'ತ್ರಿಕೋನ'ದಲ್ಲಿದೆ ಪ್ರತಿಯೊಬ್ಬರ ಕಷ್ಟ ಸುಖದ ನಡುವಿನ ಜೀವನ ಸಾರ: ನಿರ್ಮಾಪಕ ರಾಜಶೇಖರ್
ಕಷ್ಟ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಬರುತ್ತೆ. ಆದರೆ 'ತ್ರಿಕೋನ' ಸಿನಿಮಾದಲ್ಲಿ ಕಷ್ಟ ಎನ್ನುವ ಹೆಸರಿನ ಪಾತ್ರವೇ ಇದೆ. ಈ ಸಿನಿಮಾದ ಕಥೆ ನಿರ್ಮಾಪಕ ರಾಜಶೇಖರ್ ಅವರದು. ಈ ಸಿನಿಮಾವನ್ನು ನೀವೇ ಏಕೆ ನಿರ್ದೇಶನ ಮಾಡಲಿಲ್ಲ ಎನ್ನುವ ಪ್ರಶ್ನೆಗೆ ಅವರಿಂದ ಅಚ್ಚರಿಯ ಉತ್ತರ ಸಿಗುತ್ತೆ. ಸಿನಿಮಾ ಎಪ್ರಿಲ್ 8ರಂದು ಬಿಡುಗಡೆಯಾಗುತ್ತಿದೆ.
Published: 05th April 2022 04:37 PM | Last Updated: 05th April 2022 05:00 PM | A+A A-

ತ್ರಿಕೋನ ಸಿನಿಮಾ ಸ್ಟಿಲ್
'ತ್ರಿಕೋನ' ಚಿತ್ರ ಏ.8ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಎಪ್ರಿಲ್ 1ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಪುನೀತ್ ರಾಜ್ ಕುಮಾರ್ ಅಭಿಮಾನಿಯಾಗಿ ಅವರ ಜೇಮ್ಸ್ ಸಿನಿಮಾ ಓಡುತ್ತಿರುವಾಗ ಅದರ ಜೊತೆ ತಮ್ಮ ಸಿನಿಮಾ ಓಡಬಾರದು ಎನ್ನುವ ದೃಷ್ಟಿಯಿಂದ ಬಿಡುಗಡೆ ಮುಂದೂಡಲಾಯ್ತೆಂದು ನಿರ್ಮಾಪಕ ರಾಜಶೇಖರ್ ತಿಳಿಸಿದ್ದರು.
ಇದನ್ನೂ ಓದಿ: ರಿಲೀಸ್ ಗೆ ರೆಡಿಯಾಗಿದೆ 'ತ್ರಿಕೋನ': 200 ಥಿಯೇಟರ್ ಗಳಲ್ಲಿ ಬಿಡುಗಡೆ

