ಶ್ರುತಿ ಪ್ರಕಾಶ್
ಶ್ರುತಿ ಪ್ರಕಾಶ್

ಕನ್ನಡದಲ್ಲಿ ಇದೇ ಮೊದಲು; 'ಕಂಪ್ಯೂಟರ್ ಸ್ಕ್ರೀನ್' ಪರಿಕಲ್ಪನೆಯ ಪ್ರಯೋಗಾತ್ಮಕ ಚಿತ್ರ!

ಲವ್ ಇನ್ ದಿ ಟೈಮ್ ಆಫ್ ಕೋವಿಡ್ ಚಿತ್ರ ರೊಮ್ಯಾಂಟಿಕ್ ಮತ್ತು ಹಾಸ್ಯ ಮಿಶ್ರಿತ ಒಂದು ರೀತಿಯ ಪ್ರಯೋಗವಾಗಿದೆ. 

ಇಂದು ಜಗತ್ತಿನಲ್ಲಿ ಟೆಕ್ನಾಲಜಿ ತುಂಬಾ ಮುಂದುವರೆದಿದ್ದು ಎಲ್ಲಿ ಬೇಕಾದರೂ ಕುಳಿತು ತಮ್ಮ ಆಪ್ತರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಬಹುದು. ಇದೇ ಪರಿಕಲ್ಪನೆ ಇಟ್ಟುಕೊಂಡು ನಿರ್ದೇಶಕ ಜಯಂತ್ ಸೀಗೆ ಎಸ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 

ಚಿತ್ರದಲ್ಲಿ ಮಾಜಿ ಬಿಗ್ ಬಾಸ್ ಕನ್ನಡದ ಸ್ಪರ್ಧಿ, ನಟಿ ಮತ್ತು ಗಾಯಕ ಶ್ರುತಿ ಪ್ರಕಾಶ್ ಮತ್ತು ರಾಕೇಶ್ ಮೈಯಾ ನಟಿಸಿದ್ದಾರೆ. ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಲಾಕ್‌ಡೌನ್ ಸಮಯದಲ್ಲಿನ ರೋಮ್‌-ಕಾಮ್ ಸರ್ಚಿಂಗ್‌ನಿಂದ ಸ್ಫೂರ್ತಿ ಪಡೆಯಲಾಗಿದೆ ಹಾಗೂ ಕಂಪ್ಯೂಟರ್ ಸ್ಕ್ರೀನ್ ಪರಿಕಲ್ಪನೆಯನ್ನು ಬಳಸಿ ಚಿತ್ರ ನಿರ್ಮಿಸಲಾಗಿದೆ. ಇಂತಹ ಪರಿಕಲ್ಪನೆಯಲ್ಲಿ ಮಲಯಾಳಂನಲ್ಲಿ ಸಿ ಯು ಸೂನ್ ಚಿತ್ರ ನಿರ್ಮಾಣವಾಗಿತ್ತು. ಇದು ಕ್ರೈಂ-ಥ್ರಿಲ್ಲರ್ ಆಗಿತ್ತು. ಆದರೆ ನಾನು ರೊಮ್ಯಾನ್ಸ್ ಮತ್ತು ಹಾಸ್ಯಕ್ಕೆ ಬಳಸಿಕೊಂಡಿದ್ದೇನೆ ಎಂದು ನಿರ್ದೇಶಕ ಜಯಂತ್ ಸೀಗೆ ಹೇಳಿದ್ದಾರೆ. 

ಚಿತ್ರದಲ್ಲಿ ಬರುವ ಶ್ರುತಿ ಪ್ರಕಾಶ್ ಮತ್ತು ರಾಕೇಶ್ ಮೈಯಾ ಮಾಜಿ ಕಾಲೇಜು ಸಹಪಾಠಿಗಳು, ಅವರು ಸಾಂಕ್ರಾಮಿಕ ಸಮಯದಲ್ಲಿ ವಾಸ್ತವ ಸಭೆಯ ನಂತರ ತಮ್ಮ ಪ್ರಣಯವನ್ನು ಪುನರುಜ್ಜೀವನಗೊಳಿಸುತ್ತಾರೆ. ಲಾಕ್‌ಡೌನ್ ಅವರ ಸಂಬಂಧದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಕಥೆಯ ತಿರುಳು. ನಟ-ನಟಿ ಮುಖಾಮುಖಿಯಾಗದೆ ಇಡೀ ಸಂಚಿಕೆಯನ್ನು ಪ್ರತ್ಯೇಕವಾಗಿ ಚಿತ್ರೀಕರಿಸಲಾಗಿದೆ. ಲಾಕ್‌ಡೌನ್ ಸಮಯದಲ್ಲಿ ಕಥೆ ನಡೆಯುವುದರಿಂದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚಿತ್ರೀಕರಿಸಲಾಗದೆ ಎಂದರು. 

ಪ್ರಮುಖ ನಟರಲ್ಲದೆ, ಚಿತ್ರದ ಪಾತ್ರವರ್ಗದಲ್ಲಿ ಅಪೂರ್ವ ಭಾರದ್ವಾಜ್, ಗೌತಮ್ ಎಚ್‌ಸಿ, ಶಂಕರ್ ಮೂರ್ತಿ, ಶ್ರವಣ್ ಐಥಾಲ್, ಮತ್ತು ಪವನ್ ವೇಣುಗೋಪಾಲ್ ಕೂಡ ನಟಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಚಿತ್ರಕ್ಕೆ ಭರತ್ ಬಿ ಜೆ ಸಂಗೀತ ಸಂಯೋಜಿಸಿದ್ದಾರೆ. ಪ್ರದೀಪ್ ಬಿ ರೆಡ್ಡಿ ಛಾಯಾಗ್ರಾಹಣವಿದೆ.

Related Stories

No stories found.

Advertisement

X
Kannada Prabha
www.kannadaprabha.com