'ಪ್ರಶಾಂತ್ ನೀಲ್ ಒಬ್ಬ ಜಾದೂಗಾರ, ಕೆಜಿಎಫ್ ಚಾಪ್ಟರ್ 2 ಮ್ಯಾಜಿಕ್- ಶ್ರೀನಿಧಿ ಶೆಟ್ಟಿ
ಮಾಡೆಲ್ ಮತ್ತು ನಟಿ ಶ್ರೀ ನಿಧಿ ಶೆಟ್ಟಿ 2016 ರಿಂದಲೂ ಕೆಜಿಎಫ್ ಚಿತ್ರಕ್ಕಾಗಿಯೇ ಅಂಟಿಕೊಂಡಿದ್ದಾರೆ. ಇದರ ಹೊರತಾಗಿ, ವಿಕ್ರಮ್ ಜೊತೆಯಲ್ಲಿ ಕೊಬ್ರಾ ಚಿತ್ರದಲ್ಲಿ ಅಭಿನಯಿಸಿದ್ದಾರೆ.
Published: 11th April 2022 01:21 PM | Last Updated: 11th April 2022 01:51 PM | A+A A-

ಕೆಜಿಎಫ್ ಚಿತ್ರದ ಸ್ಟಿಲ್
ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಾಯಕ ನಟರಂತೆ, ನಾಯಕಿಯರು ಜನಮನದಲ್ಲಿ ಉಳಿಯುವುದಿಲ್ಲ. ಇದು ಅನ್ಯಾಯವಾಗಿದೆ. ಆದಾಗ್ಯೂ, ಇದೇ ಕಾರಣಕ್ಕಾಗಿ ಅವರು ಸಾಮಾನ್ಯವಾಗಿ ಪ್ರತಿ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಶ್ರೀನಿಧಿ ಶೆಟ್ಟಿ ಇದಕ್ಕೆ ಭಿನ್ನವಾಗಿದ್ದಾರೆ. ಮಾಡೆಲ್ ಮತ್ತು ನಟಿ ಶ್ರೀ ನಿಧಿ ಶೆಟ್ಟಿ 2016 ರಿಂದಲೂ ಕೆಜಿಎಫ್ ಚಿತ್ರಕ್ಕಾಗಿಯೇ ಅಂಟಿಕೊಂಡಿದ್ದಾರೆ. ಇದರ ಹೊರತಾಗಿ, ವಿಕ್ರಮ್ ಜೊತೆಯಲ್ಲಿ ಕೊಬ್ರಾ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿನಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿರುವ ಶ್ರೀ ನಿಧಿ ಶೆಟ್ಟಿ, ಕೆಜಿಎಫ್ ಸಿನಿಮಾದ ಭಾಗವಾಗಿರುವುದಕ್ಕೆ ಹೆಮ್ಮೆ ಆಗುತ್ತಿದೆ ಎಂದಿದ್ದಾರೆ. ಹೊಸಬರಿಗೆ ವೃತ್ತಿಆರಂಭದಲ್ಲಿ ಅನಿಶ್ಚಿತತೆ ಮತ್ತು ಒತ್ತಡವಿರುತ್ತದೆ. ಕೆಜಿಎಫ್ ಪ್ಯಾನ್ ಇಂಡಿಯಾ ಸಿನಿಮಾವಾದ್ದರಿಂದ ಶ್ರೀನಿಧಿಗೆ ಆರಂಭದಲ್ಲಿಯೇ ಅನುಕೂಲವಾಗಿದೆ.
ಎರಡು ಭಾಗಗಳಾಗಿ ಸಿನಿಮಾ ನಿರ್ಮಿಸಿರುವುದರಿಂದ ಹೆಚ್ಚುವರಿ ಪ್ರಯೋಜನವಾಗಿದೆ. ಚಾಪ್ಟರ್ 2ಗಾಗಿ ಕಾಯುವಾಗ ಆತಂಕವಿತ್ತು ಎಂದು ಹೇಳಿದ ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್ ಅವರ ಸಾಮರ್ಥ್ಯದಲ್ಲಿನ ನಂಬಿಕೆಯೂ ಹೆಚ್ಚಿನ ಸಹಾಯ ಮಾಡಿತು. 2016 ರಲ್ಲಿ ಅವರು ನನಗೆ ಹೇಳಿದ ಕಥೆ ಹಾಗೆಯೇ ಉಳಿದಿದೆ. ಚಾಪ್ಟರ್ 1ಕ್ಕೆ ಸಿಕ್ಕ ಪ್ರತಿಕ್ರಿಯೆ ಕಂಡು ಅದರ ಪ್ರಮಾಣ ಮತ್ತಷ್ಟು ಹೆಚ್ಚಾಯಿತು. ಎರಡನೇ ಚಿತ್ರದಲ್ಲೂ ರೀನಾಳ ಭಾವನೆಯೊಂದಿಗೆ ಜನರು ಕನೆಕ್ಟ್ ಆಗುವ ನಂಬಿಕೆ ಇದೆ ಎಂದರು.
ಇದನ್ನೂ ಓದಿ: ಬಹು ನಿರೀಕ್ಷಿತ ಕೆಜಿಎಫ್-2 ಭಾರತದಾದ್ಯಂತ 6,000 ಸ್ಕ್ರೀನ್ಗಳಲ್ಲಿ ರಿಲೀಸ್
ಶ್ರೀನಿಧಿಯಂತಹ ಹೊಸಬರಿಗೆ ಮೊದಲ ಸಿನಿಮಾದ ಜನಪ್ರಿಯತೆಯ ನಂತರ ಹೆಚ್ಚಿನ ಕೆಲಸಗಳನ್ನು ತೆಗೆದುಕೊಳ್ಳದಿರುವುದು ಬಹುದೊಡ್ಡ ನಿರ್ಧಾರವಾಗಿತ್ತು. ಯಾವುದೇ ಪೋಷಕರಂತೆ, ನನ್ನ ಪೋಷಕರು ಕೂಡಾ ವೃತ್ತಿ ಜೀವನದ ಆಯ್ಕೆ ಬಗ್ಗೆ ಕಾಳಜಿ ವಹಿಸಿದರು. ಹೆಚ್ಚು ಸಿನಿಮಾ ಮಾಡಿರುವ ಇತರ ನಾಯಕಿಯರೊಂದಿಗೆ ಹೋಲಿಕೆ ಮಾಡಿದರು. ಇದು ಆ ರೀತಿಯ ಸಿನಿಮಾವಲ್ಲ ಅಂತಾ ಅವರಿಗೆ ವಿವರಿಸುತ್ತಲೇ ಇದ್ದೆ. ಯಶ್, ಸಂಜಯ್ ದತ್, ರವೀನಾ ಟಂಡನ್, ರಾವ್ ರಮೇಶ್, ಈಶ್ವರಿ ರಾವ್, ಪ್ರಕಾಶ್ ಅವರಂತಹ ದಿಗ್ಗಜರೊಂದಿಗೆ ನಟಿಸುವ ಅವಕಾಶ ಸಿಕ್ಕಿದೆ. ನನ್ನ ಎಲ್ಲಾ ಆಸೆಗಳು ಈಡೇರಿದಂತಾಗಿದೆ ಎಂದು ಅವರು ಹೇಳಿದರು.
