ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣದ ಟೀಸರ್ ರಿಲೀಸ್: ಚಿತ್ರ ಬಿಡುಗಡೆ ದಿನಾಂಕ ಬಹಿರಂಗ
ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಚಿತ್ರದ ಟೀಸರ್ ಶನಿವಾರ ಬಿಡುಗಡೆ ಆಗಿದ್ದು, ಚಿತ್ರ ಬಿಡುಗಡೆ ದಿನಾಂಕ ಕೂಡ ಬಹಿರಂಗಗೊಂಡಿದೆ.
Published: 02nd April 2022 11:46 AM | Last Updated: 02nd April 2022 11:46 AM | A+A A-

ಸಂಗ್ರಹ ಚಿತ್ರ
ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಚಿತ್ರದ ಟೀಸರ್ ಶನಿವಾರ ಬಿಡುಗಡೆ ಆಗಿದ್ದು, ಚಿತ್ರ ಬಿಡುಗಡೆ ದಿನಾಂಕ ಕೂಡ ಬಹಿರಂಗಗೊಂಡಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ 'ವಿಕ್ರಾಂತ್ ರೋಣ'ದ ಅಫಿಶಿಯಲ್ ಟೀಸರ್ ಯುಗಾದಿ ಹಬ್ಬವಾದ ಅನಾವರಣಗೊಂಡಿದೆ.
ಕೆಲ ದಿನಗಳ ಹಿಂದೆ 'ದಿ ಡೆವಿಲ್ಸ್ ಅರೈವಲ್' ಹೆಸರಿನಲ್ಲಿ ಚಿತ್ರತಂಡ ಟೀಸರ್ ಅನ್ನ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಅದರಂತೆ ಇಂದು 'ವಿಕ್ರಾಂತ್ ರೋಣ' ಚಿತ್ರದ ಟೀಸರ್ ಬಿಡುಗಡೆ ಆಗಿದೆ.
ಹಾಲಿವುಡ್ ಸಿನಿಮಾ ಶೈಲಿಯಲ್ಲಿ ಮೂಡಿ ಬಂದಿದ್ದು, ‘ಒಂದು ದೀರ್ಘವಾದ ಮತ್ತು ಸುಂದರ ಪಯಣದ ಬಳಿಕ ಈ ವಿಷಯ ತಿಳಿಸಲು ಖುಷಿ ಆಗುತ್ತಿದೆ. ವಿಕ್ರಾಂತ್ ರೋಣ ಸಿನಿಮಾ ಜುಲೈ 28ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ’ ಎಂದು ಬರೆದುಕೊಳ್ಳುವ ಮೂಲಕ ಕನ್ನಡ ಅವತರಣಿಕೆಯ ಟೀಸರ್ ಅನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದಾರೆ.
After a long and a beautiful journey,,,Happy to announce that #VikrantRona will hit the theaters on July 28th 2022#VikrantRonaJuly28 in cinemas worldwide in 3D
— Kichcha Sudeepa (@KicchaSudeep) April 2, 2022
https://t.co/DgH4zqnlkd @anupsbhandari @nirupbhandari @neethaofficial @Asli_Jacqueline @JackManjunath @ZeeStudios_
ಈ ಟೀಸರ್ಅನ್ನು ಹಿಂದಿಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ರಿಲೀಸ್ ಮಾಡಿದ್ದಾರೆ. ಅದೇ ರೀತಿ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ, ತಮಿಳಿನಲ್ಲಿ ಸಿಂಬು ಹಾಗು ಮಲಯಾಳಂ ನಲ್ಲಿ ಮೋಹನ್ ಲಾಲ್ ಟೀಸರ್ ಬಿಡುಗಡೆ ಮಾಡಿದ್ದಾರೆ.
ಟೀಸರ್ ಬಿಡುಗಡೆ ಜೊತೆಗೆ ಸಿನಿಮಾ ರಿಲೀಸ್ ಡೇಟ್ ಕೂಡ ಬಹಿರಂಗವಾಗಿದ್ದು, ಸಿನಿಮಾ ಸಿನಿಮಾ ಜುಲೈ 28 ರಂದು ತೆರೆಗೆ ಬರುತ್ತಿದೆ.
ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ 'ವಿಕ್ರಾಂತ್ ರೋಣ' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ಕಿಚ್ಚ ಸುದೀಪ್ ಅಲ್ಲದೆ, ನೀತಾ ಅಶೋಕ್, ನಿರೂಪ್ ಭಂಡಾರಿ, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿದೆ.