ನಟಿ ಕವಿತಾ ಗೌಡ ಮತ್ತು ನಟ ಚಂದನ್ ಕುಮಾರ್ ಸರಳ ವಿವಾಹ; ಮಾಸ್ಕ್ ಧರಿಸಿಯೇ ಸಪ್ತಪದಿ ತುಳಿದ ಜೋಡಿ!

ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಸೂಪರ್ ಜೋಡಿ ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಗೌಡ ಸರಳವಾಗಿ ಸಪ್ತಪದಿ ತುಳಿದು, ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. 

Published: 15th May 2021 08:13 AM  |   Last Updated: 15th May 2021 01:00 PM   |  A+A-


Kavitha gowda chandan wedding

ಕವಿತಾಗೌಡ ಚಂದನ್ ವಿವಾಹ

Posted By : Shilpa D
Source : Online Desk

ಬೆಂಗಳೂರು: ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಸೂಪರ್ ಜೋಡಿ ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಗೌಡ ಸರಳವಾಗಿ ಸಪ್ತಪದಿ ತುಳಿದು, ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. 

ಚಂದನ್ ಮತ್ತು ಕವಿತಾ ಮಾಸ್ಕ್‌ ಧರಿಸಿಯೇ ಮದುವೆಯಾಗಿದ್ದು ವಿಶೇಷವಾಗಿತ್ತು. ಬೆಂಗಳೂರಿನ ಸಹಕಾರ ನಗರದಲ್ಲಿರುವ ಚಂದನ್ ಮನೆಯಲ್ಲಿ ಈ ಮದುವೆ ನೆರವೇರಿದೆ.

ಕೊರೋನಾ ಲಾಕ್‌ಡೌನ್ ಇರುವುರಿಂದ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ, ಕೋವಿಡ್ ನಿಯಮಗಳ ಅನ್ವಯದಂತೆ ಚಂದನ್‌ ಮತ್ತು ಕವಿತಾ ಅವರ ವಿವಾಹವು ಸರಳವಾಗಿ ನಡೆದಿದೆ. ಏಪ್ರಿಲ್ 1 ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಚಂದನ್ ಮತ್ತು ಕವಿತಾ ಅವರ ನಿಶ್ಚಿತಾರ್ಥ ಕಾರ್ಯಕ್ರಮವು ನೆರವೇರಿತ್ತು.


Stay up to date on all the latest ಸಿನಿಮಾ ಸುದ್ದಿ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp