ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ರಿಲೀಸ್ ಡೇಟ್ ಫಿಕ್ಸ್!
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷೆಯ ಮಾರ್ಟಿನ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಪೊಗರು ಸಿನಿಮಾ ಮೂಲಕ ಕೊನೆಯದಾಗಿ ಅಭಿಮಾನಿ ಮುಂದೆ ಬಂದಿದ್ದ ಧ್ರುವ ಸರ್ಜಾ ಇದೀಗ ಮಾರ್ಟಿನ್ ಮೂಲಕ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
Published: 11th April 2022 09:36 AM | Last Updated: 11th April 2022 01:07 PM | A+A A-

ಮಾರ್ಟಿನ್ ಸಿನಿಮಾ ಸ್ಟಿಲ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷೆಯ ಮಾರ್ಟಿನ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಪೊಗರು ಸಿನಿಮಾ ಮೂಲಕ ಕೊನೆಯದಾಗಿ ಅಭಿಮಾನಿ ಮುಂದೆ ಬಂದಿದ್ದ ಧ್ರುವ ಸರ್ಜಾ ಇದೀಗ ಮಾರ್ಟಿನ್ ಮೂಲಕ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
ಚಿತ್ರತಂಡ ರಿಲೀಸ್ ದಿನಾಂಕವನ್ನು ಇಲ್ಲಿಯವರೆಗೆ ರಿವೀಲ್ ಮಾಡಿರಲಿಲ್ಲ. ಈಗ ‘ಮಾರ್ಟಿನ್’ ಬಿಡುಗಡೆ ದಿನಾಂಕ ಘೋಷಣೆ ಆಗಿದ್ದು, 2022ರ ಸೆಪ್ಟೆಂಬರ್ 30ರಂದು ಸಿನಿಮಾ ಬಿಡುಗಡೆ ಆಗಲಿದೆ.
ಧ್ರುವ ಸರ್ಜಾ ಕುಟುಂಬ ಆಂಜನೇಯನ ಭಕ್ತರು. ಈ ಕಾರಣಕ್ಕೆ ರಾಮ ನವಮಿ ಹಬ್ಬದ ದಿನದಂದು ‘ಮಾರ್ಟಿನ್’ ಸಿನಿಮಾದ ರಿಲೀಸ್ ದಿನಾಂಕ ಘೋಷಣೆ ಮಾಡಲಾಗಿದೆ. ಮೋಷನ್ ಪೋಸ್ಟರ್ ಕೂಡ ಹಂಚಿಕೊಳ್ಳಲಾಗಿದ್ದು, ಧ್ರುವ ಅವರು ಮಳೆಯ ಕೆಳಗೆ ನಿಂತಿದ್ದಾರೆ. ಅವರ ತೋಳಿನ ಮೇಲೆ ‘ಇಂಡಿಯನ್’ ಎಂದು ಬರೆದಿರುವ ಹಚ್ಚೆ ಹೈಲೈಟ್ ಆಗಿದೆ. ಅವರ ಕಟ್ಟುಮಸ್ತಾದ ದೇಹ ಎಲ್ಲರ ಗಮನ ಸೆಳೆದಿದೆ.
ಇದನ್ನು ಓದಿ: ಮತ್ತೊಂದು ಥ್ರಿಲ್ಲರ್ ಸಿನಿಮಾದಲ್ಲಿ ಚಿನ್ನಾರಿ ಮುತ್ತ: ರಾಘು ಸಿನಿಮಾ ಫರ್ಸ್ಟ್ ಲುಕ್ ಬಿಡುಗಡೆ
ವೈಭವಿ ಶಾಂಡಿಲ್ಯ ಅವರು ‘ಮಾರ್ಟಿನ್’ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಅವರು ಮೊದಲು ನಟಿಸಿದ್ದು ಮರಾಠಿಯ ‘ಎಕ್ ಅಲ್ಬೇಲಾ’ ಸಿನಿಮಾದಲ್ಲಿ. ‘ಮಾರ್ಟಿನ್’ ಚಿತ್ರಕ್ಕೆ ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಧ್ರುವ ನಟನೆಯ ಮೊದಲ ಸಿನಿಮಾ ‘ಅದ್ದೂರಿ’ಗೆ ಆ್ಯಕ್ಷನ್-ಕಟ್ ಹೇಳಿದ್ದ ಅವರು ಈಗ ಮತ್ತೊಮ್ಮೆ ಧ್ರುವ ಜತೆ ಕೈ ಜೋಡಿಸಿದ್ದಾರೆ.
ಇದೊಂದು ಕಾಲೇಜ್ ಲವ್ ಸ್ಟೋರಿ ಜೊತೆ ಆಕ್ಷನ್ ಮನರಂಜನೆ ಸಿನಿಮಾವಾಗಿದೆಯಂತೆ. ಧ್ರುವ ಸರ್ಜಾ 'ಗ್ಯಾಂಗ್ ಸ್ಟರ್' ಪಾತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಸಹ ಮಾಡಿ ಮುಗಿಸಿದೆ ಸಿನಿಮಾತಂಡ. ಅಂದಹಾಗೆ ನಿರ್ಮಾಪಕ ಉದಯ್ ಕೆ ಮೆಹ್ತಾ ಜೊತೆ ಧ್ರುವ ಸರ್ಜಾ ದುಬಾರಿ ಸಿನಿಮಾ ಮಾಡಬೇಕಿತ್ತು. ಆದರೆ ಆ ಸಿನಿಮಾಗೂ ಮೊದಲು ಮಾರ್ಟಿನ್ ಮೂಲಕ ಬರುತ್ತಿದ್ದಾರೆ.