ಸದ್ದಿಲ್ಲದೆ ಸರಳವಾಗಿ ಸಪ್ತಪದಿ ತುಳಿದ ಚೈತ್ರಾ ಕೊಟೂರು
ಬಿಗ್ ಬಾಸ್ ಕನ್ನಡ ಸೀಸನ್ 7 ಖ್ಯಾತಿಯ ಬರಹಗಾರ್ತಿ, ನಟಿ ಚೈತ್ರಾ ಕೊಟೂರು ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ತಮ್ಮ ಸಂಗಾತಿಯೊಂದಿಗೆ ವಿವಾಹ ಬಂಧನಕ್ಕೊಳಗಾಗಿದ್ದಾರೆ.
Published: 28th March 2021 02:30 PM | Last Updated: 28th March 2021 02:30 PM | A+A A-

ಚೈತ್ರಾ ಕೊಟೂರು ತಮ್ಮ ಪತಿಯೊಂದಿಗೆ
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 7 ಖ್ಯಾತಿಯ ಬರಹಗಾರ್ತಿ, ನಟಿ ಚೈತ್ರಾ ಕೊಟೂರು ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ತಮ್ಮ ಸಂಗಾತಿಯೊಂದಿಗೆ ವಿವಾಹ ಬಂಧನಕ್ಕೊಳಗಾಗಿದ್ದಾರೆ.
ಚೈತ್ರಾ ಕೊಟೂರು ಅವರ ಕೈಹಿಡಿದ ಹುಡುಗ ಉದ್ಯಮಿ ನಾಗಾರ್ಜುನ. ಒಂದು ವರ್ಷದ ಹಿಂದೆ ಪರಿಚಯವಾಗಿದ್ದ ನಾಗಾರ್ಜುನ ಅವರ ಜೊತೆಗಿನ ಪರಿಚಯ ಸ್ನೇಹವಾಗಿ ಬೆಳೆದು ನಂತರ ಪ್ರೇಮಕ್ಕೆ ತಿರುಗಿ ಇದೀಗ ಮದುವೆಯ ಅಧಿಕೃತ ರೂಪ ಪಡೆದುಕೊಂಡಿದೆ.
ರಂಗಭೂಮಿ ಕಲಾವಿದೆ ಚೈತ್ರಾ ಕೊಟೂರು ಹರಿಪ್ರಿಯಾ ನಾಯಕಿಯಾಗಿ ಅಭಿನಯಿಸಿದ್ದ ಸೂಜಿದಾರ ಚಿತ್ರದಲ್ಲಿ ಗಮನ ಸೆಳೆಯುವ ಪಾತ್ರ ಮಾಡಿದ್ದರು. ನಂತರ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿ ಅಲ್ಲಿ ತಮ್ಮ ನಡವಳಿಕೆ, ಮಾತುಗಳ ಮೂಲಕ ಸುದ್ದಿ ಮಾಡಿದ್ದರು.
ಇತ್ತೀಚೆಗೆ ಆಲ್ಬಂ ಹಾಡನ್ನು ಬರೆದು, ಸಂಗೀತ ನಿರ್ದೇಶನ ಮಾಡಿ ಅದರಲ್ಲಿ ನಟಿಸುವ ಮೂಲಕ ಕೂಡ ಚೈತ್ರಾ ಕೊಟೂರು ಸುದ್ದಿಯಾಗಿದ್ದರು.