'ದಿಯಾ' ಕಾರಣದಿಂದ ನಾನು ತೆಲುಗು ಚಿತ್ರರಂಗದಲ್ಲಿ ಅವಕಾಶ ಪಡೆದೆ: ನಟ ಧೀಕ್ಷಿತ್ ಶೆಟ್ಟಿ

ಕೆ.ಎಸ್.ಅಶೋಕ್ ನಿರ್ದೇಶನದ ದಿಯಾ ಚಿತ್ರದಲ್ಲಿ ಮೊದಲ ಬಾರಿ ತೆರೆ ಮೇಲೆ ಕಾಣಿಸಿಕೊಂಡು ಹೆಸರಾದ  ಧೀಕ್ಷಿತ್ ಶೆಟ್ಟಿ,ಗೆ ಇದೀಗ ಟಾಲಿವುಡ್ ನಿಂದ ಸಾಕಷ್ಟು ಅವಕಾಶ ಸಿಕ್ಕುತ್ತಿವೆಯಂತೆ. ಇದಕ್ಕೆ ದಿಯಾ ಚಿತ್ರದ ತಮ್ಮ ಅಭಿನಯವೇ ಕಾರಣವೆಂದು ಅವರು ಹೇಳಿದ್ದಾರೆ.
ಧೀಕ್ಷಿತ್  ಶೆಟ್ಟಿ
ಧೀಕ್ಷಿತ್ ಶೆಟ್ಟಿ

ಕೆ.ಎಸ್.ಅಶೋಕ್ ನಿರ್ದೇಶನದ ದಿಯಾ ಚಿತ್ರದಲ್ಲಿ ಮೊದಲ ಬಾರಿ ತೆರೆ ಮೇಲೆ ಕಾಣಿಸಿಕೊಂಡು ಹೆಸರಾದ  ಧೀಕ್ಷಿತ್ ಶೆಟ್ಟಿ,ಗೆ ಇದೀಗ ಟಾಲಿವುಡ್ ನಿಂದ ಸಾಕಷ್ಟು ಅವಕಾಶ ಸಿಕ್ಕುತ್ತಿವೆಯಂತೆ. ಇದಕ್ಕೆ ದಿಯಾ ಚಿತ್ರದ ತಮ್ಮ ಅಭಿನಯವೇ ಕಾರಣವೆಂದು ಅವರು ಹೇಳಿದ್ದಾರೆ.

ತನ್ನ ಮೊದಲ ತೆಲುಗು ಚಿತ್ರ ದಿ ರೋಸ್ ವಿಲ್ಲಾ ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿರುವ ಧೀಕ್ಷಿತ್ ತನ್ನ ಎರಡನೇ ಪ್ರಾಜೆಕ್ಟ್‌ನ ಶೂಟಿಂಗ್ ಪೂರ್ಣಗೊಳಿಸಿದ್ದಾನೆ.

ಅಭಿಲಾಶ್ ರೆಡ್ಡಿ ನಿರ್ದೇಶನದ ಮತ್ತು ಅಚ್ಯುತ್ ರಾಮರಾವ್ ನಿರ್ಮಿಸಿದ ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಮುಗ್ಗುರು ಮೊನಗಾಳ್ಳು ಎರಡು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಅಗಲಿದೆ. ಈ ಚಿತ್ರವನ್ನು ಕನ್ನಡದಲ್ಲಿ ಆಣಿ ಮುತ್ತುಗಳು ಎಂದು ಹೆಸರಲ್ಲಿ ಡಬ್ ಮಾಡಲಾಗುತ್ತದೆ. ಚಿತ್ರದ ಫಸ್ಟ್ ಲುಕ್ ಅನ್ನು  ಬಹಿರಂಗಪಡಿಸಿದ ತಯಾರಕರು, ಇಂದು ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ.

