ಸ್ಯಾಂಡಲ್ವುಡ್ 'ಕಾಲಚಕ್ರ'ದಲ್ಲಿ ವಸಿಷ್ಠ ಮತ್ತೊಂದು ಹೆಜ್ಜೆ: ಲಾಂಚ್ ಆಯ್ತು 'ಸಿಂಹ ಆಡಿಯೋ'
ನಟ ವಸಿಷ್ಠ ಸಿಂಹ ಅವರು ಗಾಯಕರಾಗಿಯೂ ಜನಪ್ರಿಯರಾಗಿದ್ದಾರೆ. ಗಾಯನದ ಮೇಲಿನ ಒಲವು ಅವರನ್ನು ಬೆಂಗಳೂರಿಗೆ ಕರೆತಂದಿತು, ಆದರೆ ಅದೃಷ್ಟ ಅವರನ್ನು ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾಗಿ ಅವರೇ ಅನೇಕ ಬಾರಿ ಹೇಳಿದ್ದಾರೆ.
Published: 07th April 2022 10:23 AM | Last Updated: 07th April 2022 02:23 PM | A+A A-

ಧನಂಜಯ್, ಹಂಸಲೇಖ ಮತ್ತು ವಸಿಷ್ಠ ಸಿಂಹ
ಯಶ್ ನಟನೆಯ ‘ರಾಜ ಹುಲಿ’ ಸಿನಿಮಾ ಮೂಲಕ ಸಾಕಷ್ಟು ಹೆಸರು ಮಾಡಿದ ಅವರಿಗೆ ನಂತರ ಹಲವು ಆಫರ್ಗಳು ಬಂದವು. ನಟನಾಗಿ, ಖಳನಾಗಿ, ರೊಮ್ಯಾಂಟಿಕ್ ಹೀರೋ ಆಗಿ ಅವರು ಎಲ್ಲರ ಮನ ಗೆದ್ದಿದ್ದಾರೆ. ಈಗ ಅವರು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ತಮ್ಮದೇ ಆಡಿಯೋ ಲೇಬಲ್ ಲಾಂಚ್ ಮಾಡಿದ್ದಾರೆ. ಈ ವಿಚಾರವನ್ನು ವಸಿಷ್ಠ ಸಿಂಹ ಅವರೇ ಅಧಿಕೃತ ಘೋಷಣೆ ಮಾಡಿದ್ದಾರೆ.
ನಟ ವಸಿಷ್ಠ ಸಿಂಹ ಅವರು ಗಾಯಕರಾಗಿಯೂ ಜನಪ್ರಿಯರಾಗಿದ್ದಾರೆ. ಗಾಯನದ ಮೇಲಿನ ಒಲವು ಅವರನ್ನು ಬೆಂಗಳೂರಿಗೆ ಕರೆತಂದಿತು, ಆದರೆ ಅದೃಷ್ಟ ಅವರನ್ನು ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾಗಿ ಅವರೇ ಅನೇಕ ಬಾರಿ ಹೇಳಿದ್ದಾರೆ.
ನಟ ವಸಿಷ್ಠ ಸಿಂಹ ಹೊಸ ಹೆಜ್ಜೆ ಇಟ್ಟಿದ್ದಾರೆ. ಈಗ ಸಿಂಹ ಆಡಿಯೋ ಕಂಪೆನಿ ತೆರೆದಿದ್ದು, ಕನ್ನಡ ಸಿನಿಮಾಗಳ ಹಾಡುಗಳಿಗೆ ಹೊಸ ಮಾರ್ಕೆಟ್ ತೆರೆದಿದ್ದಾರೆ. ಈ ಸಿಂಹ ಆಡಿಯೋ ಕಂಪೆನಿ ಲೋಗೋವನ್ನ ವಸಿಷ್ಠ ಸಿಂಹ ಅವರ ಗುರುವಾದ ಸಂಗೀತ ನಿರ್ದೇಶಕ ಹಂಸಲೇಖ ಲಾಂಚ್ ಮಾಡಿದ್ದಾರೆ
ಅವರ ನಟನೆಯ ‘ಕಾಲಚಕ್ರ’ ಸಿನಿಮಾದ ‘ನೀನೆ ಬೇಕು..’ ಹಾಡು ‘ಸಿಂಹ ಆಡಿಯೋ’ ಮೂಲಕ ಅವರ ಗೆಳೆಯ ಧನಂಜಯ ಬಿಡುಗಡೆ ಮಾಡಿದ್ದಾರೆ, ಹಾಡಿಗೆ ಗುರುಕಿರಣ್ ಸಂಗೀತಾ ನೀಡಿದ್ದು, ಸಂಚಿತ್ ಹೆಗ್ಜೆ ಹಿನ್ನೆಲೆ ಗಾಯನವಿದೆ. ಈ ಹಿಂದೆ ಹಲವು ಸಿನಿಮಾದ ಹಾಡುಗಳಿಗೆ ವಸಿಷ್ಠ ಸಿಂಹ ಧ್ವನಿಯಾಗಿದ್ದಾರೆ.
ಇದನ್ನೂ ಓದಿ: ಪ್ಯಾನ್ ಇಂಡಿಯಾ ಚಿತ್ರದಲ್ಲಿ ವಸಿಷ್ಠ ಸಿಂಹ ನಟನೆ!
ವಸಿಷ್ಠ ಅವರು ತಮ್ಮ ಆಡಿಯೋ ಲೇಬಲ್ ಬಾಲ್ಯದ ಕನಸು ಎಂದು ಹೇಳಿದ್ದಾರೆ, ತಮ್ಮ ಕನಸು ಅಂತಿಮವಾಗಿ ಹಂಸಲೇಖರಿಂದ ನನಸಾಯಿತು . “ನಾನು ಹಂಸಲೇಖ ಅವರ ದೊಡ್ಡ ಅಭಿಮಾನಿ, ಮತ್ತು ನನ್ನ ಬಾಲ್ಯದಿಂದಲೂ ಅವರ ಸಂಗೀತವನ್ನು ಕೇಳುತ್ತಿದ್ದೇನೆ. ನಾನು ಬೆಳೆಯುತ್ತಿರುವ ದಿನಗಳಲ್ಲಿ ಸಂಗೀತ ಸಂಯೋಜಕರನ್ನು ಭೇಟಿಯಾಗಲು ನನಗೆ ಸಹಾಯ ಮಾಡಬಹುದೆಂದು ಭಾವಿಸಿ ಲೋಗೋವನ್ನು ನಾನು ರಚಿಸಿದ್ದೇನೆ. ಹಂಸಲೇಖ ಅವರ ಫೋಟೋ ಇದ್ದ ಕಾರಣ ನಾನು ಶೃಂಗಾರ ಕಾವ್ಯ ಸಿನಿಮಾ ನೋಡಿದ್ದೆ, ನನ್ನ ನೆಚ್ಚಿನ ಗುರುಗಳು ಮತ್ತು ಸ್ನೇಹಿತ ಧನಂಜಯ್ ಇಬ್ಬರು ಸಿಂಹ ಆಡಿಯೋ ಲಾಂಚ್ ಮಾಡಿದ್ದು ನನಗೆ ಸಂತಸ ತಂದಿದೆ ಎಂದು ಹೇಳಿದ್ದಾರೆ.
ಹೊಸ ಸಂಗೀತ ಸಂಯೋಜಕರು ಮತ್ತು ಸಾಹಿತಿಗಳಿಗೆ ಅವಕಾಶವನ್ನು ಒದಗಿಸುವುದು ಈ ವೇದಿಕೆಯ ಪ್ರಮುಖ ಉದ್ದೇಶ. ಹೊಸ ಆಲ್ಬಂ ಬಿಡುಗಡೆ ಮಾಡಲು ನಾವು ಸಿದ್ಧರಾಗಿದ್ದೇವೆ, ನಮ್ಮಲ್ಲಿ ಹಲವು ಸಿನಿಮಾಗಳು ಇವೆ ಎಂದು ವಸಿಷ್ಠ ಹೇಳಿದ್ದಾರೆ, ತಮ್ಮ ನಟನೆಯ ಕಾಲ ಚಕ್ರ ಸಿನಿಮಾ ಸಿದ್ಧವಾಗಿದ್ದು, ಮೇ ತಿಂಗಳಲ್ಲಿ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ.