ನಾನು ಸತ್ತಿಲ್ಲ ಬದುಕಿದ್ದೇನೆ; ಆತಂಕ ಬೇಡ: ಹಿರಿಯ ಹಾಸ್ಯ ನಟ ದೊಡ್ಡಣ್ಣ
ಇಂತಹ ಸಂದರ್ಭದಲ್ಲಿ, ಕೆಲ ಕಿಡಿಗೇಡಿಗಳು ಹಿರಿಯ ನಟ ದೊಡ್ಡಣ್ಣ ನಿಧನರಾಗಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಫೋಟಿ ಹಾಕಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
Published: 05th May 2021 07:08 PM | Last Updated: 05th May 2021 07:08 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಇಂತಹ ಸಂದರ್ಭದಲ್ಲಿ, ಕೆಲ ಕಿಡಿಗೇಡಿಗಳು ಹಿರಿಯ ನಟ ದೊಡ್ಡಣ್ಣ ನಿಧನರಾಗಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಫೋಟಿ ಹಾಕಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ನಟ ದೊಡ್ಡಣ್ಣ ವಿಡಿಯೋವೊಂದನ್ನು ಬಿಡುಗಡೆಗೊಳಿಸಿ, ತಾವು ಆರೋಗ್ಯವಾಗಿ, ಆರಾಮವಾಗಿ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.
“ಬುಧವಾರ ಬೆಳಗ್ಗೆ ಕೆಲ ಕಿಡಿಗೇಡಿಗಳು ಜಾಲತಾಣಗಳಲ್ಲಿ ನನ್ನ ಫೋಟೊ ಹಾಕಿ ರಿಪ್ ಎಂದು ಕಮೆಂಟ್ ಮಾಡಿ, ನಾನು ನಿಧನವಾಗಿರುವ ರೀತಿ ಬಿಂಬಿಸಿದ್ದಾರೆ. ಆದರೆ ನಾನು ಆರೋಗ್ಯವಾಗಿದ್ದೇನೆ. ಅನೇಕ ಮಂದಿ ಅಭಿಮಾನಿಗಳು, ಮಾಧ್ಯಮ ಪ್ರತಿನಿಧಿನಿಗಳು ದೂರವಾಣಿ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಹೀಗಾಗಿ ವಿಡಿಯೋ ಸಂದೇಶ ರವಾನಿಸುತ್ತಿರುವೆ” ಎಂದು ಹೇಳಿದ್ದಾರೆ.
“ಮೃತಪಟ್ಟಿರುವ ರೀತಿಯಲ್ಲಿ ಬಿಂಬಿಸಿರುವ ಕಾರಣ, ಯಾವುದೋ ಕಂಟಕ ನಿವಾರಣೆಯಾಗಿ, ಆಯುಷ್ಯ ಹೆಚ್ಚುತ್ತದೆ ಎಂದು ಭಾವಿಸಿರುವೆ. ಕನ್ನಡ ನಾಡಿನ ಎಲ್ಲ ತಂದೆ ತಾಯಿಗಳಿಗೆ ಭಕ್ತಿಪೂರ್ವಕ ನಮನ. ಯಾರೂ ಆತಂಕ ಪಡಲು ಕಾರಣವಿಲ್ಲ. ನಿಮ್ಮೆಲ್ಲರ ಆಶೀರ್ವಾದ ಇರುವತನಕ ನನಗೆ ಏನೂ ಆಗುವುದಿಲ್ಲ” ಎಂದು ದೊಡ್ಡಣ್ಣ ತಿಳಿಸಿದ್ದಾರೆ.
ದೊಡ್ಡಣ್ಣ ಆರೋಗ್ಯವಾಗಿ ಚೆನ್ನಾಗಿ ಇದ್ದಾರೆ..! ಅವರ ಕುರಿತ ಊಹಾಪೋಹದ ಸುದ್ದಿಗೆ ಅವರೇ ಸ್ಪಷ್ಟನೆ ನೀಡಿದ್ದಾರೆ.. pic.twitter.com/Dk6LAIZbD0
— Kannada Beatz (@kannadabeatz) May 5, 2021