ತ್ರಿಕೋನ ನಿರ್ಮಾಪಕ ರಾಜಶೇಖರ್ 'ಬರ್ಫಿ' ಸೇರಿದಂತೆ ಒಟ್ಟು 3 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ತ್ರಿಕೋನ ಸಿನಿಮಾದ ಕಥೆ ಅವರದೇ. ಈ ಸಿನಿಮಾವನ್ನು ಏಕೆ ನೀವೇ ನಿರ್ದೇಶನ ಮಾಡಲಿಲ್ಲ ಎನ್ನುವ ಪ್ರಶ್ನೆ ಕೇಳಿದಾಗ ರಾಜಶೇಖರ್ ಅವರಿಂದ ಅಚ್ಚರಿಯ ಕಥೆ ದೊರಕಿತ್ತು.
ಇದನ್ನೂ ಓದಿ: 'ದಿಯಾ' ನಟ, 'ಲವ್ ಮಾಕ್ಟೇಲ್' ನಟಿ ಸಿನಿಮಾದ ಫರ್ಸ್ಟ್ ಲುಕ್ ಗೆ ಸಿನಿಮಾಸಕ್ತರು ಫಿದಾ
ಶುರುವಿನಲ್ಲಿ ತ್ರಿಕೋನ ಸಿನಿಮಾವನ್ನು ರಾಜಶೇಖರ್ ಅವರೇ ನಿರ್ದೇಶನ ಮಾಡಬೇಕಿತ್ತು. ಚಂದ್ರಕಾಂತ್ ಅವರು ಆ ಸಂದರ್ಭದಲ್ಲಿ ಕೇವಲ ಸಂಭಾಷಣೆಕಾರರಾಗಿದ್ದರು. ಸಂಭಾಷಣೆ ರಚಿಸುವಾಗ ಕಥೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದರು. ಆ ಬದಲಾವಣೆ ರಾಜಶೇಖರ್ ಅವರಿಗೆ ತುಂಬಾ ಹಿಡಿಸಿತ್ತು. ಹೀಗಾಗಿ ರಾಜಶೇಖರ್, ಚಂದ್ರಕಾಂತ್ ಅವರನ್ನೇ ನಿರ್ದೇಶಕರನ್ನಾಗಿ ಮಾಡಿದರು.
ಇದನ್ನೂ ಓದಿ: ಮೂರು ತಲೆಮಾರಿನ ಕಥೆಯುಳ್ಳ 'ತ್ರಿಕೋನ' ಚಿತ್ರಕ್ಕೆ ಯು/ಎ ಪ್ರಮಾಣಪತ್ರ: ಏಪ್ರಿಲ್ ನಲ್ಲಿ ಬಿಡುಗಡೆ
ಸಿನಿಮಾದಲ್ಲಿ ಕಷ್ಟ ಎನ್ನುವ ಪಾತ್ರವೊಂದಿದೆ ಎನ್ನುವುದು ಅಚ್ಚರಿಯ ಸಂಗತಿ. ಬಾಲ್ಯ ಯೌವ್ವನ ವೃದ್ಧಾಪ್ಯ ಮೂರು ಹಂತಗಳಲ್ಲಿ ಜನರು ಈ ಕಷ್ಟ ಎನ್ನುವ ಪಾತ್ರಧಾರಿಯನ್ನು ಯಾವ ರೀತಿ ಎದುರಿಸುತ್ತಾರೆ ಎನ್ನುವುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ: ಉಢಾಳ್ ಬಾಬು ಪ್ರಮೋದ್ ಈಗ 'ಬಾಂಡ್ ರವಿ': ಕುತೂಹಲ ಹೆಚ್ಚಿಸಿದ ಸಿನಿಮಾದ ಫರ್ಸ್ಟ್ ಲುಕ್

ಪ್ರೊಡ್ಯೂಸರ್ ಆಗೋದು ಡೈರೆಕ್ಟರ್ ಆಗೋದಕ್ಕಿಂತ ಕಷ್ಟ ಅನ್ನೋದು ಸಿನಿಮಾದ ನಿರ್ಮಾಣ ಹೊಣೆಯನ್ನು ಹೊತ್ತಿರುವ ರಾಜಶೇಖರ್ ಅವರ ಅನುಭವದ ನುಡಿ. ಒಬ್ಬ ನಿರ್ದೇಶಕ ಮತ್ತೊಬ್ಬ ನಿರ್ದೇಶಕನಿಗೆ ಸಪೋರ್ಟ್ ಮಾಡಿದಾಗಲೇ ಸಿನಿಮಾ ಚೆನ್ನಾಗಿ ಮೂಡಿಬರುತ್ತದೆ. ಅದಕ್ಕೆ ರಿಕೋನ ಸಿನಿಮಾ ಅಂದುಕೊಂಡಂತೆಯೇ ಚೆನ್ನಾಗಿ ಮೂಡಿಬಂದಿರುವುದೇ ಸಾಕ್ಷಿ ಅಂತಾರೆ ರಾಜಶೇಖರ್.
ಇದನ್ನೂ ಓದಿ: 'ಬಾನದಾರಿಯಲ್ಲಿ' ಸಿನಿಮಾದಲ್ಲಿ ಒಂದಾದ 'ಮುಂಗಾರು ಮಳೆ' ಜೋಡಿ: ಮರುಕಳಿಸಲಿದೆಯೇ ಗಣೇಶ್- ಪ್ರೀತಂ ಗುಬ್ಬಿ ಮ್ಯಾಜಿಕ್?
ಸುರೇಶ್ ಹೆಬ್ಳಿಕರ್, ಲಕ್ಷ್ಮೀ, ಅಚ್ಯುತ್ ಕುಮಾರ್, ಸುಧಾರಾಣಿ, ಸಾಧು ಕೋಕಿಲ, ಮಾರುತೇಶ್, ರಾಜ್ ವೀರ್, ಬೇಬಿ ಅದಿತ್ಯ, ಹಾಸಿನಿ, ಮನದೀಪ್ ರಾಯ್, ರಾಕ್‌ಲೈನ್ ಸುಧಾಕರ್ ಸೇರಿದಂತೆ ಹಲವಾರು ನಟರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣದ ಟೀಸರ್ ರಿಲೀಸ್: ಚಿತ್ರ ಬಿಡುಗಡೆ ದಿನಾಂಕ ಬಹಿರಂಗ