ಕೊರೋನಾ ಸಂಕಷ್ಟ: ರೈತರಿಂದ ಟೊಮ್ಯಾಟೊ ಖರೀದಿಸಿದ ಉಪ್ಪಿ; ವನ್ಯಜೀವಿ ದತ್ತು ಪಡೆದ ಧನ್ವೀರ್!

ಕೊರೋನಾ ಸಂಕಷ್ಟ ಕಾಲದಲ್ಲಿ ತಮ್ಮ ಬೆಳೆಗಳನ್ನು ಮಾರಲು ಸೂಕ್ತ ಮಾರುಕಟ್ಟೆ ಸಿಗದೇ ಕಷ್ಟಪಡುತ್ತಿರುವ ರೈತರ ಬೆಳೆಗಳನ್ನು ಕೊಂಡು ನೆರವು ನೀಡುತ್ತೇವೆ ಎಂದು ಘೋಷಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.
ಉಪೇಂದ್ರ-ಧನ್ವೀರ್
ಉಪೇಂದ್ರ-ಧನ್ವೀರ್

ಬೆಂಗಳೂರು: ಕೊರೋನಾ ಸಂಕಷ್ಟ ಕಾಲದಲ್ಲಿ ತಮ್ಮ ಬೆಳೆಗಳನ್ನು ಮಾರಲು ಸೂಕ್ತ ಮಾರುಕಟ್ಟೆ ಸಿಗದೇ ಕಷ್ಟಪಡುತ್ತಿರುವ ರೈತರ ಬೆಳೆಗಳನ್ನು ಕೊಂಡು ನೆರವು ನೀಡುತ್ತೇವೆ ಎಂದು ಘೋಷಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.

ಮೊದಲ ದಿನವೇ ರೈತರೊಬ್ಬರು ಬೆಳೆದ ಟೊಮ್ಯಾಟೋಗಳನ್ನು ಖರೀದಿಸಿ ಅದನ್ನು ದಿನಸಿ ಕಿಟ್ ನಲ್ಲಿ ಸೇರಿಸಿ ಬಡವರಿಗೆ ಹಂಚಿದ್ದಾರೆ. ಜೊತೆಗೆ ತೀವ್ರ ಸಂಕಷ್ಟದಲ್ಲಿರುವ ರೈತರು ಮಾತ್ರ ಸಂಪರ್ಕಿಸಿ. ಏಕೆಂದರೆ ಇದು ಲಾಭಕ್ಕಾಗಿ ಮಾಡುತ್ತಿರುವ ವ್ಯಾಪಾರ ಅಲ್ಲ ಎಂದು ಉಪೇಂದ್ರ ಮನವಿಯನ್ನೂ ಮಾಡಿದ್ದಾರೆ. ಈಗಾಗಲೇ ಹಲವು ರೈತರು ಉಪೇಂದ್ರರನ್ನು ಸಂಪರ್ಕಿಸುತ್ತಿದ್ದಾರಂತೆ.

ಕೊರೋನಾ ಕಾಲದಲ್ಲಿ ವನ್ಯಜೀವಿ ದತ್ತು ಪಡೆದ ನಟ ಧನ್ವೀರ್
ಕೊರೋನಾ ಸಂಕಷ್ಟ ಕಾಲದಲ್ಲಿ ಸ್ಯಾಂಡಲ್ ವುಡ್ ನಟರು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಸಂಕಷ್ಟದಲ್ಲಿರುವವರ ನೆರವಿಗೆ ಕೈಜೋಡಿಸಿದ್ದಾರೆ.

ಈ ನಡುವೆ ಯುವ ನಟ ಧನ್ವೀರ್ ಗೌಡ ವನ್ಯ ಜೀವಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಶಿವಮೊಗ್ಗ ಮೃಗಾಲಯದಲ್ಲಿನ ಎರಡು ಚಿರತೆಗಳನ್ನು ದತ್ತು ಪಡೆದಿರುವ ಧನ್ವೀರ್ ಅವುಗಳ ಪೋಷಣೆ ಜವಾಬ್ಧಾರಿ ಹೊತ್ತುಕೊಂಡಿದ್ದಾರೆ. ಕಳೆದ ವರ್ಷವೂ ಧನ್ವೀರ್ ಪ್ರಾಣಿಗಳ ದತ್ತು ಪಡೆಯುವ ಮೂಲಕ ಸುದ್ದಿಯಾಗಿದ್ದರು. ಈ ವರ್ಷವೂ ಮತ್ತೆ ಲಾಕ್ ಡೌನ್ ವೇಳೆ ಅವುಗಳ ರಕ್ಷಣೆಗೆ ಮುಂದಾಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com