'ಕ್ರಾಂತಿ' ಸಿನಿಮಾ ಮುೂಹೂರ್ತದ ವೇಳೆ ನನಗೆ 'ಮೆಜೆಸ್ಟಿಕ್' ಚಿತ್ರ ನೆನಪಾಯಿತು: ಚಾಲೆಂಜಿಂಗ್ ಸ್ಟಾರ್ ದರ್ಶನ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮುಂದಿನ ಸಿನಿಮಾ ಕ್ರಾಂತಿ ಬಹುಭಾಷಾ ಚಿತ್ರವಾಗಿದೆ. ಸುಮಾರು 2 ವರ್ಷಗಳ ನಂತರ ದರ್ಶನ್ ಕ್ಯಾಮೆರಾ ಎದುರು ಬಂದಿದ್ದಾರೆ.
Published: 25th October 2021 11:52 AM | Last Updated: 25th October 2021 01:31 PM | A+A A-

ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮುಂದಿನ ಸಿನಿಮಾ ಕ್ರಾಂತಿ ಬಹುಭಾಷಾ ಚಿತ್ರವಾಗಿದೆ. ಸುಮಾರು 2 ವರ್ಷಗಳ ನಂತರ ದರ್ಶನ್ ಕ್ಯಾಮೆರಾ ಎದುರು ಬಂದಿದ್ದಾರೆ.
ಕ್ರಾಂತಿ ಸಿನಿಮಾ ಮುಹೂರ್ತ ಕಾರ್ಯಕ್ರಮದ ಕುರಿತು ಮಾತನಾಡುತ್ತಾ, ದರ್ಶನ್ ತಮ್ಮ ಚೊಚ್ಚಲ ಚಿತ್ರ ಮೆಜೆಸ್ಟಿಕ್‌ನ ಇದೇ ರೀತಿಯ ಘಟನೆಯನ್ನು ನೆನಪಿಸಿಕೊಂಡರು.
ತಮ್ಮ ಅಭಿಮಾನಿಗಳಲ್ಲಿ ಡಿ ಬಾಸ್ ಎಂದು ಜನಪ್ರಿಯವಾಗಿರುವ ನಟ ದರ್ಶನ್ ಕ್ರಾಂತಿ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸುವ ಮೊದಲು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದರು.
ನನ್ನ 53ನೇ ಚಿತ್ರ ರಾಬರ್ಟ್ ವರೆಗೆ ನಾನು ಚಲನಚಿತ್ರಗಳಿಗೆ ಶೂಟಿಂಗ್ ಮಾಡುವುದು, ಸೆಟ್‌ಗಳಲ್ಲಿರುವುದು ಮತ್ತು ಬ್ಯಾಕ್-ಟು-ಬ್ಯಾಕ್ ಪ್ರಾಜೆಕ್ಟ್‌ಗಳಿಗೆ ಕೆಲಸ ಮಾಡುವುದು ನನ್ನ ಜೀವನದಲ್ಲಿ ವಾಡಿಕೆಯಾಗಿತ್ತು.
ಆದರೆ ಸಾಂಕ್ರಾಮಿಕ ರೋಗದಿಂದಾಗಿ ನಾನು ಕೆಲ ಸಮಯ ಚಿತ್ರೀಕರಣದಿಂದ ದೂರವಿದ್ದೆ. ಒಬ್ಬ ನಟನಾಗಿ, ಇದು ನನ್ನ ವೃತ್ತಿಜೀವನದ ಸುದೀರ್ಘ ವಿರಾಮ. ಹಾಗಾಗಿ ನಾನು ಕ್ರಾಂತಿಯ ಮುಹೂರ್ತದಲ್ಲಿ ಪಾಲ್ಗೊಂಡಿದ್ದಾಗ ನನ್ನ ಹೊಟ್ಟೆಯಲ್ಲಿ ಚಿಟ್ಟೆ ಹಾರಾಡಿದಂತ ಅನುಭವವಾಗುತ್ತಿತ್ತು. 'ಆಕ್ಷನ್' ಕೇಳಲು ಮತ್ತು ನಿರ್ದೇಶಕರು ಮೊದಲ ಶಾಟ್ ತೆಗೆದುಕೊಳ್ಳುವುದನ್ನು ನೋಡಲು ತುಂಬಾ ರೋಮಾಂಚಕ ಕ್ಷಣವಾಗಿತ್ತು ಎಂದು ದರ್ಶನ್ ಹೇಳಿದ್ದಾರೆ.
ಯಜಮಾನ ಚಿತ್ರತಂಡ ಪ್ಯಾನ್ ಇಂಡಿಯಾ ಸಿನಿಮಾದೊಂದಿಗೆ ಮತ್ತೆ ಮರಳಿದೆ. ಇದೊಂದು ಕಮರ್ಷಿಯಲ್ ಎಂಟರ್ಟೈನ್ ಮೆಂಟ್ ಎಂದು ಹೇಳಲಾಗಿದೆ. ಆದರೆ ಚಿತ್ರದ ಪೋಸ್ಟರ್ ನಲ್ಲಿ ದರ್ಶನ್ ಅವರನ್ನು ವರ್ಣಮಾಲೆಗಳೊಂದಿಗೆ ಆಸಕ್ತಿದಾಯಕವಾಗಿ ವಿನ್ಯಾಸಗೊಳಿಸಲಾಗಿದೆ. ಏಕಾಂಗಿಯಾಗಿ ಹೋರಾಡಲು ಕಲಿಯಿರಿ ಎಂಬುದು ಚಿತ್ರದ ಟ್ಯಾಗ್ ಲೈನ್ ಆಗಿದೆ. ನಿರ್ದೇಶಕ ಹರಿಕೃಷ್ಣ ಇದನ್ನು ಅಕ್ಷರ ಕ್ರಾಂತಿ ಎಂದು ಕರೆದಿದ್ದಾರೆ.
