ಪ್ರೀತಿ, ಭಾವನೆ, ನೆನಪುಗಳ ಮೇಲೆ ಸಾಗುವ ಚಿತ್ರ 'ಮರ್ಫಿ'!
ಮರ್ಫಿ” ಎಂಬ ರೊಮ್ಯಾಂಟಿಕ್ ಡ್ರಾಮಾಗಾಗಿ ಜೊತೆಯಾಗಿರುವ “ಊರ್ವಿ” ನಿರ್ದೇಶಕ ಬಿ ಎಸ್ ಪ್ರದೀಪ್ ವರ್ಮಾ ಮತ್ತು ನಟ ಪ್ರಭು ಮುಂಡ್ಕೂರ್ ಈಗಾಲೇ ಶೇ. 30 ರಷ್ಟು ಸಿನಿಮಾ ಶೂಟಿಂಗ್ ಪೂರ್ತಿ ಗೊಳಿಸಿದ್ದಾರೆ.
Published: 05th May 2021 12:48 PM | Last Updated: 30th September 2021 06:44 PM | A+A A-

ಪ್ರಭು ಮುಂಡ್ಕೂರ್ ಮತ್ತು ರೋಶಿನಿ ಪ್ರಕಾಶ್
'ಮರ್ಫಿ' ಎಂಬ ರೊಮ್ಯಾಂಟಿಕ್ ಡ್ರಾಮಾಗಾಗಿ ಜೊತೆಯಾಗಿರುವ “ಊರ್ವಿ” ನಿರ್ದೇಶಕ ಬಿ ಎಸ್ ಪ್ರದೀಪ್ ವರ್ಮಾ ಮತ್ತು ನಟ ಪ್ರಭು ಮುಂಡ್ಕೂರ್ ಈಗಾಲೇ ಶೇ. 30 ರಷ್ಟು ಸಿನಿಮಾ ಶೂಟಿಂಗ್ ಪೂರ್ತಿ ಗೊಳಿಸಿದ್ದಾರೆ.
ಮಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ ಉಳಿದ ಭಾಗದ ಶೂಟಿಂಗ್ ಅನ್ನು ಗೋವಾ ಸೇರಿದಂತೆ ಉಳಿದ ಭಾಗದಲ್ಲಿ ನಡೆಸಲು ತೀರ್ಮಾನಿಸಿದ್ದಾರೆ.
ಹೇಮಂತ್ ಎಂ ರಾವ್ ಅವರ ನಿರ್ದೇಶನದ ಕವಲು ದಾರಿ ಸಿನಿಮಾದಲ್ಲಿ ನಟಿಸಿದ್ದ ರೋಶಿನಿ ಪ್ರಕಾಶ್ ಮರ್ಫಿಯಲ್ಲಿ ಪ್ರಭು ಮುಂಡ್ಕೂರ್ ಗೆ ನಾಯಕಿಯಾಗಿದ್ದಾರೆ. ಈ ಮೊದಲು ನಿಶ್ವಿಕಾ ನಾಯ್ಡು ಆಯ್ಕೆಯಾಗಿದ್ದರು.
ಮರ್ಫಿ”ಗೆ ಪ್ರದೀಪ್ ವರ್ಮಾ ಚಿತ್ರಕಥೆ ಬರೆದಿದ್ದು ನಟ ಪ್ರಭು ಮುಂಡ್ಕೂರ್ ಸಹ ಚಿತ್ರಕಥೆ ತಯಾರಿಸಿದ್ದಾರೆ. ಏಪ್ರಿಲ್ 2 ರಂದು ಮಂಗಳೂರಿನಲ್ಲಿ ಸೆಟ್ಟೇರಿದ ಸಿನಿಮಾ ಏಪ್ರಿಲ್ 15 ರವರೆಗೆ ಮೊದಲ ಹಂತದ ಶೂಟಿಂಗ್ ಮುಗಿಸಿದೆ.
ಕಾಲೇಜಿನಲ್ಲಿ ಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಪೂರ್ಣಗೊಂಡಿದೆ. ಮೇ 3 ರಿಂದ ಪ್ರಾರಂಭವಾಗಬೇಕಿದ್ದ ಗೋವಾದಲ್ಲಿ ಶೂಟಿಂಗ್ ಅನ್ನು ಪುನರಾರಂಭಿಸಲು ನಾವು ಯೋಜಿಸಿದ್ದೆವು. ಈಗ, ಇದು ಸಾಂಕ್ರಾಮಿಕ ಪರಿಸ್ಥಿತಿಗೆ ಅನುಗುಣವಾಗಿ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಮುಂದೂಡಲ್ಪಟ್ಟಿದೆ ”ಎಂದು ನಟ ಪ್ರಭು ಮುಂಡ್ಕೂರ್ ಹೇಳಿದ್ದಾರೆ.
ಡೇವಿಡ್ ಮರ್ಫಿ ಎಂಬ ಪಾತ್ರದಲ್ಲಿ ಪ್ರಭು ನಟಿಸಿದ್ದಾರೆ. ದತ್ತಣ್ಣ ತನ್ನ ಅಜ್ಜ ರಿಚರ್ಡ್ ಪಾತ್ರವನ್ನು ನಿರ್ವಹಿಸಿದ್ದಾರೆ. 2 ಪಾತ್ರದಲ್ಲಿ ಪ್ರಭು ಮುಂಡ್ಕೂರ್ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ 2 ವಿಭಿನ್ನ ಟೈಮ್‌ಲೈನ್‌ಗಳಿವೆ.
ಚಿತ್ರ ಕಥೆ ಪ್ರೀತಿ ಭಾವನೆ ಮತ್ತು ನೆನಪುಗಳ ಮೇಲೆ ಸಾಗುತ್ತದೆ. "ಚಿತ್ರದ ಯುಎಸ್ಪಿ ಪ್ರೀತಿ ಮತ್ತು ಭಾವನೆಗಳು, ಮತ್ತು ನೆನಪುಗಳು ಹೇಗೆ ವ್ಯಕ್ತವಾಗುತ್ತವೆ. 150 ರಿಂದ 400 ವರ್ಷಗಳಷ್ಟು ಹಳೆಯದಾದ ಹಳೆಯ ರಚನೆಗಳ ಹಿನ್ನೆಲೆಯಲ್ಲಿ ನಾವು ಶೂಟ್ ಮಾಡಲು ಆಯ್ಕೆ ಮಾಡಿದ್ದೇವೆ, ಸಿನಿಮಾವನ್ನು ಗೌರಿ ಎಂಟರ್ಟೈನ್ ಮೆಂಟ್ಸ್ ಬ್ಯಾನರ್ ನಲ್ಲಿ ಸೋಮಣ್ಣ ನಿರ್ಮಾಣ ಮಾಡುತ್ತಿದ್ದಾರೆ.
ಮರ್ಫಿಯ ಸಂಭಾಷಣೆಗಳನ್ನು ನಿರ್ದೇಶಕ ನವೀನ್ ರೆಡ್ಡಿ ಬರೆದಿದ್ದು, ಛಾಯಾಗ್ರಾಹಕ ಆನಂದ್ ಸುಂದರೇಶ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.