ನನಗೆ ಮುದ್ದಾದ ಬಬ್ಲಿ ಪಾತ್ರಗಳಲ್ಲಿ ಅಭಿನಯಿಸಲು ಇಷ್ಟ: ನಟಿ ಮೇಘಾ ಶೆಟ್ಟಿ

ಕೋವಿಡ್ ಲಾಕ್‌ಡೌನ್ ಇರುವ ಸಮಯದಲ್ಲಿ ನಟಿ ಮೇಘಾ ಶೆಟ್ಟಿ ಮಾತ್ರ ತಮ್ಮ ಚಿತ್ರೀಕರಣದ ಸೆಟ್ ಗಳ ಸ್ಮರಣೆಯಲ್ಲಿದ್ದಾರೆ. ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಹಾಗೂ ಅವರ ಚೊಚ್ಚಲ ಸಿನಿಮಾ ತ್ರಿಬಲ್ ರೈಡಿಂಗ್ ನ ಶೂಟಿಂಗ್ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

Published: 13th May 2021 10:57 AM  |   Last Updated: 13th May 2021 12:02 PM   |  A+A-


ಮೇಘಾ ಶೆಟ್ಟಿ

Posted By : Raghavendra Adiga
Source : The New Indian Express

ಕೋವಿಡ್ ಲಾಕ್‌ಡೌನ್ ಇರುವ ಸಮಯದಲ್ಲಿ ನಟಿ ಮೇಘಾ ಶೆಟ್ಟಿ ಮಾತ್ರ ತಮ್ಮ ಚಿತ್ರೀಕರಣದ ಸೆಟ್ ಗಳ ಸ್ಮರಣೆಯಲ್ಲಿದ್ದಾರೆ. ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಹಾಗೂ ಅವರ ಚೊಚ್ಚಲ ಸಿನಿಮಾ ತ್ರಿಬಲ್ ರೈಡಿಂಗ್ ನ ಶೂಟಿಂಗ್ ಬಗ್ಗೆ ಇಲ್ಲಿ ಮಾತನಾಡಿದ್ದಾರೆ. ಏಪ್ರಿಲ್ 19 ರಿಂದ ಶೂಟಿಂಗ್ ನಿಂತಿದ್ದಾಗಲೂ ಪ್ರೇಕ್ಷಕರನ್ನು ರಂಜಿಸಲು ಶೀಘ್ರದಲ್ಲೇ ಮರಳುವ ನಿರೀಕ್ಷೆಯಲ್ಲಿದ್ದಾರೆ. "ಪರಿಸ್ಥಿತಿಯು ಪ್ರತಿಯೊಬ್ಬರೂ ಮನೆಯಲ್ಲಿಯೇ ಇರುವಂತೆ ಮಾಡಿದೆ. ಏಕೆಂದರೆ ಅದು ಆರೋಗ್ಯಕ್ಕೆ ಸಂಬಂಧಿಸಿದ ಅತಿಮುಖ್ಯ ಸಂಗತಿ ಖಂಡಿತವಾಗಿಯೂ ನಾನು ಸೆಟ್‌ ಗಳನ್ನು ತಪ್ಪಿಸಿಕೊಳ್ಳುತ್ತಿದ್ದೇನೆ. ಮತ್ತದು  ನನ್ನ ಪಾಲಿಗೆ ಎರಡನೇ ಮನೆಯಾಗಿದೆ" ಎಂದಿದ್ದಾರೆ.

ತ್ರಿಬಲ್ ರೈಡಿಂಗ್ ಗಾಗಿ ಒಂದು ಹಾಡಿನ ಚಿತ್ರೀಕರಣ ಉಳಿಸಿಕೊಂಡಿರುವ  ಮೇಘಾ, ತನ್ನ ಮೊದಲ ಚಿತ್ರದ ಚಿತ್ರೀಕರಣ ಅದರಲ್ಲಿಯೂ ಗಣೇಶ್ ಎದುರು ನಟಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. "ಸಿನಿಮಾಗಾಗಿ ಶೂಟಿಂಗ್ ಮಾಡುವುದು ಬಹಳ ವಿಭಿನ್ನವಾದ ಅನುಭವ, ಮತ್ತು ಅದೃಷ್ಟವಶಾತ್, ನಾನು ಉತ್ತಮ ತಂಡದೊಂದಿಗೆ ಕೆಲಸ ಮಾಡಲು ಸಾಧ್ಯವಾಗಿದೆ. ಗಣೇಶ್ ಮತ್ತು ನಿರ್ದೇಶಕ ಮಹೇಶ್ ಗೌಡ ಸೇರಿದಂತೆ ಎಲ್ಲರೂ ನನಗೆ ಮಾರ್ಗದರ್ಶಕರಾಗಿದ್ದಾರೆ" ಎಂದರು.

ತ್ರಿಬಲ್ ರೈಡಿಂಗ್ ಒಂದು ಕಾಮಿಡಿ, ಆಕ್ಷನ್ ಮತ್ತು ಎಮೋಷನ್ ಗಳ ಮಿಶ್ರಣ ಮತ್ತು ಇದು ಒಟ್ಟಾರೆ ಫ್ಯಾಮಿಲಿ ಎಂಟರ್ಟೈನರ್ ಆಗಿದೆ ಎಂದು ಅವರು ಹೇಳುತ್ತಾರೆ.

ಧಾರಾವಾಹಿಯಲ್ಲಿ ಕೆಲಸ ಮಾಡುವ ಅನುಭವವಿರುವ ನಟಿಗೆ ಬೆಳ್ಳಿಪರದೆಯ  ಅಭಿನಯ ಸುಲಭವಾಗಿದೆಯೆ? ಎಂದರೆ ನಟಿ ಅದನ್ನು ಹೌದು ಎಂದು ಒಪ್ಪಿಕೊಂಡಿದ್ದಾರೆ. "ಜೊತೆ ಜೊತೆಯಲಿ ಯಂತಹಾ ಧಾರಾವಾಹಿಯಲ್ಲಿ ಕೆಲಸ ಮಾಡುವುದರಿಂದ ನನ್ನ ಚೊಚ್ಚಲ ಚಿತ್ರದಲ್ಲಿ ಉತ್ತಮ ಅಭಿನಯ ನೀಡಲು ಸಾಧ್ಯವಾಗಿದೆ. ಧಾರಾವಾಹಿಗಳಲ್ಲಿ, ನಾವು 10 ರಿಂದ 12 ದೃಶ್ಯಗಳನ್ನು ಒಳಗೊಂಡಿರುವ ಒಂದು ಸಂಚಿಕೆಯನ್ನು ಮಾಡುತ್ತೇವೆ. ಆದರೆ ಸಿನಿಮಾಗಳಲ್ಲಿ ಇದು ತದ್ವಿರುದ್ಧವಾಗಿದೆ. ಆದ್ದರಿಂದ ನಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಾಕಷ್ಟು ಸಮಯ ಮತ್ತು ಅವಕಾಶದೆ" ಅವರು ಹೇಳುತ್ತಾರೆ.


Stay up to date on all the latest ಸಿನಿಮಾ ಸುದ್ದಿ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp