
ಶಿವರಾಜ್ ಕುಮಾರ್ ಸಿನಿಮಾಗೆ ಶ್ರೀನಿ ಡೈರೆಕ್ಷನ್
ಸಂದೇಶ್ ಪ್ರೊಡಕ್ಷನ್ ತಯಾರಾಗುತ್ತಿರುವ ಶಿವರಾಜಕುಮಾರ್ ನಟನೆಯ ಸಿನಿಮಾವನ್ನು ಚಿ. ಗುರುದತ್ ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.
ಆದರೆ ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಗುರುದತ್ ಈ ಪ್ರಾಜೆಕ್ಟ್ ನಿಂದ ಹಿಂದೆ ಸರಿದಿದ್ದು, ಓಲ್ಡ್ ಮಾಂಕ್ ಖ್ಯಾತಿಯ ಶ್ರೀನಿ ಹ್ಯಾಟ್ರಿಕ್ ಹೀರೋಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ನಿರ್ದೇಶಕರು ಈಗಾಗಲೇ ಶಿವರಾಜ್ ಕುಮಾರ್ ಜೊತೆ ಚರ್ಚೆ ನಡೆಸಿದ್ದು, ಹೀಸ್ಟ್ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸಲಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಪ್ರೊಡಕ್ಷನ್ ಹೌಸ್ ಚಿತ್ರೀಕರಣ ಆರಂಭಿಸುವ ಸಾಧ್ಯತೆಯಿದೆ.
ಸದ್ಯ ಶಿವಣ್ಣ ತಮ್ಮ 125 ನೇ ಚಿತ್ರವಾದ ವೇದಾ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಮೇ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಬೈರಾಗಿ ಚಿತ್ರದ ಬಿಡುಗಡೆಗಾಗಿ ಸೆಂಚುರಿ ಸ್ಟಾರ್ ಕಾಯುತ್ತಿದ್ದಾರೆ.
ಇದನ್ನೂ ಓದಿ: 'ಓಲ್ಡ್ ಮಾಂಕ್' ಬಾಟಲಿ ಬಗ್ಗೆ ಮುಂಚೆ ಗೊತ್ತೇ ಇರಲಿಲ್ಲ: 'ಓಲ್ಡ್ ಮಾಂಕ್' ಸಿನಿಮಾ ನಟಿ ಅದಿತಿ ಪ್ರಭುದೇವ
ಶ್ರೀನಿವಾಸ ಕಲ್ಯಾಣ’, ‘ಬೀರ್ಬಲ್’, ‘ಓಲ್ಡ್ ಮಾಂಕ್’ ಮುಂತಾದ ಸಿನಿಮಾಗಳ ಮೂಲಕ ಶ್ರೀನಿ ಅವರು ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತುಪಡಿಸಿದ್ದಾರೆ. ಈಗ ದೊಡ್ಡ ಜವಾಬ್ದಾರಿ ಅವರ ಹೆಗಲೇರಿದೆ. ಶಿವರಾಜ್ಕುಮಾರ್ ಅವರ ಸಿನಿಮಾಗೆ ನಿರ್ದೇಶನ ಮಾಡುವುದು ಎಂದರೆ ಸುಲಭದ ಮಾತಲ್ಲ. ಈ ಬಾರಿ ಶ್ರೀನಿ ಯಾವ ರೀತಿಯ ಕಥೆ ಹೇಳಲಿದ್ದಾರೆ ಎಂದು ತಿಳಿದುಕೊಳ್ಳುವ ಕೌತುಕ ಜನರಲ್ಲಿ ಮೂಡಿದೆ.
‘ಘೋಸ್ಟ್’ ಚಿತ್ರಕ್ಕೆ ಶ್ರೀನಿ ಅವರೇ ಕಥೆ ಬರೆದಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಶಿವರಾಜ್ಕುಮಾರ್ ಜೊತೆ ಬೇರೆ ಯಾವೆಲ್ಲ ಕಲಾವಿದರು ನಟಿಸಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಸದ್ಯ ಶಿವರಾಜ್ ಕುಮಾರ್ ಅತಿ ಬ್ಯುಸಿಯೆಸ್ಟ್ ನಟರಾಗಿದ್ದು, ನೀ ಸಿಗುವರೆಗೂ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.