ನಾನು ತುಂಬಾ ಡಾಮಿನೇಟಿಂಗ್, ಲಾಕ್ ಡೌನ್ ಕಾರಣ ನನ್ನ ಮಕ್ಕಳು ನನ್ನ ಪಕ್ಕ ಕುಳಿತು ಮಾತನಾಡುತ್ತಿದ್ದಾರೆ: ರವಿಚಂದ್ರನ್

ಕನ್ನಡ ಚಿತ್ರರಂಗದ ಕನಸುಗಾರ ರವಿಚಂದ್ರನ್ 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ಸರಳವಾಗಿ ತಮ್ಮ ಮನೆಯಲ್ಲಿಯೇ ಕುಟುಂಬ ಸದಸ್ಯರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 
ರವಿಚಂದ್ರನ್
ರವಿಚಂದ್ರನ್

ಕನ್ನಡ ಚಿತ್ರರಂಗದ ಕನಸುಗಾರ ರವಿಚಂದ್ರನ್ 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ಸರಳವಾಗಿ ತಮ್ಮ ಮನೆಯಲ್ಲಿಯೇ ಕುಟುಂಬ ಸದಸ್ಯರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 

ಕೋವಿಡ್ ಕಾರಣಕ್ಕೆ ಪ್ರತಿ ವರ್ಷ ನಡೆಯುವಂತೆ ಕನಸುಗಾರನ ಹುಟ್ಟುಹಬ್ಬ ಅದ್ದೂರಿಯಾಗಿ ನಡೆಯಲಿಲ್ಲ. ಸೃಜನಶೀಲತೆ ಕ್ರಿಯಾತ್ಮಕ ಆಲೋಚನೆಗಳಿಗೆ ಹೆಸರುವಾಸಿಯಾದ ರವಿಚಂದ್ರನ್ ತಮ್ಮ ಅಭಿಮಾನಿಗಳಿಗಾಗಿ ವಿಡಿಯೋ ಉಡುಗೊರೆ ನೀಡಿದ್ದಾರೆ.

‘ರೀಲ್ ವರ್ಲ್ಡ್’ ಎಂಬ ವಿಡಿಯೋ ರಿಲೀಸ್ ಮಾಡಿದ್ದು, ಇದರಲ್ಲಿ ವಿಡಿಯೋ, ವರ್ಡಿಂಗ್ಸ್ ಮತ್ತು ದೂರದೃಷ್ಟಿಯ ಮಾತುಗಳು ತುಂಬಿದ್ದು, ಅವರ ಮುಂದಿನ ಯೋಜನೆಗಳ ಮಾಹಿತಿಯಿದೆ. 2021 ರಲ್ಲಿ ರವಿ ಬೋಪಣ್ಣ ಯೋಜನೆಯಿಂದ 2022 ರಲ್ಲಿ ರವಿಚಂದ್ರನ್ ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಅವುಗಳಲ್ಲಿ ಹಲವು ಅಸಾಮಾನ್ಯ ಶೀರ್ಷಿಕೆಗಳನ್ನು ಹೊಂದಿವೆ.

ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟು ಹಬ್ಬಕ್ಕೆ ‘ಕನ್ನಡಿಗ’ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಕನ್ನಡ ಲಿಪಿಕಾರನ ಜೀವನ ಪಯಣವನ್ನು ಸೆರೆ ಹಿಡಿದಿರುವ ಚಿತ್ರವಿದು. ಕನ್ನಡ ಭಾಷೆ ಮತ್ತು ಐತಿಹಾಸಿಕ ಹಿನ್ನೆಲೆಯಲ್ಲಿ ಇಡೀ ಚಿತ್ರವನ್ನು ರೂಪಿಸಿರುವ ನಿರ್ದೇಶಕ ಬಿ ಎಂ ಗಿರಿರಾಜ್. ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಅವರ ಮಕ್ಕಳಾದ ಮನು ರವಿಚಂದ್ರನ್, ವಿಕ್ರಮ್ ರವಿಚಂದ್ರನ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ. ಇವರ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರದ ಹೆಸರು ‘ಬ್ಯಾಡ್ ಬಾಯ್ಸ್’. ಸ್ವತಃ ರವಿಚಂದ್ರನ್ ಅವರೇ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಬಿಡುಗಡೆ ಮಾಡಿರುವ ವಿಶೇಷ ವೀಡಿಯೋದಲ್ಲಿ ಈ ‘ಬ್ಯಾಡ್ ಬಾಯ್‌ಸ್’ ಚಿತ್ರದ ಜತೆಗೆ ‘ಗಾಡ್’, ‘60’ ಹೆಸರಿನಲ್ಲಿ ಚಿತ್ರಗಳನ್ನು ಘೋಷಣೆ ಮಾಡಿದ್ದಾರೆ. ಈ ಪೈಕಿ ‘ಬ್ಯಾಡ್ ಬಾಯ್‌ಸ್’ನಲ್ಲಿ ಅಪ್ಪ ಮಕ್ಕಳು ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂರೂ ಚಿತ್ರಗಳು 2022ಕ್ಕೆ ಸೆಟ್ಟೇರಲಿವೆ.

ತಮ್ಮ ಮುಂದಿನ ಸಿನಿಮಾಗಳು ತಾತ್ವಿಕ ನೆಲೆಗಟ್ಟಿನಲ್ಲಿದ್ದರೂ ಅವು ಕಮರ್ಷಿಯಲ್ ಸಿನಿಮಾಗಳಾಗಿರುತ್ತವೆ. ರವಿ ಬೋಪಣ್ಣ ರಿಲೀಸ್ ನಂತರ  ನಾನು ಏಕಕಾಲದಲ್ಲಿ ಗಾಡ್ ಮತ್ತು ಸಿಕ್ಸ್ಟಿ ಸಿನಿಮಾ ಕೆಲಸ ಮಾಡುತ್ತೇನೆ, ಈ ಕಮರ್ಷಿಯಲ್ ಸಿನಿಮಾದಲ್ಲಿ ನಾನು ಮತ್ತ ನನ್ನ ಇಬ್ಬರು ಮಕ್ಕಳ ಜೊತೆ ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಮುಂದಿನ ಸಿನಿಮಾದ ಸ್ಕ್ರಿಪ್ಟ್ ನಿರ್ದೇಶನದಲ್ಲಿ ಮನೋರಂಜನ್ ಮತ್ತು ವಿಕ್ರಮ್  ಕೆಲಸ ಮಾಡುತ್ತಿದ್ದಾರೆಯೆ ಎಂಬ ಪ್ರಶ್ನೆಗೆ ನೋ ಎಂದು ರವಿಚಂದ್ರನ್ ಉತ್ತರಿಸಿದ್ದಾರೆ. ಅದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ, ಅವರು ನನ್ನ ಮಾತು ಮಾತ್ರ ಕೇಳಬೇಕು ಎಂದಿದ್ದಾರೆ.

ಲಾಕ್ ಡೌನ್ ಇರುವ ಕಾರಣ ಇದೇ ಮೊದಲ ಬಾರಿಗೆ ಅವರು ನನ್ನೊಟ್ಟಿಗೆ ಕುಳಿತು ಚರ್ಚಿಸುತ್ತಿದ್ದಾರೆ. ಇಲ್ಲದಿದ್ದರೇ ಅವರು ನನ್ನ ಪಕ್ಕ ಕುಳಿತುಕೊಳ್ಳುವುದಿಲ್ಲ, ಅವರಾಗಿಯೇ ಕಲಿತುಕೊಳ್ಳಲು ನಾನು ಬಯಸುತ್ತೇನೆ, ಹೀಗಾಗಿ ನಾನು ಡಾಮಿನೇಟಿಂಗ್ ಎಂದು ಹೇಳುತ್ತೇನೆ ಎಂದಿದ್ದಾರೆ ರವಿಚಂದ್ರನ್. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com