ನೆಟ್ ಫ್ಲಿಕ್ಸ್ ನಲ್ಲಿ ಸೆಪ್ಟಂಬರ್ 22 ರಂದು 'ಕ್ರೈಂ ಸ್ಟೋರೀಸ್- ಇಂಡಿಯಾ ಡಿಟೆಕ್ಟೀವ್ಸ್' ವೆಬ್ ಸಿರೀಸ್ ಬಿಡುಗಡೆ

ಡಾಕ್ಯುಮೆಂಟರಿ ಹಾಗೂ ವೆಬ್​ ಸೀರೀಸ್ ಮೂಲಕ ಒಟಿಟಿ ಕ್ಷೇತ್ರದಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡುತ್ತಿರುವ ನೆಟ್​ಫ್ಲಿಕ್ಸ್, ಇದೀಗ ಹೊಸ ಸರಣಿಯ ಮುಖಾಂತರ ವಿಶೇಷ ಕಥಾ ವಸ್ತುವೊಂದನ್ನು ಪ್ರೇಕ್ಷಕರಿಗೆ ಕಟ್ಟಿಕೊಡಲು ತಯಾರಾಗಿದೆ. 
'ಕ್ರೈಂ ಸ್ಟೋರೀಸ್- ಇಂಡಿಯಾ ಡಿಟೆಕ್ಟೀವ್ಸ್' ವೆಬ್ ಸಿರೀಸ್

ಬೆಂಗಳೂರಿನ ಅಪರಾಧ ಜಗತ್ತಿನ 4 ವಿಶೇಷ ಪ್ರಕರಣಗಳನ್ನು ತೆರೆಯ ಮೇಲೆ ತರಲು ನೆಟ್​ಫ್ಲಿಕ್ಸ್ ತಯಾರಾಗಿದೆ. ಈ ಸೀರೀಸ್ ನೈಜ ಸಾಕ್ಷ್ಯಚಿತ್ರ ಮಾದರಿಯಲ್ಲಿರಲಿದ್ದು, ನೆಟ್​ ಫ್ಲಿಕ್ಸ್​ನಲ್ಲಿ ಪ್ರಸಾರವಾಗುವ ಭಾರತದ ಮೊದಲ ನೈಜ ಘಟನೆಗಳನ್ನು ಆಧರಿಸಿದ ಕ್ರೈಮ್ ಸೀರೀಸ್ ಇದಾಗಿದೆ. ಈ ಚಿತ್ರಕ್ಕೆ ‘ಕ್ರೈಂ ಸ್ಟೋರೀಸ್: ಇಂಡಿಯಾ ಡಿಟೆಕ್ಟೀವ್ಸ್  ಎಂದು ಹೆಸರಿಡಲಾಗಿದ್ದು, ಸೆಪ್ಟೆಂಬರ್ 22ರಿಂದ ನೆಟ್​ಫ್ಲಿಕ್ಸ್​ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

ಈ ಸಾಕ್ಷ್ಯಚಿತ್ರವು ಬೆಂಗಳೂರಿನ ಪೊಲೀಸರು ಸಂಕೀರ್ಣ ಪ್ರಕರಣಗಳ ಹಿಂದೆ ಬಿದ್ದು, ಅವನ್ನು ಭೇಧಿಸುವುದನ್ನು ಎಳೆಎಳೆಯಾಗಿ ತೆರೆದಿಡುತ್ತದೆ. ಈ ಸರಣಿಯಲ್ಲಿ ನಾಲ್ಕು ಪ್ರಮುಖ ಪ್ರಕರಣಗಳನ್ನು ಪೊಲೀಸರು ತನಿಖೆ ಮಾಡುವುದನ್ನು ತೋರಿಸಲಾಗಿದೆ. ಸೀರೀಸ್​ನ ಟ್ರೈಲರ್ ಬಿಡುಗಡೆಯಾಗಿದ್ದು, ಕನ್ನಡ ಭಾಷೆಯಲ್ಲಿದೆ. ಇದು ವೀಕ್ಷಕರ ಸಂತಸಕ್ಕೆ ಕಾರಣವಾಗಿದ್ದು, ನೋಡುಗರಿಗೆ ಆಸಕ್ತಿ ಮೂಡಿಸುವಂತಿದೆ. ಮಿನ್ನೋ ಫಿಲ್ಮ್ಸ್ ನಿರ್ಮಿಸಿದ ಈ ಸರಣಿಯನ್ನು ಎನ್. ಅಮಿತ್ ಮತ್ತು ಜ್ಯಾಕ್ ರಾಂಪ್ಲಿಂಗ್ ಜಂಟಿಯಾಗಿ
ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com