ಅಕ್ಷರ ಎಂದರೆ ವರ್ಣಮಾಲೆ, ಅಕ್ಷರಗಳು ನಮ್ಮ ಜೀವನದಲ್ಲಿ ಅತ್ಯಗತ್ಯ. ನಿರ್ದೇಶಕರು ಒಂದು ಕಾದಂಬರಿ ವಿಷಯವನ್ನು ಸಿನಿಮಾ ಮಾಡಲು ಹೊರಟಿದ್ದಾರೆ. ಅದನ್ನು ಮನರಂಜನೆಯ ರೀತಿಯಲ್ಲಿ ಹೇಳಲಾಗುತ್ತದೆ ಎಂದು ದರ್ಶನ್ ತಿಳಿಸಿದ್ದಾರೆ. ಅವರು ತಮ್ಮ ಪಾತ್ರ ಮತ್ತು ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಗೊಳಿಸಲಿಲ್ಲ.
ಇದನ್ನೂ ಓದಿ: 'ಕ್ರಾಂತಿ' ಯಲ್ಲಿ ದರ್ಶನ್ ಜೊತೆ 'ಬುಲ್ ಬುಲ್' ಬೆಡಗಿ; ನನ್ನ ಸಿನಿ ಪಯಣ ಮರಳಿ ಆರಂಭ: ರಚಿತಾ ರಾಮ್
ನನ್ನಲ್ಲಿರುವ ಕಲಾವಿದ ಯಾವಾಗಲೂ ಪ್ರೇಕ್ಷಕರನ್ನು ಪೂರ್ಣವಾಗಿ ರಂಜಿಸುವ ಗುರಿಯನ್ನು ಹೊಂದಿದ್ದಾನೆ. ನಾನು ವಿಭಿನ್ನ ಪಾತ್ರಗಳಲ್ಲಿ ನಟಿಸುವುದನ್ನು ನೋಡುವ ಪ್ರೇಕ್ಷಕರ ಆಶಯವನ್ನು ಪೂರೈಸಲು ನಾನು ಬಯಸುತ್ತೇನೆ, ನಾವು ಪ್ರಸ್ತುತಪಡಿಸುವ ವಿಷಯವು ಬಲವಾದ ನೈತಿಕತೆಯ ಅಡಿಯಲ್ಲಿದೆ ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ, ಕ್ರಾಂತಿಯೊಂದಿಗೆ ನಾವು ಮನರಂಜನೆ ಹಾಗೂ ಶಿಕ್ಷಣ ನೀಡುತ್ತೇವೆ ಎಂದು ದರ್ಶನ್ ತಮ್ಮ ಸಿನಿಮಾ ಬಗ್ಗೆ ವಿವರಣೆ ನೀಡಿದ್ದಾರೆ.
ಯಜಮಾನ ನಂತರ ವಿ. ಹರಿಕೃಷ್ಣ ಜೊತೆ ದರ್ಶನ್ ಕ್ರಾಂತಿ ಸಿನಿಮಾ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ನಿರ್ದೇಶಕರಾಗಿ ಬದಲಾಗಿದ್ದಾರೆ. ನಿರ್ಮಾಪಕರಾದ ಶೈಲಜಾ ನಾಗ್ ಮತ್ತು ಸುರೇಶ ಬಿ ಅವರು ಉತ್ತಮ ಚಿತ್ರಗಳನ್ನು ಬೆಂಬಲಿಸುವಲ್ಲಿ ಪ್ರಸಿದ್ದರಾಗಿದ್ದಾರೆ, ಯಜಮಾನ ನಂತರ ನಾವು ಮತ್ತೆ ಒಂದಾಗಲು ಕ್ರಾಂತಿ ಅತ್ಯುತ್ತಮ ವಿಷಯ ಎಂದು ನಾವು ಭಾವಿಸಿದ್ದೇವೆ ಎಂದಿದ್ದಾರೆ.
ದರ್ಶನ್ ಜೊತೆ ರಚಿತಾ ರಾಮ್ ನಟಿಸಿದ್ದು, ಕ್ರಾಂತಿಯಲ್ಲಿ ರವಿಚಂದ್ರನ್ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕುರುಕ್ಷೇತ್ರ ಸಿನಿಮಾ ನಂತರ, ಕ್ರಾಂತಿ ವರೆಗೂ ನಮ್ಮನ್ನು ಮತ್ತೆ ಒಗ್ಗೂಡಿಸುವ ಸ್ಕ್ರಿಪ್ಟ್ ನಮ್ಮಲ್ಲಿರಲಿಲ್ಲ.
ರವಿಚಂದ್ರನ್ ಅವರಿಗೆ ಈ ಚಿತ್ರದಲ್ಲಿ ಪ್ರಮುಖವಾದ ಪಾತ್ರವಿದೆ ಮತ್ತು ನಾನು ಅವರೊಂದಿಗೆ ಮತ್ತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ದರ್ಶನ್ ತಿಳಿಸಿದ್ದಾರೆ.