ನಂದ ಕಿಶೋರ್- ಶ್ರೇಯಸ್ ಮಂಜು ಸಿನಿಮಾಗೆ 'ಚಂದನ್ ಶೆಟ್ಟಿ' ಸಂಗೀತ ಸಂಯೋಜನೆ

ಪಡ್ಡೆ ಹುಲಿ ನಾಯಕ ಶ್ರೇಯಸ್ ಮಂಜು ನಟಿಸುತ್ತಿರುವ ಸಿನಿಮಾವನ್ನು ನಂದಕಿಶೋರ್ ನಿರ್ದೇಶಿಸುತ್ತಿದ್ದು ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಚಂದನ್ ಶೆಟ್ಟಿ
ಚಂದನ್ ಶೆಟ್ಟಿ

ಪಡ್ಡೆ ಹುಲಿ ನಾಯಕ ಶ್ರೇಯಸ್ ಮಂಜು ನಟಿಸುತ್ತಿರುವ ಸಿನಿಮಾವನ್ನು ನಂದಕಿಶೋರ್ ನಿರ್ದೇಶಿಸುತ್ತಿದ್ದು ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಕೆಲ ವಾರಗಳ ಹಿಂದೆ ಸ್ಕ್ರಿಪ್ಟ್ ಪೂಜೆ ನಡೆದಿದ್ದು, ಈ ವಿಷಯವನ್ನು ಗುಜ್ಜಾಲ್ ಟಾಕೀಸ್ ಪ್ರೊಡಕ್ಷನ್ ಹೌಸ್ ಖಚಿತ ಪಡಿಸಿದೆ. ಪ್ರಸಿದ್ಧ ರ್ಯಾಪರ್ ಹಾಗೂ ಕಂಪೋಸರ್ ತಮ್ಮ ಸಿನಿಮಾಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಮೊದಲು ನಂದಕಿಶೋರ್ ನಿರ್ದೇಶನದ ಪೊಗರು ಸಿನಿಮಾಗೂ ಸಂಗೀತ ಸಂಯೋಜನೆ ಮಾಡಿದ್ದರು.

ಶ್ರೇಯಸ್ ಮಂಜು ತಮ್ಮ ಎರಡನೇ ಸಿನಿಮಾ ರಿಲೀಸ್ ಗಾಗಿ ಕಾಯುತ್ತಿದ್ದಾರೆ, ಪಿ.ಕೆ ಪ್ರಕಾಶ್ ನಿರ್ದೇಶನದ ವಿಷ್ಣಪ್ರಿಯಾ ರಿಲೀಸ್ ಆಗಬೇಕಿದೆ, ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಈ ಸಿನಿಮಾ ನಾಯಕಿಯಾಗಿದ್ದಾರೆ.

ಗುಜ್ಜಾಲ್ ಪುರುಷೋತ್ತಮ್ ನಿರ್ಮಾಣದ ಈ ಸಿನಿಮಾಗೆ ರೇಷ್ಮಾ ನಾಣಯ್ಯ ನಾಯಕಿಯಾಗಿದ್ದು ಮತ್ತೊಬ್ಬ ನಾಯಕಿಗಾಗಿ ಚಿತ್ರ ತಂಡ ಹುಡುಕಾಟ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com