ನವೆಂಬರ್ ನಲ್ಲಿ ಕೋಟಿಗೊಬ್ಬ 3 ತೆಲುಗು ಭಾಷೆಯಲ್ಲಿ ರಿಲೀಸ್

ಅಕ್ಟೋಬರ್ 15 ರಂದು ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕೋಟಿಗೊಬ್ಬ 3 ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳ ಒಡೆಯುತ್ತಿದೆ.
ಕೋಟಿಗೊಬ್ಬ ಸಿನಿಮಾ ಸ್ಟಿಲ್
ಕೋಟಿಗೊಬ್ಬ ಸಿನಿಮಾ ಸ್ಟಿಲ್

ಅಕ್ಟೋಬರ್ 15 ರಂದು ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕೋಟಿಗೊಬ್ಬ 3 ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳ ಒಡೆಯುತ್ತಿದೆ.

ಶಿವ ಕಾರ್ತಿಕ್ ನಿರ್ದೇಶನದಲ್ಲಿ ಸುದೀಪ್ ನಿರ್ದೇಶಿಸರುವ ಕೋಟಿಗೊಬ್ಬ 3 ಸಿನಿಮಾ 4 ದಿನಗಳಲ್ಲಿ 40.5 ಕೋಟಿ ರು ಹಣ ಗಳಿಸಿದೆ. ಕೊರೋನೋತ್ತರ ಕಾಲದ ಪರಿಸ್ಥಿತಿಯಲ್ಲಿ ಸಿನಿಮಾ ಇಷ್ಟು ಗಳಿಕೆ ಮಾಡಿರುವುದು ಚಿತ್ರ ತಂಡಕ್ಕೆ ಖುಷಿ ಕೊಟ್ಟಿದೆ. ಇದೇ ವೇಳೆ ಚಿತ್ರ ತಂಡ ಸಿನಿಮಾವನ್ನು ನವೆಂಬರ್ ನಲ್ಲಿ ತೆಲುಗಿನಲ್ಲಿ ರಿಲೀಸ್ ಮಾಡಲು ನಿರ್ಧರಿಸಿದೆ.

ಶೀಘ್ರವೇ ಸಿನಿಮಾ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು. ಸುದೀಪ್ ಈ ಮೊದಲು ಈಗ ದಂತಹ ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ರವಿಶಂಕರ್, ಅಪ್ತಾಬ್ ಶಿವದಾಸನಿ, ಮಡೋನಾ ಸೆಬಾಸ್ಟಿಯನ್, ಮತ್ತು ಶ್ರದ್ಧಾ ದಾಸ್ ಹಾಗೂ ನವಾಬ್ ಶಾ ಮತ್ತಿತರರು ನಟಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com