'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಭಾರತದಲ್ಲಿ ಡಿಸೆಂಬರ್ 17ಕ್ಕೆ ಬಿಡುಗಡೆ
ಹಾಲಿವುಡ್ ನಟ ಟಾಮ್ ಹೊಲಾಂಡ್ ಮತ್ತು ಝೆಂಡಯಾ ಅಭಿನಯದ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಭಾರತದಲ್ಲಿ ತೆರೆಗೆ ಅಪ್ಪಳಿಸಲು ಡಿಸೆಂಬರ್ 17 ರಂದು ಸಿದ್ಧವಾಗಿದೆ.
Published: 08th November 2021 03:25 PM | Last Updated: 08th November 2021 05:20 PM | A+A A-

'ಸ್ಪೈಡರ್ ಮ್ಯಾನ್: ನೋ ವೇ ಹೋಮ್'
ಮುಂಬೈ: ಹಾಲಿವುಡ್ ನಟ ಟಾಮ್ ಹೊಲಾಂಡ್ ಮತ್ತು ಝೆಂಡಯಾ ಅಭಿನಯದ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಭಾರತದಲ್ಲಿ ತೆರೆಗೆ ಅಪ್ಪಳಿಸಲು ಡಿಸೆಂಬರ್ 17 ರಂದು ಸಿದ್ಧವಾಗಿದೆ.
ಈ ಚಿತ್ರದಲ್ಲಿ ಬೆನೆಡಿಕ್ಟ್ ಕಂಬರ್‌ಬ್ಯಾಚ್ ಡಾಕ್ಟರ್ ಸ್ಟ್ರೇಂಜ್ ಆಗಿ, ಜಾಕೋಬ್ ಬ್ಯಾಟಲೋನ್ ನೆಡ್ ಲೀಡ್ಸ್ ಆಗಿ ಮತ್ತು ಮಾರಿಸಾ ಟೋಮಿ ಆಂಟ್ ಮೇ ಆಗಿ ಕಾಣಿಸಿಕೊಂಡಿದ್ದಾರೆ.
ಪೀಟರ್ ಪಾರ್ಕರ್‌ನ ಸಿವಿಲ್ ವಾರ್' ಮೂಲಕ 'ಕ್ಯಾಪ್ಟನ್ ಅಮೇರಿಕಾ ಸರಣಿಗೆ ಪದಾರ್ಪಣೆ ಮಾಡಿದ್ದು ಮತ್ತು ಇಬ್ಬರು ಫ್ಯಾಂಟಸಿ ಹೀರೋಗಳೂ ಈ ಹಿಂದೆ ಎರಡು ಆವೃತ್ತಿ 'ಅವೆಂಜರ್ಸ್' ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಇನ್ನು 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಚಿತ್ರದ ಪೋಸ್ಟರ್ ಸೋಮವಾರ ಅನಾವರಣಗೊಂಡಿದೆ. ಈ ಹಿನ್ನಲೆಯಲ್ಲಿ ಚಿತ್ರತಂಡ ವಿಲಿಯಂ ಡಫೊ ಅವರ ಗ್ರೀನ್ ಗಾಬ್ಲಿನ್ ನ ಒಂದು ಪ್ರೋಮವನ್ನು ಹಂಚಿಕೊಂಡಿದೆ.
ಸೋನಿ ಪಿಕ್ಚರ್ಸ್ ಎಂಟರ್ಟೈನ್ಮೆಂಟ್ ಇಂಡಿಯಾ ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ 'ಸ್ಪೈಡರ್ಮ್ಯಾನ್: ನೋ ವೇ ಹೋಮ್' ಅನ್ನು ಬಿಡುಗಡೆ ಮಾಡುತ್ತಿದೆ.