ನಟ ದಿಗಂತ್, ಸೃಜನ್ ಗೆ ಸಿಗುವ ಲಸಿಕೆ ನಮಗೇಕೆ ಇಲ್ಲ: ನೆಟ್ಟಿಗರ ಪ್ರಶ್ನೆ

ರಾಜ್ಯ ಸರ್ಕಾರ ಕೊರೋನಾ ವಿರುದ್ಧ ಲಸಿಕೆ ನೀಡುತ್ತಿದೆಯಾದರೂ, 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡುವುದಕ್ಕೆ ತಾತ್ಕಾಲಿಕ ತಡೆ ನೀಡಿದೆ. ಆದಾಗ್ಯೂ ಕೆಲವು ಸೆಲೆಬ್ರಿಟಿಗಳು ಲಸಿಕೆ ಪಡೆಯುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

Published: 20th May 2021 03:52 PM  |   Last Updated: 20th May 2021 06:00 PM   |  A+A-


Diganth-Srujan

ದಿಗಂತ್-ಸೃಜನ್

Posted By : Vishwanath S
Source : UNI

ಬೆಂಗಳೂರು: ರಾಜ್ಯ ಸರ್ಕಾರ ಕೊರೋನಾ ವಿರುದ್ಧ ಲಸಿಕೆ ನೀಡುತ್ತಿದೆಯಾದರೂ, 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡುವುದಕ್ಕೆ ತಾತ್ಕಾಲಿಕ ತಡೆ ನೀಡಿದೆ. ಆದಾಗ್ಯೂ ಕೆಲವು ಸೆಲೆಬ್ರಿಟಿಗಳು ಲಸಿಕೆ ಪಡೆಯುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ನಟ ಸೃಜನ್ ಲೋಕೇಶ್ ಬುಧವಾರ ತಮ್ಮ ತಂದೆ, ಹಿರಿಯ ನಟ ದಿವಂಗತ ಲೋಕೇಶ್ ಜನ್ಮದಿನದಂದು ಸ್ಮರಣೀಯವಾಗಿರಲೆಂದು ಲಸಿಕೆ ಪಡೆದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.

ಸೃಜನ್ ಇಂತಹದ್ದೊಂದು ಫೋಟೋ ಹಾಕಿದ ತಕ್ಷಣವೇ ಹಲವರು ನಿಮಗೆ ಲಸಿಕೆ ಹೇಗೆ ಸಿಕ್ಕಿತು ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಇದಕ್ಕೆ ಸೃಜನ್ ಸ್ಪಷ್ಟನೆ ನೀಡಿಲ್ಲ. ಇದಕ್ಕೂ ಮೊದಲು ನಟಿ ಚೈತ್ರಾ ವಾಸುದೇವನ್ ಲಸಿಕೆ ಪಡೆದು ಕೊನೆಗೆ ತಾವು ಮೀಡಿಯಾ ಫ್ರಂಟ್ ಲೈನರ್ ಎಂಬ ಕಾರಣಕ್ಕೆ ಲಸಿಕೆ ಸಿಕ್ಕಿದೆ ಎಂದು ಸ್ಪಷ್ಟನೆಯಿತ್ತಿದ್ದರು.

ಇದಕ್ಕೂ ಮುನ್ನ ನಟ ದಿಗಂತ್-ಐಂದ್ರಿತಾ ಜೋಡಿ ಕೂಡಾ ಲಸಿಕೆ ಪಡೆದು, ನಮ್ಮ ಊರಿನಲ್ಲಿ ಹೆಚ್ಚು ಜನರಿರದ ಕಾರಣ ನಮಗೆ ಲಸಿಕೆ ಸಿಕ್ಕಿದೆ ಎಂದು ಸ್ಪಷ್ಟನೆ ಕೊಟ್ಟಿದ್ದರು. ಇದೀಗ ಸೃಜನ್ ಕೂಡಾ ವಿವಾದಕ್ಕೆ ಸಿಲುಕಿದ್ದಾರೆ.

ಅಲ್ಲದೆ ಸೆಲಿಬ್ರಿಟಿಗಳ ಪ್ರಾಣ ಮಾತ್ರ ಮುಖ್ಯವೇ? ನಮ್ಮ ಪ್ರಾಣಕ್ಕೆ ಬೆಲೆಯಿಲ್ಲವೇ ಎಂದು ವ್ಯವಸ್ಥೆಯ ವಿರುದ್ಧ ಕಿಡಿಕಾರುತ್ತಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp