ಕಥೆ, ಸ್ಕ್ರಿಪ್ಟ್ ಏನು ಬರೆಯೋಕೆ ಕೂತ್ರೂ ಮೊದ್ಲು ನನ್ ತಲೆಗೆ ಬರೋದೇ ಗಣೇಶ್: 'ಬಾನದಾರಿಯಲ್ಲಿ' ಪ್ರೀತಂ ಗುಬ್ಬಿ
'ಬಾನದಾರಿಯಲ್ಲಿ' ಸಿನಿಮಾ ಒಂದು ಅಡ್ವೆಂಚರಸ್ ಸಿನಿಮಾ. ಗಣೇಶ್ ಈವರೆಗೆ ನಿರ್ವಹಿಸದ ಪಾತ್ರ ಈ ಸಿನಿಮಾದಲ್ಲಿ ನೋಡಲು ಸಿಗುತ್ತೆ ಅನ್ನೋ ಗ್ಯಾರಂಟಿಯನ್ನು ನಿರ್ದೇಶಕ ಪ್ರೀತಂ ಗುಬ್ಬಿ ನೀಡುತ್ತಾರೆ.
Published: 06th April 2022 04:01 PM | Last Updated: 06th April 2022 04:16 PM | A+A A-

ನಿರ್ದೇಶಕ ಪ್ರೀತಂ ಗುಬ್ಬಿ
- ಹರ್ಷವರ್ಧನ್ ಸುಳ್ಯ
ಸಾಮಾನ್ಯವಾಗಿ ಯಾವುದೇ ಹೊಸ ಸಿನಿಮಾಗಳ ಪೋಸ್ಟರ್ ಗಳನ್ನು ಗಮನಿಸಿದರೆ ಅವೆಲ್ಲವುಗಳ ನಡುವೆ ಸಿಮಿಲಾರಿಟಿ ಕಣ್ಣಿಗೆ ರಾಚುತ್ತವೆ. ಡಿಜಿಟಲ್ ಪೇಂಟಿಂಗ್ ಮಾದರಿಯ ಪೋಸ್ಟರ್ ಗಳು, ಗಂಭೀರ ವದನ ನಾಯಕನ ಕ್ಲೋಸಪ್, ನಾಯಕ ಓಡುವ ಪೋಸ್ಟರ್ ಗಳು ಹೀಗೆ ಪೋಸ್ಟರ್ ಗಳಲ್ಲಿ ಅನೇಕ ವಿಧ. ಅವ್ಯಾವ ಕೆಟಗರಿಗೂ ಸೇರದ ಪೋಸ್ಟರ್ ವೊಂದು ಸಿನಿಮಾಸಕ್ತರ ಗಮನ ಸೆಳೆಯುತ್ತಿದೆ. ಪ್ರೀತಂ ಗುಬ್ಬಿ ನಿರ್ದೇಶನ, ಗಣೇಶ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಆ ಸಿನಿಮಾ ಹೆಸರು 'ಬಾನದಾರಿಯಲ್ಲಿ'. ಇತ್ತೀಚಿಗಷ್ಟೆ ಚಿತ್ರ ಘೋಷಣೆಯಾಗಿತ್ತು.
ಈ ಸಿನಿಮಾದ ಪೋಸ್ಟರ್ ನಲ್ಲಿ ಕನ್ನಡಿಗರು ಕನೆಕ್ಟ್ ಮಾಡಿಕೊಳ್ಳುವ ಯಾವುದೇ ಚಹರೆಗಳಿಲ್ಲ. ಅದೇ ಕಾರಣಕ್ಕೆ ಪೋಸ್ಟರ್ ಕಣ್ಸೆಳೆಯುತ್ತಿದೆ. ಇದು ಗಣೇಶ್ ಮತ್ತು ಪ್ರೀತಂ ಗುಬ್ಬಿ ಕಾಂಬಿನೇಷನ್ನಿನಲ್ಲಿ ಮೂಡಿ ಬರುತ್ತಿರೋ 4ನೇ ಸಿನಿಮಾ. ಮುಂಗಾರು ಮಳೆಗೆ ಕಥೆ ಬರೆದಿದ್ದ ಪ್ರೀತಂ ಗುಬ್ಬಿ ನಂತರ ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ, 99 ಸಿನಿಮಾಗಳನ್ನು ಗಣೇಶ್ ಜೊತೆ ಮಾಡಿದ್ದರು.
