
F0R REGN ಸಿನಿಮಾದ ಫರ್ಸ್ಟ್ ಲುಕ್
2020ರ ಸೂಪರ್ ಹಿಟ್ ಚಿತ್ರಗಳಾದ "ದಿಯಾ" ಹಾಗೂ "ಲವ್ ಮಾಕ್ಟೇಲ್" ಚಿತ್ರಗಳ ಮೂಲಕ ಮನೆಮಾತಾಗಿರುವ ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ಅವರಿಬ್ಬರೂ ಜೊತೆಯಾಗಿ ಸಿನಿಮಾದ ಫರ್ಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಹೊಸ ಸಿನಿಮಾದ ಹೆಸರು "F0R REGN". (ಫಾರ್ ರಿಜಿಸ್ಟ್ರೇಷನ್).
ಇದನ್ನೂ ಓದಿ: ಚಿರಂಜೀವಿ ಸರ್ಜಾ ನಟನೆಯ 'ರಾಜ ಮಾರ್ತಾಂಡ' ಸಿನಿಮಾ ಪೋಸ್ಟರ್ ಬಿಡುಗಡೆ
"F0R REGN" ಚಿತ್ರದ ಫಸ್ಟ್ ಲುಕ್ ಗೆ ಕನ್ನಡ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ 10 ಲಕ್ಷಕ್ಕೂ ಅಧಿಕ ಲೈಕ್ಸ್ ದೊರಕಿದೆ. ಸಿನಿಮಾದ ಬಹುತೇಕ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ.
ಇದನ್ನೂ ಓದಿ: 'ಬಿಳಿ ಚುಕ್ಕಿ ಹಳ್ಳಿ ಹಕ್ಕಿ' ಸಿನಿಮಾದಲ್ಲಿ ಬಿಗ್ ಬಾಸ್ ಸ್ಪರ್ಧಿ ವೈಷ್ಣವಿ ನಾಯಕಿ
ಅಶು ಮತ್ತು ಅನ್ವಿಯ ಪ್ರೀತಿಯ ಪಯಣ ಇದೀಗ ನಿಮ್ಮ ಮುಂದೆ..!!
— Milana (@MilanaNagaraj) April 2, 2022
Meet Ashu & Anvi from #ForRegistration. #ForRegistration #FirstLook #PruthviAmbaar #MilanaNagaraj #ForRegn #HappyUgadi #HarishaRK #NaveenDwarakanath #NNaveenRao #NischalFilms #ZeroBitrate pic.twitter.com/0yi5yAGA1n
ನಿಶ್ಚಲ್ ಫಿಲಂಸ್ ಅಡಿ ಎನ್ .ನವೀನ್ ರಾವ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದ್ವಾರಕನಾಥ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹೊಣೆಯನ್ನೂ ಅವರೇ ಹೊತ್ತುಕೊಂಡಿದ್ದಾರೆ. ಆರ್.ಕೆ.ಹರೀಶ್ ಸಂಗೀತ ನಿರ್ದೇಶನ, ಅಭಿಷೇಕ್ ಕಳತ್ತಿ ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್ ಅವರ ಸಂಕಲನ ಚಿತ್ರಕ್ಕಿದೆ.
ಇದನ್ನೂ ಓದಿ: ಉಢಾಳ್ ಬಾಬು ಪ್ರಮೋದ್ ಈಗ 'ಬಾಂಡ್ ರವಿ': ಕುತೂಹಲ ಹೆಚ್ಚಿಸಿದ ಸಿನಿಮಾದ ಫರ್ಸ್ಟ್ ಲುಕ್