
ಇಳಯರಾಜಾ
ಚೆನ್ನೈ: ದಕ್ಷಿಣ ಭಾರತದ ಸಂಗೀತ ದಿಗ್ಗಜ ಇಳಯರಾಜಾ ಅವರಿಗೆ ಆಮ್ ಸ್ಟರ್ ಡ್ಯಾಮ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ.
ಇದನ್ನೂ ಓದಿ: 'ದಿ ಮಾಸ್ಕ್' ಖ್ಯಾತಿಯ ಹಾಸ್ಯ ನಟ ಜಿಮ್ ಕ್ಯಾರಿ ಚಿತ್ರರಂಗಕ್ಕೆ ನಿವೃತ್ತಿ
ಇಂಡೋ- ಇಂಗ್ಲೀಷ್ ಸಿನಿಮಾ 'ಎ ಬ್ಯೂಟಿಫುಲ್ ಬ್ರೇಕಪ್' ನಲ್ಲಿನ ಸಂಗೀತ ನಿರ್ದೇಶನಕ್ಕಾಗಿ ಇಳಯರಾಜ ಅವರಿಗೆ ಈ ಪ್ರಶಸ್ತಿ ಅರಸಿ ಬಂದಿದೆ. ಸಿನಿಮಾದಲ್ಲಿ ಇಳಯರಾಜಾ ಅವರು ಸಂಯೋಜಿಸಿದ್ದ 30 ಸೌಂಡ್ ಟ್ರ್ಯಾಕ್ ಗಳನ್ನು ಬಳಸಿಕೊಳ್ಳಲಾಗಿತ್ತು.
1/2 : We win best score for our film #abeautifulbreakup with composer @ilaiyaraaja at the #amsterdamfilmfestival @JamesMelville pic.twitter.com/VsMdG29Dcb
— Sir Marco Robinson (@marcorobinson7) March 31, 2022
ಇದನ್ನೂ ಓದಿ: ಹಾಲಿವುಡ್ ನ ಪ್ರತಿಷ್ಟಿತ ಆಸ್ಕರ್ ಅಕಾಡೆಮಿಗೆ ನಟ ವಿಲ್ ಸ್ಮಿತ್ ರಾಜಿನಾಮೆ: ಕಪಾಳಮೋಕ್ಷಕ್ಕೆ ಕ್ಷಮೆ ಕೋರಿದ ನಟ
'ಎ ಬ್ಯೂಟಿಫುಲ್ ಬ್ರೇಕಪ್' ಇಳಯರಾಜಾ ಅವರ 1422ನೇ ಸಿನಿಮಾ ಎನ್ನುವುದು ವಿಶೇಷ. ಅಲ್ಲದೆ ಇದು ಅವರ ಮೊದಲ ಅಂತಾರಾಷ್ಟ್ರೀಯ ಪ್ರಾಜೆಕ್ಟ್.ಅಜಿತ್ ವಸನ್ ಈ ಸಿನಿಮಾದ ನಿರ್ದೇಶಕರು.
ಇದನ್ನೂ ಓದಿ: ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರ 'ಕಸ್ತೂರಿ ಮಹಲ್' ಬಿಡುಗಡೆಗೆ ಸಿದ್ಧ