ಅಂತಿಮವಾಗಿ ರವಿಚಂದ್ರನ್ ಅವರಿಂದ ನನಗೆ ಗ್ಲಾಮರಸ್ ನಾಯಕಿ ಎಂಬ ಪಟ್ಟ ಸಿಕ್ಕಿದೆ: ಪಾವನ ಗೌಡ
'ಜಟ್ಟ' ಸಿನಿಮಾ ನಾಯಕಿ ಪಾವನಗೌಡ ಅವರಿಗೆ ರವಿಚಂದ್ರನ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಗಿರಿರಾಜ ನಿರ್ದೇಶನದ ರವಿಚಂದ್ರನ್ ನಟನೆಯ ಕನ್ನಡಿಗ ಸಿನಿಮಾದಲ್ಲಿ ಪಾವನ ನಾಯಕಿಯಾಗಿದ್ದಾರೆ.
Published: 31st May 2021 12:07 PM | Last Updated: 31st May 2021 01:19 PM | A+A A-

ಪಾವನ ಗೌಡ
'ಜಟ್ಟ' ಸಿನಿಮಾ ನಾಯಕಿ ಪಾವನಗೌಡ ಅವರಿಗೆ ರವಿಚಂದ್ರನ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಗಿರಿರಾಜ ನಿರ್ದೇಶನದ ರವಿಚಂದ್ರನ್ ನಟನೆಯ ಕನ್ನಡಿಗ ಸಿನಿಮಾದಲ್ಲಿ ಪಾವನ ನಾಯಕಿಯಾಗಿದ್ದಾರೆ.
ನಟ ರವಿಚಂದ್ರನ್ ಅವರ 60 ಸಿನಿಮಾ ವಿಡಿಯೋ ಶೇರ್ ಮಾಡಿಕೊಂಡಿದ್ದು, ಪಾವನಗೌಡ ಸಿನಿಮಾದ ಭಾಗವಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ನಾನು ಅವರ ಪ್ರಾಜೆಕ್ಟ್ ಗಾಗಿ ಸ್ಕ್ರೀನ್ ಟೆಸ್ಟ್ ನೀಡಿದ್ದೆ, 60 ವರ್ಷದ ರವಿಚಂದ್ರನ್ ಅವರಿಗೆ ನಾನು ಫಿಟ್ ಆಗುತ್ತೇನೆ ಎಂದು ಅವರಿಗೆ ಅನಿಸಿತು ಎಂದು ಪಾವನ ಹೇಳಿದ್ದಾರೆ. ಒಂದೇ ಶೆಡ್ಯೂಲ್ ನಲ್ಲಿ ಪೂರ್ಣಗೊಳಿಸಿದ್ದಾರೆ.
ಪಾವನ ಗೌಡ ಅವರ ಚೊಚ್ಚಲ ನಟನೆಯ ಗೊಂಬೆಗಳ ಲವ್ ಸಿನಿಮಾ ದ ಪ್ರಚಾರಕ್ಕೆ ರವಿಚಂದ್ರನ್ ಬಂದಿದ್ದರು, ನನ್ನ ಸಿನಿಮಾ ಬಗ್ಗೆ ಆಡಿದ ಒಳ್ಳೆಯ ಮಾತುಗಳು ಸಿನಿಮಾ ಬಗ್ಗೆ ಸಂಚಲನ ಮೂಡಿಸಿದವು.
