ಜಯತೀರ್ಥ ನಿರ್ದೇಶನದ 'ಕೈವ' ದಲ್ಲಿ ಧನ್ವೀರ್ ನಟನೆ
ಜಯತೀರ್ಥ ನಿರ್ದೇಶನದ ಕೈವ ಸಿನಿಮಾದಲ್ಲಿ ಧನ್ವೀರ್ ನಟಿಸುತ್ತಿದ್ದಾರೆ. ಯುಗಾದಿಯ ಶುಭ ಮುೂಹೂರ್ತದಲ್ಲಿ ಸರಳವಾಗಿ ಸಿನಿಮಾ ಆರಂಭವಾಗಿದೆ. ಒಲವೇ ಮಂದಾರ, ಬ್ಯೂಟಿಫುಲ್ ಮನಸ್ಸುಗಳು, ಬನಾರಸ್ ಸಿನಿಮಾ ನಿರ್ದೇಶಕ ಜಯತೀರ್ಥ ಆಸಕ್ತಿದಾಯಕ ಕಥೆ ಸಿದ್ದಪಡಿಸಿದ್ದಾರೆ.
Published: 05th April 2022 01:32 PM | Last Updated: 30th January 2023 01:01 PM | A+A A-

ಧನ್ವೀರ್
ಜಯತೀರ್ಥ ನಿರ್ದೇಶನದ ಕೈವ ಸಿನಿಮಾದಲ್ಲಿ ಧನ್ವೀರ್ ನಟಿಸುತ್ತಿದ್ದಾರೆ. ಯುಗಾದಿಯ ಶುಭ ಮುೂಹೂರ್ತದಲ್ಲಿ ಸರಳವಾಗಿ ಸಿನಿಮಾ ಆರಂಭವಾಗಿದೆ. ಒಲವೇ ಮಂದಾರ, ಬ್ಯೂಟಿಫುಲ್ ಮನಸ್ಸುಗಳು, ಬನಾರಸ್ ಸಿನಿಮಾ ನಿರ್ದೇಶಕ ಜಯತೀರ್ಥ ಆಸಕ್ತಿದಾಯಕ ಕಥೆ ಸಿದ್ದಪಡಿಸಿದ್ದಾರೆ.
ಕೈವದಲ್ಲಿ ಧನ್ವೀರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೈವ ಭಗವಂತನ ಹೆಸರಿನಿಂದ ಸ್ಫೂರ್ತಿ ಪಡೆದ ಸಿನಿಮಾ ಇದಾಗಿದೆ. 1983 ರಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಇನ್ನೂ ಹೆಚ್ಚಿನ ಮಾಹಿತಿಗಳಿ ಶೀಘ್ರದಲ್ಲೇ ಹೊರಬೀಳಲಿವೆ.
ಇದನ್ನೂ ಓದಿ: 'ವಾಮನ' ಶೂಟಿಂಗ್ ಆರಂಭಿಸಿದ ಧನ್ವೀರ್!
ಸದ್ಯ ಧನ್ವೀರ್ ಶಂಕರ್ ರಾಮನ್ ನಿರ್ದೇಶನದ ವಾಮನ ಸಿನಿಮಾ ದಲ್ಲಿ ಬ್ಯುಸಿಯಾಗಿದ್ದಾರೆ. ಬಜಾರ್ ಮತ್ತು ಬೈಟು ಲವ್ ಸಿನಿಮಾ ನಂತರ ಧನ್ವೀರ್ ವಾಮನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ, ಜಯತೀರ್ಥ ಅವರ ಮುಂದಿನ ಚಿತ್ರ ಬನಾರಸ್ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ಸಿನಿಮಾವನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲು ತಂಡ ನಿರ್ಧರಿಸಿದೆ.
ಈ ಚಿತ್ರವು ಝೈದ್ ಖಾನ್ ಅವರ ಚೊಚ್ಚಲ ಚಿತ್ರವಾಗಿದೆ ಮತ್ತು ಸೋನಾಲ್ ಮೊಂಟೇರೊ ನಾಯಕಿಯಾಗಿ ನಟಿಸಿದ್ದಾರೆ. ಬನಾರಸ್, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆಯಾಗಲಿದೆ. ವಾರಣಾಸಿಯ ಹಿನ್ನೆಲೆಯಲ್ಲಿ ಎಲ್ಲಾ 64 ಘಾಟ್‌ಗಳಲ್ಲಿ ಚಿತ್ರೀಕರಿಸಿದ್ದಾರೆ.