ಕೆಜಿಎಫ್ 2 ಬಿಡುಗಡೆ ದಿನವೇ ಓಟಿಟಿಗೆ ಪವರ್ ಫುಲ್ 'ಜೇಮ್ಸ್' ಎಂಟ್ರಿ!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಜಾತ್ರೆ ಥಿಯೇಟರ್ ನಲ್ಲಿ ಜೋರಾಗಿರುವಾಗಲೇ ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ. ಅದೇನೆಂದರೆ ಆಕ್ಷನ್, ಥ್ರಿಲ್ಲರ್ ಸಿನಿಮಾ ಜೇಮ್ಸ್ ಓಟಿಟಿಗೆ ಎಂಟ್ರಿ ಕೊಡಲಿದೆ.
Published: 04th April 2022 01:33 AM | Last Updated: 04th April 2022 01:17 PM | A+A A-

ಜೇಮ್ಸ್ ಸ್ಟಿಲ್
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಜಾತ್ರೆ ಥಿಯೇಟರ್ ನಲ್ಲಿ ಜೋರಾಗಿರುವಾಗಲೇ ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ. ಅದೇನೆಂದರೆ ಆಕ್ಷನ್, ಥ್ರಿಲ್ಲರ್ ಸಿನಿಮಾ ಜೇಮ್ಸ್ ಓಟಿಟಿಗೆ ಎಂಟ್ರಿ ಕೊಡಲಿದೆ.
ಏಪ್ರಿಲ್ 14 ರಿಂದ ಸೋನಿ ಲೈವ್ ನಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಬಿಡುಗಡೆಯಾಗಲಿದೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಜೇಮ್ಸ್ ಓಟಿಟಿಗೂ ಲಗ್ಗೆ ಇಡಲಿದೆ. ಜೇಮ್ಸ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರವಾಗಿದ್ದು ಅವರ ಹುಟ್ಟುಹಬ್ಬ ಮಾರ್ಚ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು.