ಪುಸ್ತಕಗಳಿಂದ ಬೃಹತ್ ಮೊಸಾಯಿಕ್ ಭಾವಚಿತ್ರ ರಚಿಸಿ ವಿಶ್ವ ದಾಖಲೆ ಬರೆಯಲು ಮುಂದಾದ ಯಶ್ ಅಭಿಮಾನಿಗಳು!
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ - 2' ಚಿತ್ರ ಬಿಡುಗಡೆಗೆ ಮುನ್ನ ಯಶ್ ಅವರ ಅಭಿಮಾನಿಗಳು ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಲು ನಟನ ಬೃಹತ್ ಭಾವಚಿತ್ರ ರಚಿಸಿ ವಿಶ್ವ ದಾಖಲೆ ಬರೆಯಲು ಮುಂದಾಗಿದ್ದಾರೆ.
Published: 11th April 2022 06:52 PM | Last Updated: 11th April 2022 07:03 PM | A+A A-

ಮೊಸಾಯಿಕ್ ಭಾವಚಿತ್ರ
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ - 2' ಚಿತ್ರ ಬಿಡುಗಡೆಗೆ ಮುನ್ನ ಯಶ್ ಅವರ ಅಭಿಮಾನಿಗಳು ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಲು ನಟನ ಬೃಹತ್ ಮೊಸಾಯಿಕ್ ಭಾವಚಿತ್ರ ರಚಿಸಿ ವಿಶ್ವ ದಾಖಲೆ ಬರೆಯಲು ಮುಂದಾಗಿದ್ದಾರೆ.
ರಾಕಿಂಗ್ ಸ್ಟಾರ್ ಅಭಿಮಾನಿಗಳು ಒಟ್ಟು 20,700 ಪುಸ್ತಕಗಳನ್ನು ಬಳಸಿ ಯಶ್ ಅವರ ಬೃಹತ್ ಮೊಸಾಯಿಕ್ ಭಾವಚಿತ್ರವನ್ನು ರಚಿಸಿದ್ದಾರೆ. ಈ ಮೂಲಕ ತಾವು ವಿಶ್ವದಾಖಲೆ ನಿರ್ಮಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಇದನ್ನು ಓದಿ: 'ಪ್ರಶಾಂತ್ ನೀಲ್ ಒಬ್ಬ ಜಾದೂಗಾರ, ಕೆಜಿಎಫ್ ಚಾಪ್ಟರ್ 2 ಮ್ಯಾಜಿಕ್- ಶ್ರೀನಿಧಿ ಶೆಟ್ಟಿ
ಸಂಪೂರ್ಣವಾಗಿ ಪುಸ್ತಕಗಳಿಂದ ಮಾಡಲ್ಪಟ್ಟ ಭಾವಚಿತ್ರವು 130 x 190 ಅಡಿ ಅಳತೆಯನ್ನು ಹೊಂದಿದೆ ಮತ್ತು ಮಾಲೂರಿನ ವೈಟ್ ಗಾರ್ಡನ್ ಮೈದಾನದಲ್ಲಿ 25,650 ಚದರ ಅಡಿಗಳಲ್ಲಿ ಹರಡಿದೆ. ಮಾಲೂರಿನ ಯಶ್ ಅಭಿಮಾನಿಗಳ ಸಂಘ ಈ ಯೋಜನೆ ಕೈಗೆತ್ತಿಕೊಂಡಿದೆ.
"ಬಿಗ್ ಬಿಗ್ಗರ್ ಬಿಗ್ಗೆಸ್ಟ್!! ನಾವು 120×170 ಅಡಿಯ ಭಾವಚಿತ್ರ ರಚಿಸಿಲು ಯೋಜಿಸಿದ್ದೇವೆ. ಆದರೆ ಅದು ನಮ್ಮ ನಿರೀಕ್ಷೆ ಮೀರಿ 135×190 ಅಡಿಗಳ ಭಾವಚಿತ್ರ ನಿರ್ಮಾಣವಾಗಿದೆ.ಇದು 25,650 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. 25 ಸಾವಿರ ಬಣ್ಣ ಬಣ್ಣದ ಪುಸ್ತಕಗಳನ್ನ ಬಳಸಿಕೊಂಡು ವಿಶ್ವದಲ್ಲೇ ಅತಿ ದೊಡ್ಡ ಮೊಸಾಯಿಕ್ ಭಾವಚಿತ್ರ ರಚಿಸಿರುವುದಾಗಿ" ಯಶ್ ಎಫ್‌ಸಿ ತಂಡ ಭಾವಚಿತ್ರದ ಮೇಕಿಂಗ್ ವೀಡಿಯೊದೊಂದಿಗೆ ಟ್ವೀಟ್ ಮಾಡಿದೆ.
Big Bigger Biggest!!
— Team Yash FC (@TeamYashFC) April 11, 2022
We had planned for 120×170ft but it surpassed our expectations... We had to expand it to 135×190ft which covers an area of 25,650 Sqft which is the world record @TheNameIsYash#YashBOSS #KGF2 #KGFChapter2 pic.twitter.com/qJf0G0NhrK