ಇದನ್ನೂ ಓದಿ: ಯುವ ರಾಜಕುಮಾರ್ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನ
As promised,here’s the title of our film
— Ganesh (@Official_Ganesh) April 2, 2022
*ಬಾನದಾರಿಯಲ್ಲಿ*
ನೋಡು ಎಂಥ ಚಂದ…
ಯುಗಾದಿ ಹಬ್ಬದ ಶುಭಾಶಯಗಳು ...
ಹರೆಯದ ಹೃದಯಗಳೇ ಹರಸಿ
#movietitle launch
@preethamgubbi pic.twitter.com/I8b5hAXKut
ಗಣೇಶ್ ಜೊತೆಗಿನ ಬಾಂಧವ್ಯದ ಬಗ್ಗೆ ಕೇಳಿದರೆ ಪ್ರೀತಂ ನಕ್ಕು ಹೇಳುತ್ತಾರೆ 'ಅಯ್ಯೊ, ಕಥೆ, ಸ್ಕ್ರಿಪ್ಟ್ ಏನು ಬರೆಯೋಕೆ ಕೂತ್ರೂ ಮೊದ್ಲು ನನ್ ತಲೆಗೆ ಬರೋದೇ ಗಣೇಶ್. ಅದ್ಕೇ ನನ್ನ ಪಾತ್ರಗಳು ಗಣೇಶ್ ಗೆ ಪಕ್ಕಾ ಸೂಟ್ ಆಗುತ್ವೆ'. ಇದೂ ಲವ್ ಸಬ್ಜೆಕ್ಟಾ ಎಂದು ಕೇಳಿದರೆ ಇಲ್ಲ ಎನ್ನುವ ಉತ್ತರ ಪ್ರೀತಂ ಅವರಿಂದ ಸಿಗುತ್ತೆ. 'ಬಾನ ದಾರಿಯಲ್ಲಿ' ಸಿನಿಮಾ ಒಂದು ಅಡ್ವೆಂಚರಸ್ ಸಿನಿಮಾ. ಗಣೇಶ್ ಈವರೆಗೆ ನಿರ್ವಹಿಸದ ಪಾತ್ರ ಈ ಸಿನಿಮಾದಲ್ಲಿ ನೋಡಲು ಸಿಗುತ್ತೆ ಅನ್ನೋ ಗ್ಯಾರಂಟಿಯನ್ನು ನಿರ್ದೇಶಕ ಪ್ರೀತಂ ಗುಬ್ಬಿ ನೀಡುತ್ತಾರೆ.
ಇದನ್ನೂ ಓದಿ: ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ರಿಕಿ ಕೇಜ್ ಗೆ ಎರಡನೇ ಬಾರಿ ಪ್ರತಿಷ್ಟಿತ ಗ್ರ್ಯಾಮಿ ಪ್ರಶಸ್ತಿ
ಬಾನ ದಾರಿಯಲ್ಲಿ ಸಿನಿಮಾದ ಕಥೆ ಸಿನಿಮೆಟೊಗ್ರಾಫರ್ ಪ್ರೀತಾ ಜಯರಾಮನ್ ಅವರದು ಎನ್ನುವುದು ಅಚ್ಚರಿಯ ಸಂಗತಿ. ಎರಡು ವರ್ಷಗಳ ಹಿಂದೆ ಈ ಕಥೆಯನ್ನು ಅವರಿಂದ ಪ್ರೀತಂ ಗುಬ್ಬಿ ಕೇಳಿದ್ದರು. ಆ ಕಥೆಯನ್ನು ಸಿನಿಮಾ ಮಾಡಲು ಪ್ರೀತಾ ಅವರು ಒಪ್ಪಿಗೆ ನೀಡಿದರು. ಗುಬ್ಬಿಯವರನ್ನು ಕಾಡಿದ್ದ ಆ ಕಥೆ, ಕಡೆಗೆ ಚಿತ್ರಕಥೆ ಬರೆದು ಮುಗಿಸುವವರೆಗೂ ಸುಮ್ಮನೆ ಕೂರಲು ಬಿಟ್ಟಿರಲಿಲ್ಲ. ಸಿನಿಮಾದ ಶೂಟಿಂಗ್ ಮೇ ತಿಂಗಳಲ್ಲಿ ಶುರುವಾಗಲಿದೆ. ಸದ್ಯ ನಾಯಕಿಯ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದೆ.
ಪುನೀತ್ ರಾಜ್ ಕುಮಾರ್ ಅವರು ಬಾಲನಟರಾಗಿ ಹಾಡಿದ್ದ ಹಾಡನ್ನು ಶೀರ್ಷಿಕೆಯನ್ನಾಗಿ ಸಿನಿಮಾ ಇಟ್ಟುಕೊಂಡಿರುವುದು ವಿಶೇಷ. ಈ ಬಗ್ಗೆ ಪ್ರಶ್ನಿಸಿದಾಗ 'ಬಾನ ದಾರಿಯಲ್ಲಿ' ಅಂದರೆ way to skies. ಸಿನಿಮಾ ಕಥೆಗೆ ಆ ಹೆಸರು ಪೂರಕ ಎನ್ನುವ ಕಾರಣಕ್ಕೆ ಆ ಟೈಟಲ್ ಇಟ್ಟುಕೊಂಡಿದೀವಿ. ಬೇರಿನ್ನೇನೂ ಕಾರಣವಿಲ್ಲ. ಆದರೆ, ವೈಯಕ್ತಿಕವಾಗಿ ಈ ಸಿನಿಮಾ ಚಿತ್ರಕಥೆ ಮಾಡುವಾಗ ಪುನೀತ್ ಭಾವನಾತ್ಮಕವಾಗಿ ಕಾಡಿದ್ದಾಗಿ ಪ್ರೀತಂ ಹೇಳಿದ್ದಾರೆ.
ಇದನ್ನೂ ಓದಿ: 'ದಿಯಾ' ನಟ, 'ಲವ್ ಮಾಕ್ಟೇಲ್' ನಟಿ ಸಿನಿಮಾದ ಫರ್ಸ್ಟ್ ಲುಕ್ ಗೆ ಸಿನಿಮಾಸಕ್ತರು ಫಿದಾ
ಸಿನಿಮಾದಲ್ಲಿ ಆಫ್ರಿಕಾದ ಕನೆಕ್ಷನ್ ಇದೆ ಎನ್ನುವ ಸಂಗತಿ ಪೋಸ್ಟರ್ ನೋಡಿದರೆ ತಿಳಿಯುತ್ತದೆ. ಸಿನಿಮಾದ ಕಥೆಯ ಕುರಿತು ಹೆಚ್ಚೇನನ್ನೂ ಬಿಟ್ಟುಕೊಡದ ಪ್ರೀತಂ ಆಫ್ರಿಕಾದಲ್ಲಿ ಚಿತ್ರೀಕರಣ ನಡೆಸುವ ಕುರಿತು ಮಾಹಿತಿ ನೀಡಿದ್ದಾರೆ. ೨೫ ದಿನಗಳ ಕಾಲ ಆಫ್ರಿಕಾದಲ್ಲಿ ಅವರು ಚಿತ್ರೀಕರಣ ನಡೆಸಲಿದ್ದಾರೆ. ಜುಲೈ ತಿಂಗಳಲ್ಲಿ ಆಫ್ರಿಕಾ ಭಾಗದ ಚಿತ್ರೀಕರಣ ನಡೆಯಲಿದ್ದು, ಅಲ್ಲಿನ ಕಲಾವಿದರು ಸಿನಿಮಾದಲ್ಲಿ ನಟಿಸಲಿದ್ದಾರೆ.
ಇದನ್ನೂ ಓದಿ: ಉಢಾಳ್ ಬಾಬು ಪ್ರಮೋದ್ ಈಗ 'ಬಾಂಡ್ ರವಿ': ಕುತೂಹಲ ಹೆಚ್ಚಿಸಿದ ಸಿನಿಮಾದ ಫರ್ಸ್ಟ್ ಲುಕ್