
ಜಿಮ್ ಕ್ಯಾರಿ
ಲಾಸ್ ಎಂಜೆಲಿಸ್: ಖ್ಯಾತ ಹಾಲಿವುಡ್ ಹಾಸ್ಯ ನಟ ಜಿಮ್ ಕ್ಯಾರಿ ಚಿತ್ರರಂಗದಿಂದ ನಿವೃತ್ತಿ ಘೋಷಿಸಿದ್ದಾರೆ. 5 ದಶಕಗಳ ವೃತ್ತಿ ಬದುಕಿನಲ್ಲಿ ಎಲ್ಲಾ ಬಗೆಯ ಪಾತ್ರಗಲನ್ನು ನಿರ್ವಹಿಸಿರುವ ಬಗ್ಗೆ ತೃಪ್ತಿಯಿದೆ ಎಂದು ನಟ ಹೇಳಿದ್ದಾರೆ.
ಇದನ್ನೂ ಓದಿ: ಹಾಲಿವುಡ್ ನ ಪ್ರತಿಷ್ಟಿತ ಆಸ್ಕರ್ ಅಕಾಡೆಮಿಗೆ ನಟ ವಿಲ್ ಸ್ಮಿತ್ ರಾಜಿನಾಮೆ: ಕಪಾಳಮೋಕ್ಷಕ್ಕೆ ಕ್ಷಮೆ ಕೋರಿದ ನಟ
ಇದೇ ವೇಳೆ ತಮ್ಮ ಬಳಿಗೆ ಯಾವುದಾದರೂ ವಿಶೇಷ ಸ್ಕ್ರಿಪ್ಟ್ ಬಂದರೆ, ಆ ಸಿನಿಮಾದಿಂದ ಜನರಿಗೆ ಸಹಾಯವಾಗುತ್ತೆ ಎಂದು ನನಗೆ ಅನ್ನಿಸಿದರೆ ಮತ್ತೆ ಚಿತ್ರರಂಗಕ್ಕೆ ಮರಳುವ ಬಗ್ಗೆ ಯೋಚಿಸುತ್ತೇನೆ ಎಂದು ಜಿಮ್ ಕ್ಯಾರಿ ಹೇಳಿದ್ದಾರೆ.
ಇದನ್ನೂ ಓದಿ: ಆಸ್ಕರ್ ವೇದಿಕೆಯಲ್ಲಿ ಹಾಸ್ಯ ನಟ ಕ್ರಿಸ್ ರಾಕ್ ಗೆ ಕಪಾಳ ಮೋಕ್ಷ: ಕ್ಷಮೆ ಕೇಳಿದ ನಟ ವಿಲ್ ಸ್ಮಿತ್
ಆಸ್ಕರ್ ಸಮಾರಂಭದಲ್ಲಿ ಕ್ರಿಸ್ ರಾಕ್ ಗೆ ನಟ ವಿಲ್ ಸ್ಮಿತ್ ಕಪಾಳ ಮೋಕ್ಷ ಮಾಡಿದ ಘಟನೆ ಕುರಿತು ಅವರು ಅಸಹನೆ ವ್ಯಕ್ತಪಡಿಸಿದ್ದರು. ಘಟನೆ ಬಳಿಕ ವಿಲ್ ಸ್ಮಿತ್ ಕಿಂಗ್ ರಿಚರ್ಡ್ ಸಿನಿಮಾಗೆ ಪ್ರಶಸ್ತಿ ಗೆದ್ದಾಗ ಸಭಿಕರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದ್ದರು.
ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಕಾರ್ಯಕ್ರಮ: ವೇದಿಕೆ ಮೇಲೆ ಸಹನಟನಿಗೆ ಕಪಾಳ ಮೋಕ್ಷ ಮಾಡಿದ ನಟ ವಿಲ್ ಸ್ಮಿತ್!
ಕಪಾಳ ಮೋಕ್ಷ ಮಾಡಿದ ನಟನಿಗೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದ್ದು ಸರಿಯಲ್ಲ ಎಂದು ಜಿಮ್ ಕ್ಯಾರಿ ಮುಕ್ತವಾಗಿ ಹಾಲಿವುಡ್ ಕಲಾವಿದರ ವರ್ತನೆಯನ್ನು ದೂಷಿಸಿದ್ದರು.
ಇದನ್ನೂ ಓದಿ: ಬೆಳ್ಳಗಿದೀನಿ ಅಂತ ಸಿನಿಮಾ ಚಾನ್ಸ್ ಕಳಕೊಂಡಿದ್ದೀನಿ, ಬೆಳ್ಳಗಿರೋದ್ ತಪ್ಪಾ?: 'ಕಾಡ' ವಿಲನ್ ಶ್ರೀರಾಮ್