'ಪಟ್ಟೆ ಪಟ್ಟೆ ಹುಲಿ, ಕೊಟ್ಟೆ ಕೊಟ್ಟೆ ತೊಗೊ’; ಅಪ್ಪುಗೆ 'ವಿಕ್ರಾಂತ್ ರೋಣ' ತಂಡದ ಗೌರವ
ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಸಿನಿಮಾದಲ್ಲಿ ಅಪ್ಪುವಿಗೆ ಒಂದು ದೃಶ್ಯದಲ್ಲಿ ಗೌರವ ಸಲ್ಲಿಸಿದ್ದಾರೆ.
Published: 04th April 2022 02:22 PM | Last Updated: 04th April 2022 02:58 PM | A+A A-

ಪುನೀತ್ ರಾಜಕುಮಾರ್
ದಿವಂಗತ ನಟ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಸಿನಿಮಾದಲ್ಲಿ ಅಪ್ಪುವಿಗೆ ಒಂದು ದೃಶ್ಯದಲ್ಲಿ ಗೌರವ ಸಲ್ಲಿಸಿದ್ದಾರೆ.
ಪಟ್ಟೆ ಪಟ್ಟೆ ಹುಲಿ. ಕೊಟ್ಟೆ ಕೊಟ್ಟೆ ತೊಗೊ’ ಎಂಬುದು 1989 ರಲ್ಲಿ ತೆರೆಕಂಡ ಪರಶುರಾಮ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ ದೃಶ್ಯದಲ್ಲಿ ಬಳಸಲಾದ ಈ ಪಾಸ್ವರ್ಡ್ ಡೈಲಾಗ್ ಅನ್ನು ವಿಕ್ರಾಂತ್ ರೋಣ ಸಿನಿಮಾದಲ್ಲಿಯೂ ಬಳಸಲಾಗಿದೆ.
ಪರಶುರಾಮ ಸಿನಿಮಾದಲ್ಲಿ ಡಾ. ರಾಜಕುಮಾರ್ ನಟಿಸಿದ್ದು ಪುನೀತ್ ಬಾಲನಟನಾಗಿ ಅಭಿನಯಿಸಿದ್ದರು.ನಿರ್ದೇಶಕ ಅನೂಪ್ ಭಂಡಾರಿ ಆ ಸಿನಿಮಾ ಡೈಲಾಗ್ ಬಳಸಿದ್ದಾರೆ.
ಇದನ್ನೂ ಓದಿ: ಕಿಚ್ಚ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್ ಡೇಟ್ ಫಿಕ್ಸ್!
ನಾನು ಬಾಲ್ಯದಲ್ಲಿ ಚಲನಚಿತ್ರವನ್ನು ನೋಡಿದ್ದೆ, ಮತ್ತು ನಾವು ಅದನ್ನು ನಮ್ಮ ಆಟಗಳಲ್ಲಿ ಹೆಚ್ಚಾಗಿ ಬಳಸುತ್ತಿದ್ದೆವು. ಈಗ ಈ ಪಾಸ್‌ವರ್ಡ್ ನನ್ನ ಚಿತ್ರದ ಭಾಗವೂ ಆಗಿದೆ.
3 ವರ್ಷಗಳ ಹಿಂದೆ ಚಿತ್ರಕ್ಕೆ ಸಂಭಾಷಣೆ ಬರೆಯುವಾಗ ನಾನು ಈ ಡೈಲಾಗ್ ಬಳಸಿದ್ದೆ, "ಈ ಸಂಭಾಷಣೆಯನ್ನು ಬರೆಯುವಾಗ ಅಪ್ಪುಗೆ ಗೌರವ ಸಲ್ಲಿಸಬೇಕಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದು ಅನೂಪ್ ತಿಳಿಸಿದ್ದಾರೆ.