“ನನ್ನ ಎರಡನೇ ತೆಲುಗು ಚಿತ್ರವನ್ನು ಅದೇ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ನಿರ್ಮಿಸಲಾಗಿದೆ, ಅವರೊಂದಿಗೆ ನಾನು ರೋಸ್ ವಿಲ್ಲಾ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ನಾವು 2020 ರ ಕೊನೆಯಾರ್ಧದಲ್ಲಿ ಮುಗ್ಗುರು ಮೊನಾಗಳ್ಳು ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದೇವೆ ಮತ್ತು ಅದು ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಎರಡು ಚಿತ್ರಗಳ ಬಿಡುಗಡೆಗಾಗಿ ತಯಾರಕರು ನಿರ್ದಿಷ್ಟ ಒಟಿಟಿ ವೇದಿಕೆಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಆದರೂ ಮುಗ್ಗುರು ಮೊನಗಾಳ್ಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಹೈದರಾಬಾದ್ ನಲ್ಲಿ ಪರಿಸ್ಥಿತಿ ಸುಧಾರಿಸಿದರೆ ಮತ್ತು ಚಿತ್ರಮಂದಿರಗಳನ್ನು ಮತ್ತೆ ತೆರೆಯಲು ಅವಕಾಶವಿದೆ” ಎಂದು ಅವರು ಹೇಳುತ್ತಾರೆ.

ಟಿವಿ ಧಾರಾವಾಹಿ ನಾಗಿಣಿ ಜತೆ ಜನಪ್ರಿಯತೆ ಪಡೆದ ಧೀಕ್ಷಿತ್ ಅವರ ಮೊದಲ ಸಿನಿಮಾ ದಿಯಾ ಅವರಿಗೆ ಎಲ್ಲ ಮನ್ನಣೆ ತಂದುಕೊಟ್ಟಿದೆ. ”ನಾನು ಈಗ ತೆಲುಗಿನಲ್ಲಿ ಯಾವುದೇ ಅವಕಾಶ ಪಡೆಯುತ್ತಿದ್ದೇನೆಂದರೆ ಅದು ದಿಯಾ ಚಿತ್ರದಿಂದಾಗಿದೆ. ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವಿವಿಧ ಭಾಷೆಗಳಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಸಹಾಯ ಮಾಡಿತು” ಎಂದು ಅವರು ಹೇಳಿದ್ದಾರೆ

“ದಿಯಾ ಚಿತ್ರಮಂದಿರಗಳಲ್ಲಿ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಯಶಸ್ಸನ್ನು ಕಂಡಿದೆ. ಒಬ್ಬ ಕಲಾವಿದನಾಗಿ ನಾನು ಜನರು ಚಲನಚಿತ್ರವನ್ನು ನೋಡಬೇಕೆಂದು ಬಯಸುತ್ತೇನೆ ಮತ್ತು ಅದು ಉತ್ತಮ ಸ್ಕೋಪ್ ನಾನು ಬಾಲ್ಯದಿಂದಲೂ ರಂಗಭೂಮಿ, ಚಲನಚಿತ್ರಗಳಲ್ಲಿ ನಾನು ಸಕ್ರಿಯ ನಟನಾಗಬೇಕೆಂದು ಬಯಸಿದ್ದೆ. ಆದರೆ ಸಾಂಕ್ರಾಮಿಕವು ಇಡೀ ಮನರಂಜನಾ ಉದ್ಯಮವನ್ನು ತಟಸ್ಥವನ್ನಾಗಿಸಿದೆ” ಎಂದು ಅವರು ಹೇಳುತ್ತಾರೆ. ಈ ಎರಡು ತೆಲುಗು ಚಿತ್ರಗಳಲ್ಲದೆ, ಧೀಕ್ಷಿತ್ ಎರಡು ಕನ್ನಡ ಸಿನಿಮಾ ಸಹ ಹೊಂದಿದ್ದಾರೆ. ಕೆಟಿಎಂ ಮತ್ತು ಶೀಘ್ರಮೇವ ಕಲ್ಯಾಣ ಪ್ರಾಪ್ತಿರಾಸ್ತು ಎನ್ನುವ ಎರಡು ಚಿತ್ರಗಳು ಸದ್ಯ ಫ್ಲೋರ್ ನಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com