ಉಪೇಂದ್ರ
ಉಪೇಂದ್ರ

ಲಾಕ್‌ಡೌನ್ ಸಂಕಷ್ಟ: ಚಿತ್ರೋದ್ಯಮದ ಕಾರ್ಮಿಕರು, ಕಲಾವಿದರ ಕುಟುಂಬಕ್ಕೆ ನಟ ಉಪೇಂದ್ರ ನೆರವು

ಕೊರೋನಾ ಸೋಂಕು ಕಾರಣ ಜಾರಿಯಲ್ಲಿರುವ ಲಾಕ್ ಡೌನ್ ಪರಿಣಾಮ ಸಿನಿನಿಮಾ ಚಿತ್ರೀಕರಣ ಸ್ಥಗಿತವಾಗಿದೆ. ಇದರಿಂದಾಗಿ ಕನ್ನಡ ಚಲನಚಿತ್ರ ರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೇ ಸಂಕಷ್ತದಲ್ಲಿದ್ದಾರೆ. ಈ ವೇಳೆ ರಿಯಲ್ ಸ್ಟಾರ್ ಉಪೇಂದ್ರ ಅಂತಹಾ ಕಲಾವಿದರು, ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಉಪೇಂದ್ರ "ಕನ್ನಡ ಚಲನಚಿತ್ರ ರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೇ ಕೋವಿಡ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಈ ಕಾರಣ, ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ಅಭಿಮಾನಿಗಳ ಆಶೀರ್ವಾದದಿಂದ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದೇನೆ. ವಿತರಣೆ ಬಗ್ಗೆ ತಮ್ಮ ತಮ್ಮ ಸಂಘದ ಮುಖ್ಯಸ್ತರನ್ನು ಸಂಪರ್ಕಿಸಿ. ನಿಮ್ಮ ಉಪ್ಪಿ" ಎಂದಿದ್ದಾರೆ.

ಇದಕ್ಕೂ ಮುನ್ನ ಹಿರಿಯ ನಟಿ ಲೀಲಾವತಿ, ವಿನೋದ್ ರಾಜ್ ಕುಮಾರ್ ಸಹ ಕನ್ನಡ ಚಿತ್ರರಂಗದ ನೂರಾರು ಕಾರ್ಮಿಕರಿಗೆ ನೆರವು ನೀಡಿದ್ದರು. ಬೆಂಗಳೂರಿನ ಸುಮ್ಮನಹಳ್ಳಿಯ  ಸಮೀಪ ಕಲಾವಿದರ ಕುಟುಂಬಗಳಿಗೆ 14 ದಿನಕ್ಕೆ ಆಗುವಷ್ಟು ದಿನಸಿ ಕಿಟ್ ವಿತರಣೆ ಮಾಡಿ ಹಿರಿಯ ಕಲಾವಿದೆ ಮಾನವೀಯತೆ ಮೆರೆದಿದ್ದರು.

Related Stories

No stories found.

Advertisement

X
Kannada Prabha
www.kannadaprabha.com