಿದೆ.ಚಿತ್ರದ ತೆಲುಗು ಡಬ್ಬಿಂಗ್ ಹಕ್ಕುಗಳನ್ನು ಗುಡ್ ಸಿನೆಮಾ ಗ್ರೂಪ್ ಮತ್ತು ನಿರ್ಮಾಪಕ ದೇವೇಂದ್ರ ಡಿಕೆ ಹೆಚ್ಚಿನ ಬೆಲೆಗೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರು ಸಾಗರೋತ್ತರ ಮಾರುಕಟ್ಟೆಯ ಬಗ್ಗೆಯೂ ಯೋಜಿಸಿದ್ದಾರೆ.

ಸ್ಪಂದನಾ ಪಾಸಮ್ ಹಾಗೂ ಸ್ವೇತನ್ ರೇಡ್ಡಿ ತಯಾರಿಸುವ "ಕೋಟಿಗೊಬ್ಬ 3" ತೆಲುಗಿನಲ್ಲಿ "ಕೆ 3 - ಕೊಟಿಯೊಕೊಕ್ಕಡು" ಎಂಬ ಶೀರ್ಷಿಕೆಯಲ್ಲಿ ಮೂಡಿ ಬರಲಿದೆ. ಸುದೀಪ್ ಟಾಲಿವುಡ್ ನಲ್ಲಿ ಪರಿಚಿತ ಮುಖವಾಗಿದ್ದು, ಈ ಮೊದಲು ರಾಮ್ ಗೋಪಾಲ್ ವರ್ಮಾ ಮತ್ತು ಎಸ್.ಎಸ್.ರಾಜಮೌಳಿ ನಿರ್ದೇಶನದ "ಈಗ" ನಿರ್ದೇಶನದ ರಕ್ತ ಚರಿತ್ರ 1ಮತ್ತು 2ನೇ ಭಾಗಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ನಟ ಬಾಹುಬಲಿ - ದಿ ಬಿಗಿನಿಂಗ್ ಮತ್ತು ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಚಿತ್ರದ ಭಾಗವಾಗಿದ್ದರು. ಅಲ್ಲದೆ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾವನ್ನು ತೆಲುಗಿನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗಿತ್ತು.ಏತನ್ಮಧ್ಯೆ, ಏಪ್ರಿಲ್ 29 ರಂದು ಬಿಡುಗಡೆಯಾಗುವ ಮುನ್ನ ಚಿತ್ರದುರ್ಗದಲ್ಲಿ ಆಡಿಯೋ ಬಿಡುಗಡೆಗಾಗಿ ಮೆಗಾ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಚಿತ್ರತಂಡ ಆಯೋಜಿಸಿದೆ.

ಸುದೀಪ್ ಬರೆದ ಕಥೆಯ ಈ ಸಿನಿಮಾದಲ್ಲಿ ಮಡೋನ್ನಾ ಸೆಬಾಸ್ಟಿಯನ್ ನಾಯಕಿಯಾಗಿದ್ದಾರೆ.ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ, ರವಿಶಂಕರ್ ಮತ್ತಿತರರು ನಟಿಸಿದ್ದಾರೆ.ಚಿತ್ರಕ್ಕೆ  ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದು, ಶೇಖರ್ ಚಂದ್ರು ಕ್ಯಾಮೆರಾ ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ವಿಶೇಷ ಹಾಡೊಂದರಲ್ಲಿ ತೆರೆ ಹಂಚಿಕೊಂಡಿದ್ದಾರೆ..


Stay up to date on all the latest ಸಿನಿಮಾ ಸುದ್ದಿ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp