ಅಜ್ಜಿಯ ಆಟಕ್ಕೆ ಮನಸೋತ ಕಿಚ್ಚ ಸುದೀಪ್!

ಅಜ್ಜಿಯೊಬ್ಬರು ಆಟವಾಡುವ ವಿಡಿಯೋವೊಂದನ್ನು ನಟ ಕಿಚ್ಚ ಸುದೀಪ್ ಮೆಚ್ಚಿದ್ದು, ವಿಡಿಯೋ ಪ್ರಕಟಿಸಿದ ಅಭಿಮಾನಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸುದೀಪ್
ಸುದೀಪ್

ಬೆಂಗಳೂರು: ಅಜ್ಜಿಯೊಬ್ಬರು ಆಟವಾಡುವ ವಿಡಿಯೋವೊಂದನ್ನು ನಟ ಕಿಚ್ಚ ಸುದೀಪ್ ಮೆಚ್ಚಿದ್ದು, ವಿಡಿಯೋ ಪ್ರಕಟಿಸಿದ ಅಭಿಮಾನಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇಳಿವಯಸ್ಸಿನ ತನ್ನ ಅಜ್ಜಿ ಬಾಲ್ ಸ್ಟ್ರೈಕಿಂಗ್ ಮಾಡುವ ವಿಡಿಯೋವನ್ನು ಅಭಿಮಾನಿಯೊಬ್ಬರು ಪ್ರಕಟಿಸಿದ್ದರು. ಈ ಇಳಿವಯಸ್ಸಿನಲ್ಲೂ ಅಷ್ಟು ಉತ್ಸಾಹದಲ್ಲಿ ಸೀರೆ ಉಟ್ಟುಕೊಂಡು, ಮಾಸ್ಕ್ ಧರಿಸಿ ಅಜ್ಜಿ ಆಡುವುದನ್ನು ನೋಡಿದ ಕಿಚ್ಚ ಕ್ಲೀನ್ ಬೋಲ್ಡ್ ಆಗಿದ್ದಾರೆ.

‘ಜೀವನದ ಪರಿಪೂರ್ಣತೆ ಎಂದರೆ ಇದು, ಸಂತೋಷ ಎಂದರೆ ಇದು, ಶಕ್ತಿ ಎಂದರೆ ಇದು. ಇದುವೇ ನಮಗೆ ಮಾದರಿ. ಆಕೆಗೆ ಇನ್ನಷ್ಟು ಆಯುರಾರೋಗ್ಯ ಸಿಗಲಿ’ ಎಂದು ಸುದೀಪ್ ಮನತುಂಬಿ ಹಾರೈಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com