'ಕನ್ನಡಿಗ' ಚಿತ್ರದ ಟೀಸರ್
'ಕನ್ನಡಿಗ' ಚಿತ್ರದ ಟೀಸರ್

ಕ್ರೇಜಿ ಸ್ಟಾರ್ ರವಿಚಂದ್ರನ್ ಬರ್ತಡೇಗೆ ಬಂತು 'ಕನ್ನಡಿಗ' ಟೀಸರ್

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜನ್ಮದಿನದ ಕೊಡುಗೆಯಾಗಿ ಇಂದು "ಕನ್ನಡಿಗ" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇದು ಅವರ ಅಭಿಮಾನಿಗಳಿಗೆ ಒಂದು ಉಡುಗೊರೆಯಾಗಿದೆ.

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜನ್ಮದಿನದ ಕೊಡುಗೆಯಾಗಿ ಇಂದು "ಕನ್ನಡಿಗ" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇದು ಅವರ ಅಭಿಮಾನಿಗಳಿಗೆ ಒಂದು ಉಡುಗೊರೆಯಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಟೀಸರ್ ಬಿಡುಗಡೆ ಮಾಡಿದ್ದು  ಗಿರಿರಾಜ್ ಬಿ ಎಂ ಅವರು ಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡುತ್ತಿರುವುದರಿಂದ ಅಭಿಮಾನಿಗಳ ಆಶೀರ್ವಾದ ಕೋರಿದ್ದಾರೆ.

ರವಿಚಂದ್ರನ್ ಈ ಚಿತ್ರದಲ್ಲಿ ಗುಣಭದ್ರ ಎಂಬ ವಿದ್ವಾಂಸನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಅವರು ತಲೆಮಾರುಗಳಿಂದ ದ ಕನ್ನಡ ಭಾಷೆ ಮತ್ತು ಪರಂಪರೆಯನ್ನು ಕಾಪಾಡುತ್ತಾ ಬಂದ ಕುಟುಂಬದ ಸದಸ್ಯರಾಗಿ ಅಭಿನಯಿಸಿದ್ದಾರೆ.

ಈ ಚಿತ್ರದ ಮೂಲಕ ಟಾಮ್ ಆಲ್ಟರ್ ಅವರ ಮಗ ಜೇಮೀ ಆಲ್ಟರ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ.. ಜೇಮೀ ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಮೊದಲ ಕನ್ನಡ-ಇಂಗ್ಲಿಷ್ ನಿಘಂಟನ್ನು ನಿರ್ಮಿಸಿ ಹೆಸರಾದ  ಕಿಟ್ಟೆಲ್ ಪಾತ್ರದ ಬಗ್ಗೆ ಹೇಳುತ್ತದೆ.

ಜಯಶ್ರೀ, ಬಾಲಾಜಿ ಮನೋಹರ್ ಇತರರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com