'ಒಳಗೆ ಸೇರಿದರೆ ಗುಂಡು' ಹಾಡು ಖ್ಯಾತ ಚಿತ್ರಸಾಹಿತಿ ಶ್ರೀರಂಗ ಇನ್ನಿಲ್ಲ 

'ಒಳಗೆ ಸೇರಿದರೆ ಗುಂಡು,,,ಹುಡುಗಿಯಾಗುವಳು ಗಂಡು' ಮಾಲಾಶ್ರೀ ಅಭಿನಯದ ನಂಜುಂಡಿ ಕಲ್ಯಾಣ ಚಿತ್ರದ ಈ ಗೀತೆ ಇಂದಿಗೂ ಸಾಕಷ್ಟು ಜನಪ್ರಿಯ, ಈ ಗೀತೆಯ ಸಾಲುಗಳನ್ನು ಬರೆದ ಚಿತ್ರಸಾಹಿತಿ ಶ್ರೀರಂಗ ಇನ್ನಿಲ್ಲ.

Published: 10th May 2021 08:12 AM  |   Last Updated: 10th May 2021 08:12 AM   |  A+A-


Kannada cinema lyricist Shriranga

ಹಿರಿಯ ಚಿತ್ರಸಾಹಿತಿ ಶ್ರೀರಂಗ

Posted By : Sumana Upadhyaya
Source : Online Desk

ಬೆಂಗಳೂರು:'ಒಳಗೆ ಸೇರಿದರೆ ಗುಂಡು,,,ಹುಡುಗಿಯಾಗುವಳು ಗಂಡು' ಮಾಲಾಶ್ರೀ ಅಭಿನಯದ ನಂಜುಂಡಿ ಕಲ್ಯಾಣ ಚಿತ್ರದ ಈ ಗೀತೆ ಇಂದಿಗೂ ಸಾಕಷ್ಟು ಜನಪ್ರಿಯ, ಈ ಗೀತೆಯ ಸಾಲುಗಳನ್ನು ಬರೆದ ಚಿತ್ರಸಾಹಿತಿ ಶ್ರೀರಂಗ ಇನ್ನಿಲ್ಲ.

86 ವರ್ಷ ವಯಸ್ಸಾಗಿದ್ದ ಶ್ರೀರಂಗ ಅವರು ನಿನ್ನೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದು, ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಜಟಕಾ ಕುದುರೆ ಹತ್ತಿ ಪ್ಯಾಟಗ್ ಹೋಗುಮಾ, ರಂಭೆ ನೀ ವಯ್ಯಾರದ ಗೊಂಬೆ, ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ, ಸುಮ್ ಸುಮ್ನೆ ಓಳ್ ಬಿಡೋ ಸುಂದರಿ ಸೇರಿದಂತೆ ಸಾಕಷ್ಟು ಸಾವಿರಕ್ಕೂ ಹೆಚ್ಚು ಚಿತ್ರಗೀತೆಗಳನ್ನು, ಕೆಲವು ಚಿತ್ರಗಳಿಗೆ ಸಂಭಾಷಣೆ-ಸಾಹಿತ್ಯವನ್ನು ಬರೆದಿದ್ದರು.

ಕಳೆದ ಕೆಲ ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀರಂಗ ಅವರು ನಿನ್ನೆ ಕೊನೆಯುಸಿರೆಳೆದಿದ್ದಾರೆ. 


Stay up to date on all the latest ಸಿನಿಮಾ ಸುದ್ದಿ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp