ಹಾಲಿವುಡ್ ನ ಪ್ರತಿಷ್ಟಿತ ಆಸ್ಕರ್ ಅಕಾಡೆಮಿಗೆ ನಟ ವಿಲ್ ಸ್ಮಿತ್ ರಾಜಿನಾಮೆ: ಕಪಾಳಮೋಕ್ಷಕ್ಕೆ ಕ್ಷಮೆ ಕೋರಿದ ನಟ
ಇತ್ತೀಚಿಗೆ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರೂಪಕ ಕ್ರಿಸ್ ರಾಕ್ ಅವರಿಗೆ ವೇದಿಕೆಯ ಮೇಲೆ ಕಪಾಳಮೋಕ್ಷ ಮಾಡಿದ ವಿಲ್ ಸ್ಮಿತ್ ವಿವಾದ ಸೃಷ್ಟಿಸಿದ್ದರು.
Published: 02nd April 2022 12:09 PM | Last Updated: 02nd April 2022 12:09 PM | A+A A-

ವಿಲ್ ಸ್ಮಿತ್ ಆಸ್ಕರ್ ಗೆದ್ದ ಕ್ಷಣ
ಲಾಸ್ ಎಂಜೆಲಿಸ್: ನಟ ವಿಲ್ ಸ್ಮಿತ್ ಹಾಲಿವುಡ್‌ನ ಪ್ರತಿಷ್ಟಿತ ಆಸ್ಕರ್ ಅಕಾಡೆಮಿ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಜೊತೆ ವಿಲ್ ಸ್ಮಿತ್ ಯಾವುದೇ ಸಂಪರ್ಕವನ್ನು ಇಟ್ಟುಕೊಳ್ಳುವಂತಿಲ್ಲ.
ಇದನ್ನೂ ಓದಿ: ಆಸ್ಕರ್ ವೇದಿಕೆಯಲ್ಲಿ ಹಾಸ್ಯ ನಟ ಕ್ರಿಸ್ ರಾಕ್ ಗೆ ಕಪಾಳ ಮೋಕ್ಷ: ಕ್ಷಮೆ ಕೇಳಿದ ನಟ ವಿಲ್ ಸ್ಮಿತ್
ಈ ವರ್ಷದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರೂಪಕ ಕ್ರಿಸ್ ರಾಕ್ ಅವರಿಗೆ ವೇದಿಕೆಯ ಮೇಲೆ ಕಪಾಳಮೋಕ್ಷ ಮಾಡಿದ ವಿಲ್ ಸ್ಮಿತ್ ವಿವಾದ ಸೃಷ್ಟಿಸಿದ್ದರು. ಈ ಬಗ್ಗೆ ಕ್ಷಮೆ ಕೇಳಿರುವ ಸ್ಮಿತ್ 'ಆ ಘಟನೆ ಆಘಾತಕಾರಿ, ನೋವಿನ ಮತ್ತು ಕ್ಷಮಿಸಲಾಗದ ಸಂಗತಿ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಳ್ಳಗಿದೀನಿ ಅಂತ ಸಿನಿಮಾ ಚಾನ್ಸ್ ಕಳಕೊಂಡಿದ್ದೀನಿ, ಬೆಳ್ಳಗಿರೋದ್ ತಪ್ಪಾ?: 'ಕಾಡ' ವಿಲನ್ ಶ್ರೀರಾಮ್
'ನಾನು ಅಕಾಡೆಮಿಯ ನಂಬಿಕೆಗೆ ದ್ರೋಹ ಎಸಗಿದ್ದೇನೆ. ಇತರ ನಾಮನಿರ್ದೇಶಿತರು ಮತ್ತು ವಿಜೇತರ ಸಂತೋಷದ ಕ್ಷಣಗಳನ್ನು ಆಚರಿಸುವ ಅವಕಾಶವನ್ನು ನಾನು ಕಿತ್ತುಕೊಂಡಿದ್ದೇನೆ. ನನ್ನ ಹೃದಯ ಛಿದ್ರವಾಗಿದೆ. ಆದ್ದರಿಂದ, ನಾನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ನ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಮತ್ತು ಮಂಡಳಿಯ ಯಾವುದೇ ಮುಂದಿನ ಪರಿಣಾಮಗಳನ್ನು ಸ್ವೀಕರಿಸುತ್ತೇನೆ' ಎಂದು ವಿಲ್ ಸ್ಮಿತ್ ಹೇಳಿದ್ದಾರೆ.
ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಕಾರ್ಯಕ್ರಮ: ವೇದಿಕೆ ಮೇಲೆ ಸಹನಟನಿಗೆ ಕಪಾಳ ಮೋಕ್ಷ ಮಾಡಿದ ನಟ ವಿಲ್ ಸ್ಮಿತ್!