'ಆಟಿಸಂ' ಸಂಬಂಧಿತ 'ವರ್ಣಪಟಲ' ಸಿನಿಮಾ ರಿಲೀಸ್ ಡೇಟ್ ಫಿಕ್ಸ್!
ಆಟಿಸಂಗೆ ತುತ್ತಾಗಿರುವ ಮಕ್ಕಳ ಕತೆಯನ್ನು ‘ವರ್ಣಪಟಲ’ ಚಿತ್ರದ ಮೂಲಕ ಹೇಳುತ್ತಿದ್ದಾರೆ ನಿರ್ದೇಶಕ ಚೇತನ್ ಮುಂಡಾಡಿ. ಚಿತ್ರದ ಶೂಟಿಂಗ್ ಮುಗಿದಿದ್ದು ಏಪ್ರಿಲ್ 8ರಂದು ತೆರೆಗೆ ಬರಲಿದೆ.
Published: 06th April 2022 01:54 PM | Last Updated: 06th April 2022 02:06 PM | A+A A-

ವರ್ಣಪಟಲ ಸಿನಿಮಾ ಸ್ಟಿಲ್
ಆಟಿಸಂಗೆ ತುತ್ತಾಗಿರುವ ಮಕ್ಕಳ ಕತೆಯನ್ನು ‘ವರ್ಣಪಟಲ’ ಚಿತ್ರದ ಮೂಲಕ ಹೇಳುತ್ತಿದ್ದಾರೆ ನಿರ್ದೇಶಕ ಚೇತನ್ ಮುಂಡಾಡಿ. ಚಿತ್ರದ ಶೂಟಿಂಗ್ ಮುಗಿದಿದ್ದು ಏಪ್ರಿಲ್ 8ರಂದು ತೆರೆಗೆ ಬರಲಿದೆ.
ಲಂಡನ್ ಮೂಲದ ಮಕ್ಕಳ ತಜ್ಞೆ ಸರಸ್ವತಿ ಹೊಸದುರ್ಗ, ಸಿನಿಮಾ ಸಂಬಂಧ ಮಾತನಾಡಿದ್ದಾರೆ. ವರ್ಣಪಟಲ ಚಿತ್ರದಲ್ಲಿ ಜ್ಯೋತಿಕಾ ರೈ, ಬಾಲ ಕಲಾವಿದರು-ಅಂಶಿಕಾ ಶೆಟ್ಟಿ, ಧನಿಕಾ ಹೆಗ್ಡೆ ಮತ್ತು ಹಂಶಿಕಾ ನಟಿಸಿದ್ದಾರೆ. ಚಿತ್ರದಲ್ಲಿ ಸುಹಾಸಿನಿ ವೈದ್ಯೆಯಾಗಿ ಕಾಣಿಸಿಕೊಂಡಿದ್ದಾರೆ.
ಬೆಂಗಳೂರಿನ ವಾಣಿಜ್ಯೋದ್ಯಮಿ ಕವಿತಾ ಸಂತೋಷ್ ಅವರ ಸಮಾಜ ಮತ್ತು ಅನಾಥಾಶ್ರಮಗಳಲ್ಲಿನ ಅಂತಹ ಮಕ್ಕಳ ಜೀವನ ಪಯಣದ ಅವಲೋಕನಗಳನ್ನು ಆಧರಿಸಿ ನಾನು ಕಥೆಯನ್ನು ಬರೆದಿದ್ದೇನೆ. ವಿಶೇಷ ಅಗತ್ಯವುಳ್ಳ ಮಕ್ಕಳ ಪೋಷಕರ ಸವಾಲುಗಳನ್ನು ಚಿತ್ರವು ತೋರಿಸುತ್ತದೆ" ಎಂದು ಸರಸ್ವತಿ ಹೇಳುತ್ತಾರೆ.
ಅಂತಹ ಮಕ್ಕಳ ಮೇಲಿನ ದೌರ್ಜನ್ಯದ ಘಟನೆಗಳು ಹೆಚ್ಚುತ್ತಿರುವುದರಿಂದ ಜಾಗೃತಿ ಮೂಡಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕನ ‘ವರ್ಣಪಟಲ’ ಸಿನಿಮಾದಲ್ಲಿ 'ಆಟಿಸಂ' ಸಮಸ್ಯೆ ಕುರಿತ ಕಥಾವಸ್ತು
ಭೀಮಸೇನ ನಳಮಹಾರಾಜ ಖ್ಯಾತಿಯ ನಿರ್ದೇಶಕ ಕಾರ್ತಿಕ್ ಸರಗೂರ್ ಅವರೊಂದಿಗೆ ಅವರ ಪರಿಕಲ್ಪನೆ ಮತ್ತು ಆಲೋಚನೆಗಳನ್ನು ಚರ್ಚಿಸಲಾಯಿತು. ಪೋಷಕರಾದ ಪಲ್ಲವಿ ರಾವ್ ಕಥೆ ಅಂತಿಮಗೊಳಿಸುವಲ್ಲಿ ಸಹಾಯ ಮಾಡಿದರು. ಸಾಯಿ ಗಣೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕವಿತಾ ಸಂತೋಷ್ ಜೊತೆಗೆ ಸರಸ್ವತಿ ಹೊಸದುರ್ಗ ಚಿತ್ರ ನಿರ್ಮಿಸಿದ್ದಾರೆ. ಹರ್ಷವರ್ಧನ್ ರಾಜ್ ಅವರ ಸಂಗೀತವಿದೆ. ಗಣೇಶ್ ಹೆಗಡೆ ಛಾಯಾಗ್ರಹಣ ಮಾಡಿದ್ದಾರೆ.
ಈ ಚಿತ್ರ ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದ್ದು, ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. “ನಮ್ಮ ಚಿತ್ರ ಎಂಟು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಲಂಡನ್ ಇಂಡಿಪೆಂಡೆಂಟ್ ಫಿಲ್ಮ್ ಅವಾರ್ಡ್, 11ನೇ ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್, ವರ್ಲ್ಡ್ ಪ್ರೀಮಿಯರ್ ಫಿಲ್ಮ್ ಅವಾರ್ಡ್, ರೆಡ್ ಮೂವಿ ಅವಾರ್ಡ್ಸ್ ಮತ್ತು ಒನಿರೋಸ್ ಅವಾರ್ಡ್ ಸೇರಿದಂತೆ ಫೆಸ್ಟ್‌ಗಳಲ್ಲಿ ಇದು ಅಧಿಕೃತ ಆಯ್ಕೆಗಳಲ್ಲಿ ಒಂದಾಗಿದೆ.