ಶಿವ ತೇಜಸ್ ನಿರ್ದೇಶನದ ಹೊಸ ಚಿತ್ರದಲ್ಲಿ 'ಡಾರ್ಲಿಂಗ್ ಕೃಷ್ಣ' ಗೆ ನಿಶ್ವಿಕಾ, ಮೇಘಾ ಶೆಟ್ಟಿ ನಾಯಕಿಯರು!

ಶಿವತೇಜಸ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಲವ್ ಮಾಕ್ಟೇಲ್ ಹೀರೋ ಡಾರ್ಲಿಂಗ್ ಕೃಷ್ಣ ನಟಿಸುತ್ತಿದ್ದು. ಮೊದಲ ಬಾರಿಗೆ ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ನಾಯಕಿಯಾರಾಗಿ ಅಭಿನಯಿಸುತ್ತಿದ್ದಾರೆ.
ನಿಶ್ವಿಕಾ ನಾಯ್ಡು -ಮೇಘಾ ಶೆಟ್ಟಿ
ನಿಶ್ವಿಕಾ ನಾಯ್ಡು -ಮೇಘಾ ಶೆಟ್ಟಿ

ಶಿವತೇಜಸ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಲವ್ ಮಾಕ್ಟೇಲ್ ಹೀರೋ ಡಾರ್ಲಿಂಗ್ ಕೃಷ್ಣ ನಟಿಸುತ್ತಿದ್ದು. ಮೊದಲ ಬಾರಿಗೆ ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ನಾಯಕಿಯಾರಾಗಿ ನಟಿಸುತ್ತಿದ್ದಾರೆ.

ಶಿವತೇಜಸ್‌ ಈಗ ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು ಇನ್ನೂ ಚಿತ್ರಕ್ಕೆ ಟೈಟಲ್ ನಿರ್ಧರಿಸಿಲ್ಲ, ಸೆಪ್ಟಂಬರ್ 27 ರಂದು ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. 

ಜಂಟಲ್ ಮ್ಯಾನ್ ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಿಶ್ವಿಕಾ ಸದ್ಯ ಶರಣ್ ನಟನೆಯ ಗುರುಶಿಷ್ಯರು ಮತ್ತು ಗಣೇಶ್ ಜೊತೆ ಸಖತ್ ಚಿತ್ರದಲ್ಲಿ ಕೂಡ ಅಭಿನಯಿಸುತ್ತಿದ್ದಾರೆ.

ಇನ್ನೂ ಕಿರುತೆರೆ ಮೂಲಕ ಪ್ರಸಿದ್ಧವಾಗಿರುವ ನಟಿ ಮೇಘಾ ಶೆಟ್ಟಿ ಕೂಡ ಕೃಷ್ಣನಿಗೆ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಮೇಘಾ ಗೋಲ್ಡನ್ ಸ್ಟಾರ್ ಗಣೇಶ‍್ ಜೊತೆಗೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆ ಸಿನಿಮಾದ ಶೂಟಿಂಗ್ ಈಗಾಗಲೇ  ಮುಕ್ತಾಯವಾಗಿದೆ.

ಇನ್ನೂ ಹೆಸರಿಡದ ಸಿನಿಮಾದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ, ಗಿರಿ ಮತ್ತು ಅರುಣಾ ಬಾಲರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ಶೇಖರ್ ಚಂದ್ರ ಅವರ ಛಾಯಾಗ್ರಹಣದೊಂದಿಗೆ, ಶಿವ ತೇಜಸ್ ಬರೆದಿರುವ ಈ ಯೋಜನೆಯನ್ನು ರಶ್ಮಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗುವುದು.

ಸದ್ಯ ಡಾರ್ಲಿಂಗ್ ಕೃಷ್ಣ, ತಮ್ಮ ನಿರ್ದೇಶನದ ಲವ್ ಮಾಕ್‌ಟೇಲ್ 2 ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ಮತ್ತು Shrikrishna@gmail.com ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅವರು ಮಿ. ಬ್ಯಾಚುಲರ್, ಲಕ್ಕಿ ಮ್ಯಾನ್, ಲವ್ ಮಿ ಅಥವಾ ಹೇಟ್ ಮಿ, ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com