ಕೋವಿಡ್ ಸೋಂಕಿತರ ಸಹಾಯಕ್ಕೆ ಬೈಕ್ ಮಾರಾಟಕ್ಕಿಟ್ಟ ನಟ ಹರ್ಷವರ್ಧನ್

ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸಾಕಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೋಂಕಿತರು ಆಕ್ಸಿಜನ್, ಆಸ್ಪತ್ರೆ, ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ.

Published: 03rd May 2021 08:55 PM  |   Last Updated: 03rd May 2021 08:58 PM   |  A+A-


Harshvardhan Rane

ಹರ್ಷವರ್ಧನ್ ರಾಣೆ

Posted By : Vishwanath S
Source : Online Desk

ಹೈದರಾಬಾದ್: ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸಾಕಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೋಂಕಿತರು ಆಕ್ಸಿಜನ್, ಆಸ್ಪತ್ರೆ, ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್, ಅಜಯ್ ದೇವಗನ್, ಜಾನ್ ಅಬ್ರಹಾಂ, ಸಲ್ಮಾನ್ ಖಾನ್, ಸ್ಯಾಂಡಲ್ ವುಡ್ ನ ಅರ್ಜುನ್ ಗೌಡ, ಭುವನ್ ಪೊನ್ನಣ್ಣ ಸೇರಿದಂತೆ ಅನೇಕ ಸಿನಿತಾರೆಯರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

ಸನಮ್ ತೇರಿ ಕಸಮ್ ಚಿತ್ರದ ನಟ ಹರ್ಷವರ್ಧನ್ ರಾಣೆ ಅವರು ಆಕ್ಸಿಜನ್ ಪೂರೈಕೆ ಮಾಡುವ ಸಲುವಾಗಿ ಮೆಚ್ಚಿನ ರಾಯಲ್ ಎನ್ ಫೀಲ್ಡ್ ಬೈಕ್ ಮಾರಿದ್ದಾರೆ. ನನ್ನ ಬೈಕ್ ನೀಡಿ ಆಕ್ಸಿಜನ್ ಪಡೆಯಲು ನಿರ್ಧಾರ ಮಾಡಿದ್ದೇನೆ. ಇದರಿಂದ ನಾವು ಅವಶ್ಯಕತೆ ಇರುವವರಿಗೆ ಆಕ್ಸಿಜನ್ ಪೂರೈಕೆ ಮಾಡಬಹುದು ಎಂದು ತಮ್ಮ ಬೈಕ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp