ಇದು ನಮ್ಮೆಲ್ಲರ ಜವಾಬ್ದಾರಿ: ಕೊರೋನಾ ಲಸಿಕೆ ಪಡೆದ ಶ್ರೀಮುರುಳಿ ಪೋಸ್ಟ್

ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದ ನಟ ಶ್ರೀ ಮುರುಳಿಯವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.
ಲಸಿಕೆ ತೆಗೆದುಕೊಂಡ ಶ್ರೀಮುರುಳಿ
ಲಸಿಕೆ ತೆಗೆದುಕೊಂಡ ಶ್ರೀಮುರುಳಿ

ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದ ನಟ ಶ್ರೀ ಮುರುಳಿಯವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.

ಲಸಿಕೆ ಪಡೆಯುತ್ತಿರುವ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ಮೊದಲ ವಾಕ್ಸಿನೇಶನ್ ಆಯ್ತ. ಆಗದೆ ಇರುವವರು ತಡ ಮಾಡಬೇಡಿ. ನಿಮ್ಮ ವಾಕ್ಸಿನೇಶನ್ ಮುಗಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ. ಕೊರೊನಾ ವಾರಿಯರ್ಸ್‍ಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ  39 ವರ್ಷದ ಶ್ರೀಮುರುಳಿ ಲಸಿಕೆ ಪಡೆದಿದ್ದಾರೆ.

ನಟಿ ಆಶಿಕಾ ರಂಗನಾಥ್ ಕೂಡ ತಾವು ಲಸಿಕೆ ಹಾಕಿಸಿಕೊಂಡ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು, ''ಎಲ್ಲರೂ ಲಸಿಕೆ ಹಾಕಿಸಿಕೊಳ್ಳೋಣ'' ಎಂದಿದ್ದಾರೆ. 

ಕೋವಿಡ್ -19 ವಿರುದ್ಧ ರೋಗನಿರೋಧಕ ಶಕ್ತಿ ಪಡೆಯಲು ವೈದ್ಯರು ಜನರಿಗೆ ಸಲಹೆ ನೀಡುತ್ತಿದ್ದಾರೆ, ವೈದ್ಯರ ಸಲಹೆಯ ಮೇರೆಗೆ ಹೋಗುವುದು ಉತ್ತಮ. ನಾನು ಇದನ್ನು ಸಾಮಾಜಿಕ ಜವಾಬ್ದಾರಿಯೆಂದು ಪರಿಗಣಿಸುತ್ತೇನೆ ಮತ್ತು ಸಮಾಜದ ಯೋಗಕ್ಷೇಮಕ್ಕಾಗಿ ನಾವು ಬದ್ಧರಾಗಿರಬೇಕು ಎಂದು ಅವರು ಹೇಳಿದ್ದಾರೆ.

ಜನರು ತಮ್ಮ ಸರದಿ ಬಂದಾಗ ಲಸಿಕೆ ಬಗ್ಗೆ ಭಯಪಡಬೇಡಿ ಮತ್ತು ಹಿಂಜರಿಯಬೇಡಿ ಎಂದು ಶ್ರೀಮುರುಳಿ ಮನವಿ ಮಾಡಿದ್ದಾರೆ. ನನ್ನ ಹೆಂಡತಿ (ವಿದ್ಯಾ) ಮತ್ತು ನಾನು ಲಸಿಕೆ ತೆಗೆದುಕೊಂಡಿದ್ದೇವೆ ಮತ್ತು ನಮ್ಮ ದೇಹಗಳು ಇದಕ್ಕೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿವೆ. ತೀವ್ರವಾದ ವ್ಯಾಯಾಮದ ನಂತರ ಒಬ್ಬರು ಅನುಭವಿಸುವ ದೇಹದ ನೋವಿನಂತೆ ಇರುತ್ತದೆ ಎಂದು ತಿಳಿಸಿದ್ದಾರೆ.

ಯೋಗ, ಉಸಿರಾಟದ ವ್ಯಾಯಾಮ, ಉತ್ತಮ ಆಹಾರವನ್ನು ಸೇವಿಸಿ ಮತ್ತು ಸಾಕಷ್ಟು ನೀರು ಕುಡಿಯಬೇಕೆಂದು ಸೂಚಿಸುತ್ತದೆ.  ವದಂತಿಗಳಿಂದ ದೂರವಿರಬೇಕು ಮತ್ತು ರೋಗನಿರೋಧಕ ಶಕ್ತಿಯನ್ನು ಬೆಳೆಸುವತ್ತ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.

ಮದಗಜ ಚಿತ್ರೀಕರಣದ ವೇಳೆ ಫೈಟಿಂಗ್ ಸನ್ನಿವೇಶದ ಶೂಟಿಂಗ್ ವೇಳೆ ಶ್ರೀಮುರುಳಿ ಕಾಲಿಗೆ ಪೆಟ್ಟಾಗಿದ್ದು, ಈಗ ಗಾಯ ವಾಸಿಯಾಗುತ್ತಿದೆ. ವೈದ್ಯರು ನನ್ನ ಗಾಯಕ್ಕೆ ಸರ್ಜರಿ ಅವಶ್ಯಕತೆಯಿಲ್ಲ ಎಂದು ಹೇಳಿದ್ದರು.  ಮೂರುವಾರ ವಿಶ್ರಾಂತಿಯಲ್ಲಿದ್ದೆ, ಲಾಕ್ ಡೌನ್ ಕೂಡ ನನಗೆ ಸಹಾಯ ಮಾಡಿತು ಎಂದು ಶ್ರೀ ಮುರುಳಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com