ಶ್ರೀನಿಧಿ ಫಿಲ್ಮಿಂ ಇಂಡಸ್ಟ್ರಿಯಲ್ಲಿ ಈಗಾಗಲೇ ಆರು ವರ್ಷ ಕಳೆದಿದ್ದು, ಕೆಜಿಎಫ್ ಸಿನಿಮಾದೊಂದಿಗೆ ಬೆಳೆದಿರುವುದಾಗಿ ನಂಬಿದ್ದಾರೆ. ಕೆಜಿಎಫ್ ಬಿಡುಗಡೆ ಆಗುತ್ತಿರುವುದು ಖುಷಿ ತಂದಿದೆ. ಆದರೆ ಕೆಜಿಎಫ್ ಚಾಪ್ಟರ್ 2 ಹೆಚ್ಚು ಆತ್ಮವಿಶ್ವಾಸ ಮೂಡಿಸಿದೆ. ದೊಡ್ಡ ಪರದೆಯಲ್ಲಿ ಎಲ್ಲರೊಂದಿಗೆ ಕುಳಿತು ಚಿತ್ರ ವೀಕ್ಷಿಸಲು ಕಾಯಲು ಆಗುತ್ತಿಲ್ಲ ಎಂದರು.
ಪ್ರಶಾಂತ್ ನೀಲ್ ಅವರಿಂದ ಹಿಡಿದು ಯಶ್ ವರೆಗೂ ಎಲ್ಲರ ಕಥೆ ಕೇಳಿದ್ದಿನಿ. ಅವರು ಹೇಗೆ ವೃತ್ತಿ ಜೀವನ ಆರಂಭಿಸಿದರು ಎಂಬುದರ ಬಗ್ಗೆ ಮಾತನಾಡಿದ್ದೇನೆ. ಅವರಿಗೆಲ್ಲರಿಗೂ ವಿಜಯ್ ಕಿರಂಗದೂರು ಯಾವ ರೀತಿಯಲ್ಲಿ ನೆರವಾಗಿದ್ದಾರೆ ಎಂಬುದನ್ನು ತಿಳಿದಿದ್ದೇನೆ. ಶ್ರಮ ಹಾಗೂ ಬದ್ದತೆಯಿಂದ ಹೇಗೆ ಯಶಸ್ವಿ ನಟನಾಗಬಹುದು ಎಂಬುದಕ್ಕೆ ಯಶ್ ಉದಾಹರಣೆಯಾಗಿದ್ದಾರೆ. ಯಶ್ ಅವರಂತೆಯೇ ಬದ್ಧತೆಯಿಂದ ಕೆಲಸ ಮಾಡಲು ಗಮನ ಹರಿಸುತ್ತೇನೆ. ಇದು ಮೌಲ್ಯಯುತ ಪಾಠವಾಗಿದೆ ಎಂದು ಅವರು ಹೇಳಿದರು.
ಕೆಜಿಎಫ್ ಚಿತ್ರೀಕರಣ ವೇಳೆ ಚಿತ್ರ ತಂಡದೊಂದಿಗೆ ಖುಷಿ ಖುಷಿಯಾಗಿ ಕಾಲ ಕಳೆದಿದ್ದಾಗಿ ಹೇಳುವ ಶ್ರೀನಿಧಿ ಶೆಟ್ಟಿ, ಚಿತ್ರ ಬಿಡುಗಡೆಗೂ ಮುನ್ನ ಮಿಶ್ರ ಭಾವನೆಗಳಿವೆ. "ಅಂತಿಮವಾಗಿ, ಕಾಯುವಿಕೆ ಮುಗಿದಿದೆ, ಆದರೆ ಇದು ಸುದೀರ್ಘ ಸಂಬಂಧಕ್ಕೆ ಅಂತ್ಯ ತರುತ್ತದೆ ಎಂದು ನನಗೆ ತಿಳಿದಿದೆ. ಈ ಸಮಯದಲ್ಲಿ ನಾನು ಸಂಪಾದಿಸಿದ ಸ್ನೇಹಿತರು ಯಾವಾಗಲೂ ನನ್ನೊಂದಿಗೆ ಇರುತ್ತಾರೆ. ಪ್ರಶಾಂತ್ ನೀಲ್ ಒಬ್ಬ ಅದ್ಬುತ ಜಾಧುಗಾರ, ಕೆಜಿಎಫ್ ಒಂದು ಮ್ಯಾಜಿಕ್ , ಅದರೊಂದಿಗೆ ಭಾಗಿಯಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.