ಹಲವು ವರ್ಷಗಳ ನಂತರ ನಾನು ಅವರನ್ನು ಮತ್ತೆ ಭೇಟಿಯಾಗಿದ್ದೇನೆ, ಒಂದಲ್ಲ ಎರಡು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದೆ ಎಂದು ಪಾವನ ತಿಳಿಸಿದ್ದಾರೆ. ಪ್ರತಿಯೊಬ್ಬ ನಾಯಕಿಯೂ ರವಿಚಂದ್ರನ್ ಜೊತೆ ನಟಿಸಬೇಕೆಂದು ಬಯಸುತ್ತಾರೆ, ಅದಕ್ಕಾಗಿ ಬಹಲ ಸಮಯ ಬೇಕು, ನನಗೆ ಸದ್ಯ ಅವಕಾಶ ಸಿಕ್ಕಿದೆ, ಈ ಅವಕಾಶವನ್ನು ನಾನು ಸದುಪಯೋಗಪಡಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ರವಿಚಂದ್ರನ್ ಸಿನಿಮಾದಲ್ಲಿ ನಟಿಸುತ್ತಿರುವುದರ ಜೊತೆಗೆ ಗ್ಲಾಮರಸ್ ನಾಯಕಿ ಎಂಬ ಪಟ್ಟ ಸಿಕ್ಕಿದೆ.ರವಿಚಂದ್ರನ್ ಅವರ ಸಿನಿಮಾದಲ್ಲಿ ಅವಕಾಶ ಸಿಗುವವರೆಗೂ ನನ್ನನ್ನು ನಾನ್ ಗ್ಲಾಮರಸ್ ಎಂದೇ ಗುರುತಿಸಲಾಗಿತ್ತು.
ಅವರು ನನಗೆ ಆತ್ಮವಿಶ್ವಾಸ ತುಂಬುವವರೆಗೂ ನಾನು ಗ್ಲಾಮರಸ್ ಚಿತ್ರಗಳ ಪಾತ್ರವಾಗುತ್ತೇನೆ ಎಂದು ನನಗೆ ವಿಶ್ವಾಸವಿರಲಿಲ್ಲ, ಅವರ ಸೆಟ್ ಗಳಿಗೆ ಹೋಗುವುದು ನನ್ನ ಜೀವನದ ಬಹು ನಿರೀಕ್ಷಿತ ದಿನವಾಗಿತ್ತು.
ಅವರು ನನಗೆ ಸ್ಕೆಚ್ ಮಾಡಿದ ಪಾತ್ರಕ್ಕೆ ಮೊದಲು ನನಗೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ ಎನ್ನಿಸುತ್ತಿತ್ತು. ಆದರೆ ನಿಧಾನವಾಗಿ ನನಗೆ ಎಲ್ಲವೂ ಸರಿ ಹೊಂದಿತು ಎಂದು ಪಾವನ ತಿಳಿಸಿದ್ದಾರೆ, ಇದುವರೆಗೂ ನಾನು ನೋಡಿದ ಸಿನಿಮಾಗಳಿಗಿಂತ ಇದು ತುಂಬಾ ಭಿನ್ನವಾಗಿದೆ, ಈ ಮೊದಲು ಕನ್ನಡ ಪ್ರೇಕ್ಷಕರು ಈ ರೀತಿಯ ಸಿನಿಮಾ ನೋಡಿರಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಪಾವನಾ ಅವರ ನಟನೆಯ ಮೈಸೂರು ಡೈರೀಸ್, ಪ್ರಭುತ್ವ, ರುದ್ರಿ,ತೂತು ಮಡಿಕೆ, ಕಲಿವೀರ ಮತ್ತು ಮೆಹಬೂಬ ಮತ್ತು ಪೈಟರ್ ಸಿನಿಮಾಗಳು ಶೂಟಿಂಗ್ ಮುಗಿದಿದ್ದು, ಬಿಡುಗಡೆಗೆ ಕಾಯುತ್ತಿವೆ.
“ಈ ಚಿತ್ರಗಳ ಶೂಟಿಂಗ್ ಒಂದು ವರ್ಷದ ಹಿಂದೆ ಪೂರ್ಣಗೊಂಡಿತು. ದುರದೃಷ್ಟವಶಾತ್, ಕೊರೋನಾ ಸಾಂಕ್ರಾಮಿಕ ಮತ್ತು ಲಾಕ್ ಡೌನ್ ಕಾರಣ ಅವೆಲ್ಲವೂ ತಡೆಹಿಡಿಯಲಾಗಿದೆ. ಇತ್ತೀಚೆಗೆ ಸದ್ದು ಮತ್ತು ಕನ್ನಡಿಗ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದೇನೆ ಈಗ, ನಾನು 60 ಸಿನಿಮಾ ಚಿತ್ರೀಕರಣವನ್ನು ಪುನರಾರಂಭಿಸಲು ಕಾಯುತ್ತಿದ್ದೇನೆ ಎಂದು ಪಾವನತಿಳಿಸಿದ್ದಾರೆ.