ಕೊರೋನಾ ಎರಡನೇ ಅಲೆ: 'ರಾಬರ್ಟ್' ವಿಜಯಯಾತ್ರೆ ಮುಂದೂಡಿಕೆ 

ಮೊನ್ನೆ ಮಾರ್ಚ್ 11ರ ಶಿವರಾತ್ರಿಯಂದು ದರ್ಶನ್ ನಟನೆಯ ರಾಬರ್ಟ್ ಚಿತ್ರ ತೆರೆಕಂಡು ಎಲ್ಲೆಡೆ ಯಶಸ್ವಿ ಪ್ರದರ್ಶನ ಕಂಡಿದೆ. ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರತಂಡ ವಿಜಯಯಾತ್ರೆಯನ್ನು ಈ ತಿಂಗಳಾಂತ್ಯಕ್ಕೆ ಹಮ್ಮಿಕೊಂಡಿತ್ತು.

Published: 28th March 2021 09:14 AM  |   Last Updated: 28th March 2021 09:14 AM   |  A+A-


Darshan in Roberrtt

ರಾಬರ್ಟ್ ಚಿತ್ರದಲ್ಲಿ ನಟ ದರ್ಶನ್

Posted By : Sumana Upadhyaya
Source : Online Desk

ಬೆಂಗಳೂರು: ಮೊನ್ನೆ ಮಾರ್ಚ್ 11ರ ಶಿವರಾತ್ರಿಯಂದು ದರ್ಶನ್ ನಟನೆಯ ರಾಬರ್ಟ್ ಚಿತ್ರ ತೆರೆಕಂಡು ಎಲ್ಲೆಡೆ ಯಶಸ್ವಿ ಪ್ರದರ್ಶನ ಕಂಡಿದೆ. ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರತಂಡ ವಿಜಯಯಾತ್ರೆಯನ್ನು ಈ ತಿಂಗಳಾಂತ್ಯಕ್ಕೆ ಹಮ್ಮಿಕೊಂಡಿತ್ತು.

ಅದಕ್ಕೆಂದು ಚಿತ್ರತಂಡ ವಿಜಯಯಾತ್ರೆ ಮೂಲಕ ಕೆಲವು ಊರುಗಳಿಗೆ ಹೋಗಿ ಅಭಿಮಾನಿಗಳಿಗೆ ಧನ್ಯವಾದ ಹೇಳಬೇಕೆಂದು ವೇಳಾಪಟ್ಟಿ ಸಿದ್ದಮಾಡಿಕೊಂಡಿತ್ತು. ಆದರೆ ಈಗ ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಕಾರಣ ಎಲ್ಲಾ ಕಡೆ ಹೋಗಲು ಅನುಮತಿ ಸಿಗುವುದು ಕಷ್ಟವಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಎಲ್ಲರ ಆರೋಗ್ಯ ಕಾಪಾಡುವುದು ಸರ್ಕಾರದ ಆದ್ಯತೆಯಾಗಿರುವುದರಿಂದ ರಾಬರ್ಟ್ ವಿಜಯಯಾತ್ರೆಯನ್ನು ಮುಂದೂಡಲಾಗಿದೆ ಎಂದು ದರ್ಶನ್ ತಿಳಿಸಿದ್ದಾರೆ.

ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯದ ಸುರಕ್ಷತೆ ನೋಡಿಕೊಳ್ಳಿ ಎಂದು ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp