ನಟಿ ಸಂಜನಾ ಗಲ್ರಾಣಿಗೆ ವಂಚನೆ: ಆಪ್ತ ಸ್ನೇಹಿತ ರಾಹುಲ್ ಥೋನ್ಸೆ ಸೇರಿ ಮೂವರ ವಿರುದ್ಧ ಎಫ್ ಐಆರ್ ದಾಖಲು

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾಣಿ ಮತ್ತೆ ಸುದ್ದಿಯಲ್ಲಿದ್ದಾರೆ. ಸಂಜನಾ ಗಲ್ರಾಣಿಗೆ ಸ್ನೇಹಿತನಿಂದಲೇ ವಂಚನೆಯಾಗಿದ್ದು ಆಪ್ತ ಸ್ನೇಹಿತ ರಾಹುಲ್ ಥೋನ್ಸೆ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಗೆಳೆಯ ರಾಹುಲ್ ಥೋನ್ಸೆ ಜೊತೆಗೆ ನಟಿ ಸಂಜನಾ ಗಲ್ರಾಣಿ ಸಂಗ್ರಹ ಚಿತ್ರ
ಗೆಳೆಯ ರಾಹುಲ್ ಥೋನ್ಸೆ ಜೊತೆಗೆ ನಟಿ ಸಂಜನಾ ಗಲ್ರಾಣಿ ಸಂಗ್ರಹ ಚಿತ್ರ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾಣಿ ಮತ್ತೆ ಸುದ್ದಿಯಲ್ಲಿದ್ದಾರೆ. ಸಂಜನಾ ಗಲ್ರಾಣಿಗೆ ಸ್ನೇಹಿತನಿಂದಲೇ ವಂಚನೆಯಾಗಿದ್ದು ಆಪ್ತ ಸ್ನೇಹಿತ ರಾಹುಲ್ ಥೋನ್ಸೆ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಕ್ಯಾಸಿನೊದಲ್ಲಿ ಹಣ ಹೂಡಿಕೆ ಮಾಡುವುದಾಗಿ ರಾಹುಲ್ ಥೋನ್ಸೆ ಸಂಜನಾಗೆ ಕಳೆದ ಮೂರು ವರ್ಷಗಳಿಂದ ಹಣದ ಹೂಡಿಕೆ ವಿಚಾರದಲ್ಲಿ ವಂಚನೆ ಎಸಗಿರುವುದು ಗೊತ್ತಾಗಿದ್ದು ಇಂದಿರಾನಗರ ಪೊಲೀಸರು ರಾಹುಲ್ ಥೋನ್ಸೆ, ರಾಮಕೃಷ್ಣ ಹಾಗೂ ಶ್ರೀಮತಿ ರಾಗೇಶ್ವರಿ ಎಂಬುವವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ಮೂವರ ವಿರುದ್ಧವೂ ಐಪಿಸಿ ಸೆಕ್ಷನ್ 120 ಬಿ, 107, 354, 406, 420, 506ರ ಅಡಿ ಕೇಸು ದಾಖಲಿಸಲಾಗಿದೆ. ಎಫ್ ಐಆರ್ ಪ್ರತಿ ಮಾಧ್ಯಮಕ್ಕೆ ಲಭ್ಯವಾಗಿದ್ದು, ಅದರಲ್ಲಿ ನಟಿ ಸಂಜನಾಗೆ ಆಗಿರುವ ದೋಖಾ ಮತ್ತು ಹೂಡಿಕೆ ವಿಚಾರದಲ್ಲಿ ಆಗಿರುವ ಅಕ್ರಮ, ವಂಚನೆ ವಿಚಾರವಾಗಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ವಿವರಿಸಲಾಗಿದೆ.

ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಟಿ ಸಂಜನಾ ಅವರ ಹಣವನ್ನು ಹೂಡಿಕೆ ಮಾಡಲಾಗಿದೆ ಎಂಬುದು ಆರೋಪವಾಗಿದೆ. 2018ರ ನವೆಂಬರ್ ನಲ್ಲಿ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ.

ಏನಿದು ಪ್ರಕರಣ?: ರಾಹುಲ್ ಥೋನ್ಸೆ ತಾನು ಗೋವಾ ಮತ್ತು ಕೊಲಂಬೊದಲ್ಲಿ ಕ್ಯಾಸಿನೊಗಳ ಮ್ಯಾನೇಜಿಂಗ್ ಡೈರೆಕ್ಟರ್  ಆಗಿ ಕೆಲಸ ಮಾಡುತ್ತಿದ್ದೆನೆಂದು ಹೇಳಿಕೊಂಡಿದ್ದ. ಕ್ಯಾಸಿನೊಗಳಲ್ಲಿ  ಹಣ ವಿನಿಯೋಗಿಸಿದರೆ ಹೆಚ್ಚಿನ ಲಾಭಗಳಿಸಬಹುದು ಎಂದು ಆಮಿಷ ಒಡ್ಡಿದ್ದ. ಹೆಚ್ಚಿನ ಲಾಭದ ಆಸೆಯಿಂದಾಗಿ ಕಳೆದ ಮೂರು ವರ್ಷಗಳಿಂದ ರಾಹುಲ್ ಥೋನ್ಸೆ ಸೇರಿದಂತೆ ಮೂವರ ಬ್ಯಾಂಕ್ ಖಾತೆಗಳಿಗೆ  ಸಂಜನಾ ಗಲ್ರಾನಿ ಹಣ ಹಾಕಿದ್ದರಂತೆ. ಬಳಿಕ ಯಾವುದೇ ಲಾಭಾಂಶ ನೀಡದೆ, ಹಣ ವಾಪಸ್ ಕೇಳಿದರೂ ಹಿಂದಿರುಗಿಸಿಲ್ಲ ಎಂದು ನಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. 

ದೂರು ದಾಖಲಿಸಲು ನ್ಯಾಯಾಲಯ ಆದೇಶ: ಹೆಚ್ಚಿನ ಲಾಭ ಗಳಿಕೆಗೆ ತಾನು ಕೊಟ್ಟ ಹಣವನ್ನ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ ರಾಹುಲ್ ಥೋನ್ಸೆ ತಮ್ಮ ಘನತೆಗೆ ಧಕ್ಕೆ ತರುವಂತೆ ಮಾಡಿದ್ದಾರೆ ಎಂದು ರಾಹುಲ್ ಥೋನ್ಸೆ ವಿರುದ್ಧ ದೂರು ದಾಖಲಿಸಲು ನ್ಯಾಯಾಲಯದಲ್ಲಿ ಸಂಜನಾ ಪಿಸಿಆರ್ ದಾಖಲಿಸಿದ್ದರು.

ವಿಚಾರಣೆ ನಡೆಸಿದ 4ನೇ ಎಸಿಎಂಎಂ ನ್ಯಾಯಾಲಯದಿಂದ ತನಿಖೆಗೆ ಆದೇಶ‌ ಹೊರಡಿಸಿ, ಇಂದಿರಾನಗರ ಪೊಲೀಸರಿಗೆ ತನಿಖೆ ನಡೆಸುವಂತೆ ಆದೇಶ ನೀಡಿತು. ಕೋರ್ಟ್ ಆದೇಶದಂತೆ ರಾಹುಲ್ ಥೋನ್ಸೆ ಸೇರಿ ಮೂವರ ವಿರುದ್ಧ ಐಪಿಸಿ 120ಬಿ, 107, 354, 406, 420, 506, ಕಲಂ 34ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com