"ತಿರುಗ್ಸೋ ಮೀಸೆ" ಈ ವಾರ ತೆರೆಗೆ

ಶ್ರೀ ಶ್ರೀನಿವಾಸ ಮೂವೀಸ್ ಲಾಂಛನದಲ್ಲಿ ಶ್ರೀನಿವಾಸ್ ಹಾಗೂ ರಿಜ್ವಾನ್ ನಿರ್ಮಿಸಿರುವ "ತಿರುಗ್ಸೋ ಮೀಸೆ" ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಮೂವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ.
ತಿರುಗ್ಸೋ ಮೀಸೆ ಚಿತ್ರದ ಸಾಂದರ್ಭಿಕ ಚಿತ್ರ
ತಿರುಗ್ಸೋ ಮೀಸೆ ಚಿತ್ರದ ಸಾಂದರ್ಭಿಕ ಚಿತ್ರ

ಬೆಂಗಳೂರು: ಶ್ರೀ ಶ್ರೀನಿವಾಸ ಮೂವೀಸ್ ಲಾಂಛನದಲ್ಲಿ ಶ್ರೀನಿವಾಸ್ ಹಾಗೂ ರಿಜ್ವಾನ್ ನಿರ್ಮಿಸಿರುವ "ತಿರುಗ್ಸೋ ಮೀಸೆ" ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಮೂವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ.

ಕೃಷ್ಣ ವಿಜಯ್ ಎಲ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸುರೇಶ್ ಬೊಬ್ಬಿಲಿ ಸಂಗೀತ ನೀಡಿದ್ದು, ಐದು ಹಾಡುಗಳಿವೆ. ವಿ.ಮನೋಹರ್, ರಾಘವೇಂದ್ರ ಕಾಮತ್, ಆರ್ ಚಂದ್ರಶೇಖರ್ ಹಾಡುಗಳನ್ನು ಬರೆದಿದ್ದಾರೆ. 

ಅನುರಾಧಾ ಭಟ್, ಅನಿರುದ್ದ್, ವ್ಯಾಸರಾಜ್, ಚೇತನ್ ನಾಯಕ್, ಮೇಘನಾ ಕುಲಕರ್ಣಿ ಜೋಷಿ ಹಾಗೂ ಮಾಸ್ಟರ್ ಕುಶಾಲ್ ಸೇನಾಪತಿ ಮುಂತಾದವರ ಕಂಠಸಿರಿಯಲ್ಲಿ ಈ ಹಾಡುಗಳು ಮೂಡಿಬಂದಿದೆ. ಸಿದ್  ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನವಿದೆ.

ಶ್ರೀ ವಿಷ್ಣು ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ನಿಕ್ಕಿ ತಂಬೋಲಿ. ರೋಹಿಣಿ, ಶ್ರೀಕಾಂತ್ ಅಯ್ಯಂಗಾರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com