ಕೊನೆಗೂ ತೆರೆಗೆ ಬರಲು '100' ಸಜ್ಜು: ನ.19ಕ್ಕೆ ರಮೇಶ್ ಅರವಿಂದ್ ನಿರ್ದೇಶನದ ಚಿತ್ರ ಬಿಡುಗಡೆ
ಶಿವಾಜಿ ಸುರತ್ಕಲ್ 2 ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಳ್ಳಲಿರುವ ನಟ ರಮೇಶ್ ಅರವಿಂದ್ ಅವರ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 100 ತೆರೆಗೆ ತರಲು ಉತ್ಸುಕವಾಗಿದ್ದಾರೆ. ಮುಂದಿನ ತಿಂಗಳು ನವೆಂಬರ್ 19 ರಂದು 100 ತೆರೆಗೆ ಬರಲು ಸಜ್ಜಾಗಿದ್ದು ಸೋಷಿಯಲ್ ಮೀಡಿಯಾ ಮೂಲಕ ರಮೇಶ್ ಅರವಿಂದ್ ಅವರೇ ದಿನಾಂಕ ಘೋಷಿಸಿದ್ದಾರೆ.
Published: 26th October 2021 01:55 PM | Last Updated: 26th October 2021 02:10 PM | A+A A-

ರಮೇಶ್ ಅರವಿಂದ್
ಶಿವಾಜಿ ಸುರತ್ಕಲ್ 2 ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಳ್ಳಲಿರುವ ನಟ ರಮೇಶ್ ಅರವಿಂದ್ ಅವರ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 100 ತೆರೆಗೆ ತರಲು ಉತ್ಸುಕವಾಗಿದ್ದಾರೆ. ಮುಂದಿನ ತಿಂಗಳು ನವೆಂಬರ್ 19 ರಂದು 100 ತೆರೆಗೆ ಬರಲು ಸಜ್ಜಾಗಿದ್ದು ಸೋಷಿಯಲ್ ಮೀಡಿಯಾ ಮೂಲಕ ರಮೇಶ್ ಅರವಿಂದ್ ಅವರೇ ದಿನಾಂಕ ಘೋಷಿಸಿದ್ದಾರೆ.
ಕೋವಿಡ್-19 ಕಡಿಮೆಯಾಗಿ ಚಿತ್ರವನ್ನು ಥಿಯೇಟರ್ ನಲ್ಲಿ ತೆರೆಗೆ ತರಲು ಕಾಯುತ್ತಿದ್ದ ಚಿತ್ರತಂಡಕ್ಕೆ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಇದೊಂದು ಕೌಟುಂಬಿಕ ಆಧಾರಿತ ಕಥೆಯನ್ನು ಹೊಂದಿರುವ ಚಿತ್ರವಾಗಿದ್ದು ಪ್ರೇಕ್ಷಕರ ಮುಂದೆ ತರಲು ಕಾತರನಾಗಿದ್ದೇನೆ ಎನ್ನುತ್ತಾರೆ.
ಸೈಬರ್ ಕ್ರೈಮ್ ಆಧಾರಿತ ಚಿತ್ರ 100 ಆಗಿದ್ದು, ಗಾಳಿಪಟ-2 ನಿರ್ಮಾಪಕ ರಮೇಶ್ ರೆಡ್ಡಿ ಅವರು ತಮ್ಮ ಬ್ಯಾನರ್ ಸೂರಜ್ ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಮೇಶ್ ಅರವಿಂದ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದು, ರಚಿತಾ ರಾಮ್ ಅವರ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಈ ಹಿಂದೆ ಪುಷ್ಪಕ ವಿಮಾನದಲ್ಲಿ ತೆರೆ ಹಂಚಿಕೊಂಡಿದ್ದರು.
100 ಚಿತ್ರದಲ್ಲಿ ನಟಿ ಪೂರ್ಣಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದು, ಸತ್ಯ ಹೆಗಡೆ 100ಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಈ ಚಿತ್ರಕ್ಕೆ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ.
ರಮೇಶ್ ಅರವಿಂದ್ ಅವರು ರಾಮ ಶಾಮ ಭಾಮಾ ಚಿತ್ರದ ಮೂಲಕ ನಟನೆ ಜೊತೆಗೆ ನಿರ್ದೇಶನಕ್ಕೆ ಕಾಲಿಟ್ಟಿದ್ದರು. ಅವರ ಇತ್ತೀಚಿನ ಕೊನೆಯ ನಿರ್ದೇಶನ ಸುಂದರಾಂಗ ಜಾಣ (2016). ನಂತರ ಹಿಂದಿಯ ಬ್ಲಾಕ್ ಬಸ್ಟರ್ ಕ್ವೀನ್‌ನ ಕನ್ನಡ ರಿಮೇಕ್ (ಪಾರುಲ್ ಯಾದವ್ ನಟನೆಯ ಬಟರ್‌ಫ್ಲೈ) ಮತ್ತು ತಮಿಳಿನಲ್ಲಿ (ಕಾಜಲ್ ಅಗರ್ವಾಲ್ ಅಭಿನಯದ ಪ್ಯಾರಿಸ್ ಪ್ಯಾರಿಸ್) ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಅದು ಇನ್ನೂ ತೆರೆಗೆ ಬಂದಿಲ್ಲ.