
ಗಣೇಶ್, ಪ್ರೀತಂ ಗುಬ್ಬಿ
ಮುಂಗಾರು ಮಳೆ ಸಿನಿಮಾಗೆ ಕಥೆ ಬರೆದಿದ್ದ ಪ್ರೀತಂ ಗುಬ್ಬಿ ಮತ್ತು ನಟ ಗಣೇಶ್ ಜೊತೆಯಾಗಿ ಸಿನಿಮಾ ಮಾಡುತ್ತಿರುವ ಬಗ್ಗೆ ಈ ಹಿಂದೆ ಸುದ್ದಿ ಪ್ರಕಟವಾಗಿತ್ತು. ಇದೀಗ ಆ ಸಿನಿಮಾದ ಹೆಸರು ಬಹಿರಂಗವಾಗಿದೆ.
ಇದನ್ನೂ ಓದಿ: ವಿನಯ್ ರಾಜಕುಮಾರ್ ಅಭಿನಯದ 'ಅಂದೊಂದಿತ್ತು ಕಾಲ' ಸಿನಿಮಾದಲ್ಲಿ ರವಿಚಂದ್ರನ್!
'ಬಾನದಾರಿಯಲ್ಲಿ' ಎನ್ನುವ ಸಿನಿಮಾದಲ್ಲಿ ಈ ಜೋಡಿ ಜೊತೆಯಾಗುತ್ತಿರುವುದಾಗಿ ತಿಳಿದುಬಂದಿದೆ. ಅಡ್ವೆಂಚರ್ ಸಿನಿಮಾ ಆಗಿದ್ದರೂ ಅದರಲ್ಲಿ ಪ್ರೀತಿಯ ಎಳೆ ಇರಲಿದೆ ಎಂದು ನಿರ್ದೇಶಕ ಪ್ರೀತಂ ತಿಳಿಸಿದ್ದಾರೆ. ಮುಂಗಾರು ಮಳೆ ನಂತರ ಗಣೇಶ್ ಮತ್ತು ಪ್ರೀತಂ ಕಾಂಬಿನೇಷನ್ನಿನಲ್ಲಿ ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ ಸಿನಿಮಾಗಳು ಮೂಡಿಬಂದಿದ್ದವು.
ಇದನ್ನೂ ಓದಿ: ಬಾದಾಮಿಯಲ್ಲಿ ಯೋಗರಾಜ್ ಭಟ್ಟರ 'ಗರಡಿ' ಟೈಟಲ್ ಸಾಂಗ್ ಚಿತ್ರೀಕರಣ ಪೂರ್ಣ: ವಿಶೇಷ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್
ಈ ಸಿನಿಮಾ ಕಥೆಯನ್ನು ಸಿನಿಮೆಟೊಗ್ರಾಫರ್ ಪ್ರೀತಾ ಜಯರಾಮನ್ ಹಾಗೂ ಪ್ರೀತಂ ಗುಬ್ಬಿ ರೂಪಿಸಿದ್ದಾರೆ ಎನ್ನುವುದು ವಿಶೇಷ. ಮಾಸ್ತಿ ಸಿನಿಮಾ ಸಂಭಾಷಣೆ ಹೊಣೆಯನ್ನು ಹೊತ್ತರೆ, ಸಂಗೀತ ವಿ. ಹರಿಕೃಷ್ಣ ಅವರದು. ಅಭಿಲಾಶ್ ಅವರು ಕ್ಯಾಮೆರಾ ಹಿಡಿಯುತ್ತಿದ್ದಾರೆ.
ಇದನ್ನೂ ಓದಿ: ಬೆಳ್ಳಗಿದೀನಿ ಅಂತ ಸಿನಿಮಾ ಚಾನ್ಸ್ ಕಳಕೊಂಡಿದ್ದೀನಿ, ಬೆಳ್ಳಗಿರೋದ್ ತಪ್ಪಾ?: 'ಕಾಡ' ವಿಲನ್ ಶ್ರೀರಾಮ್