ಸ್ಪ್ಯಾನಿಷ್ ನಲ್ಲಿ 'ದಿ ಬರ್ತ್ 10000 ಬಿಸಿ' ಬಿಡುಗಡೆಗೆ ತಯಾರಿ

ಚೊಚ್ಚಲ ನಿರ್ದೇಶಕ ವಿಕ್ರಮ್ ಅವರ ಪ್ರಯೋಗಾತ್ಮಕ ಚಿತ್ರ "ದಿ ಬರ್ತ್ 10000 ಬಿಸಿ" ಶೀರ್ಷಿಕೆಯ ಕಾರಣದಿಂದಲೇ ಮೊದಲಿನಿಂದಲೂ ಗಮನ ಸೆಳೆದಿದೆ, ಅದರ ಟ್ರೇಲರ್  ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದೆ. 
ಬರ್ತ್ 10000 ಬಿಸಿ
ಬರ್ತ್ 10000 ಬಿಸಿ

ಚೊಚ್ಚಲ ನಿರ್ದೇಶಕ ವಿಕ್ರಮ್ ಅವರ ಪ್ರಯೋಗಾತ್ಮಕ ಚಿತ್ರ "ದಿ ಬರ್ತ್ 10000 ಬಿಸಿ" ಶೀರ್ಷಿಕೆಯ ಕಾರಣದಿಂದಲೇ ಮೊದಲಿನಿಂದಲೂ ಗಮನ ಸೆಳೆದಿದೆ, ಅದರ ಟ್ರೇಲರ್ ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದೆ. ಮೊದಲ ಬಾರಿಗೆ ವೃತ್ತಿಯಲ್ಲಿ ವೈದ್ಯರಾಗಿರುವ ಮಿರ್ದೇಶಕ ವಿಕ್ರಮ್ ಇತಿಹಾಸ ಪೂರ್ವದಲ್ಲಿ ನಡೆದ ಆಕ್ಷನ್-ಅಡ್ವೆಂಚರ್ ಕಥಾವಸ್ತುವಿಟ್ಟು ಚಿತ್ರ ಮಾಡಿದ್ದಾರೆ.ಬಹು ಭಾಷೆಗಳಲ್ಲಿ ತಯಾರಾದ ಈ ಚಿತ್ರ ಈಗ ಐಎಮ್‌ಡಿಬಿಯಲ್ಲಿ ಎರಡನೇ ಅತ್ಯಂತ ಜನಪ್ರಿಯ ಚಿತ್ರವಾಗಿದೆ. ವಿಕ್ರಮ್ ಅಪರಿಚಿತನೊಬ್ಬನ ದಂತಕಥೆ ಹಾಗೂ ಆತ ಜೀವನ ಮತ್ತು ಜೀವನೋಪಾಯದ ಆವಿಷ್ಕಾರದ ಕಡೆಗೆ ನಡೆದು ಹೋಗುವುದನ್ನು ಸಿನಿಮಾದ ಮೂಲಕ ಪರಿಶೋಧಿಸಿದ್ದಾರೆ. ಹೆಚ್ಚು ಕಡಿಮೆ ‘ಭಾಷೆಯೇ ಇಲ್ಲದ ’ ಚಿತ್ರವಾಗಿರುವ ಈ ಸಿನಿಮಾ ಪ್ರಸ್ತುತ ಅವಧಿಯಲ್ಲೇ ತಯಾರಾಗಲಿದೆ.

ಫ್ಯಾಮಿಲ್ಲಿ ಡ್ರಾಮಾ ಆಗಿ ಪ್ರಾರಂಭವಾಗುವ ಕಥೆ ಇತಿಹಾಸ ಪೂರ್ವ ಯುಗಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಚಿತ್ರದ ಸುಮಾರು 90 ಪ್ರತಿಶತ ಕಥೆಯನ್ನು ನಾಯಕ ನಟ ಪ್ರತಾಪ್ ರಾಣಾ ಮೂಲಕ ಹೇಳಿಸಲಾಗಿದೆ.ಮೊದಲ ಕೆಲವು ನಿಮಿಷಗಳಲ್ಲಿ ಸಂಭಾಷಣೆಗಳನ್ನು ಹೊಂದಿರುವ ಚಿತ್ರದ ಮತ್ತೊಂದು ಪ್ರಮುಖ ಅಂಶವೆಂದರೆ ಅದರ ಹಿನ್ನೆಲೆ ಸಂಗೀತ ಮತ್ತು ಎಮೋಷನ್ ಗಳ ಮೇಲಿನ ಸಾಗುವಿಕೆ."ಸಿನಿಮಾ ಪ್ರಾಯೋಗಿಕವಾಗಿದ್ದರೂ, ಇದು ಕರ್ಮರ್ಷಿಯಲ್ ಟೂರ್ ನ ಎಲ್ಲಾ ಗುಣಗಳನ್ನು ಹೊಂದಿದೆ." ನಿರ್ದೇಶಕರು ಹೇಳಿದ್ದಾರೆ. ಶ್ರೀ ವಿನಾಯಕ ಮಾರುತಿ ಕ್ರಿಯೇಷನ್ಸ್ ಮತ್ತು ಲಕ್ಷ್ಯ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಪ್ರದೀಪ್ ಜೈನ್ ನಿರ್ಮಿಸಿದ್ದಾರೆ.

ಸಿನಿಮಾಗೆ ಸಂಗೀತವನ್ನು ಜುದಾ ಸ್ಯಾಂಡಿ ನೀಡಿದ್ದಾದರೆ ರಾಷ್ಟ್ರಪ್ರಶಸ್ತಿ ವಿಜೇತ ಮಹಾವೀರ್ ಸಾಬಣ್ಣನವರ್ ಧ್ವನಿ ವಿನ್ಯಾಸವನ್ನು ನಿರ್ವಹಿಸಿದ್ದಾರೆ. ಡಿಒಪಿ ಆನಂದ್ ಸುಂದರೇಶ ಚಿತ್ರಕ್ಕಾಗಿ ಕ್ಯಾಮೆರಾವನ್ನು ನಿರ್ವಹಿಸಿದ್ದಾರೆ. ತಂಡವು ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾಡುತ್ತಿದ್ದು, ಜೂನ್‌ನಲ್ಲಿ ಚಿತ್ರದ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಆದಾಗ್ಯೂ, ಇದು ಸಾಂಕ್ರಾಮಿಕದ ಸಮಯವಾಗಿರುವ ಕಾರಣ ತಯಾರಕರು ಒಟಿಟಿ ಬಿಡುಗಡೆ ಸಹ ಎದುರು ನೋಡುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿವಿಧ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

"ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆ ನಮ್ಮಲ್ಲಿದೆ. ಟ್ರೇಲರ್ ವೀಕ್ಷಿಸಿದ ಸ್ಪ್ಯಾನಿಷ್ ಚಲನಚಿತ್ರ ನಿರ್ಮಾಪಕರೊಬ್ಬರು ಚಿತ್ರವನ್ನು ಡಬ್ ಮಾಡಿ ಅವರ ಭಾಷೆಗಳಲ್ಲಿ ಬಿಡುಗಡೆ ಮಾಡಲು ನಮ್ಮನ್ನು ಸಂಪರ್ಕಿಸಿದ್ದಾರೆ. ನಾವು ಮಾತುಕತೆ ಹಂತದಲ್ಲಿದ್ದೇವೆ," ನಿರ್ದೇಶಕ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com