ಅಪ್ಪು ಫ್ಯಾನ್ಸ್ ಗೆ ಸಿಹಿ ಸುದ್ದಿ; ಜಗತ್ತಿನಲ್ಲೇ ಮೊದಲ ಪ್ರಯತ್ನ, ಪುನೀತ್ ರಾಜ್ ಕುಮಾರ್ ಧ್ವನಿಯಲ್ಲೇ ಮತ್ತೆ ಜೇಮ್ಸ್ ಚಿತ್ರ ಬಿಡುಗಡೆ!
ಅಪ್ಪು ಅಭಿಮಾನಿಗಳಿಗೆ ಜೇಮ್ಸ್ ಚಿತ್ರತಂಡ ಮತ್ತೆ ಸಿಹಿ ಸುದ್ದಿ ನೀಡಿದ್ದು, ಜೇಮ್ಸ್ ಚಿತ್ರ ಪುನೀತ್ ರಾಜ್ ಕುಮಾರ್ ಧ್ವನಿಯಲ್ಲೇ ಮತ್ತೆ ಬಿಡುಗಡೆ ಮಾಡುವ ಕುರಿತು ನಿರ್ಧರಿಸಿದೆ.
Published: 18th April 2022 02:11 PM | Last Updated: 18th April 2022 06:47 PM | A+A A-

ಜೇಮ್ಸ್ ಚಿತ್ರದ ಪೋಸ್ಟರ್
ಬೆಂಗಳೂರು: ಅಪ್ಪು ಅಭಿಮಾನಿಗಳಿಗೆ ಜೇಮ್ಸ್ ಚಿತ್ರತಂಡ ಮತ್ತೆ ಸಿಹಿ ಸುದ್ದಿ ನೀಡಿದ್ದು, ಜೇಮ್ಸ್ ಚಿತ್ರ ಪುನೀತ್ ರಾಜ್ ಕುಮಾರ್ ಧ್ವನಿಯಲ್ಲೇ ಮತ್ತೆ ಬಿಡುಗಡೆ ಮಾಡುವ ಕುರಿತು ನಿರ್ಧರಿಸಿದೆ.
ಇದನ್ನೂ ಓದಿ: ಕೆಜಿಎಫ್ 2 ಬಿಡುಗಡೆ ದಿನವೇ ಓಟಿಟಿಗೆ ಪವರ್ ಫುಲ್ 'ಜೇಮ್ಸ್' ಎಂಟ್ರಿ!
ಹೌದು.. ಈ ಹಿಂದೆ ಪುನೀತ್ ರಾಜ್ ಕುಮಾರ್ ಅನುಪಸ್ಥಿತಿಯಲ್ಲಿ ಡಾ.ಶಿವರಾಜ್ ಕುಮಾರ್ ಅವರ ಧ್ವನಿಯಲ್ಲಿ ಜೇಮ್ಸ್ ಚಿತ್ರ ಬಿಡುಗಡೆಯಾಗಿತ್ತು. ಆದರೆ ಇದೀಗ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿ ಪುನೀತ್ ಧ್ವನಿಯಲ್ಲೇ ಜೇಮ್ಸ್ ಚಿತ್ರ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ಚಿತ್ರರಂಗದಲ್ಲಿ ಪಪ್ಪು ಎಂದೇ ಖ್ಯಾತರಾಗಿರುವ ಖ್ಯಾತ ಸೌಂಡ್ ಇಂಜಿನಿಯರ್ ಶ್ರೀನಿವಾಸ ರಾವ್ ಅವರ ನೇತೃತ್ವದಲ್ಲಿ ಜೇಮ್ಸ್ ಚಿತ್ರಕ್ಕೆ ಪುನೀತ್ ಧ್ವನಿ ಸೇರಿಸುವ ಕಾರ್ಯ ನಡೆದಿದ್ದು, ಪುನೀತ್ ಧ್ವನಿಯೊಂದಿಗೆ ನವೀಕರಿಸಿದ ಜೇಮ್ಸ್ ಚಿತ್ರದ ಆವೃತ್ತಿಯು ಏಪ್ರಿಲ್ 22 ರಿಂದ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿದೆ.
ಇದನ್ನೂ ಓದಿ: ಹೆಚ್ಚು ದುಡ್ಡು ಸಿಗುತ್ತದೆ ಎಂದು ಆಸೆ ಪಡಬಾರದು, ಚಿತ್ರಮಂದಿರ ಸಮಸ್ಯೆ ಬಗೆಹರಿದಿದೆ: ಶಿವರಾಜ್ ಕುಮಾರ್
ಈ ಬಗ್ಗೆ ಚಿತ್ರ ನಿರ್ದೇಶಕ ಚೇತನ್ ಕುಮಾರ್ ಮಾಹಿತಿ ನೀಡಿದ್ದು, “ಬಾಹುಬಲಿ ನಂತರ, ಶ್ರೀನಿವಾಸ ರಾವ್ ಅವರು ತಮ್ಮ ತಂಡದೊಂದಿಗೆ ಬಹುಭಾಷಾ ಚಲನಚಿತ್ರಗಳಲ್ಲಿ ನಟರ ಧ್ವನಿ ಪ್ರಸಾರವನ್ನು ಹೇಗೆ ತರುವುದು ಎಂಬುದರ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ತೆಲುಗು ನಟ ಮೇಕಾ ಶ್ರೀಕಾಂತ್ ಅವರು ನಮಗೆ ಸಂಪರ್ಕಕ್ಕೆ ಬಂದ ಪಪ್ಪು ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ ಪಪ್ಪು ಅವರನ್ನು ನಾವು ಸಂಪರ್ಕಿಸಿ ನಮ್ಮ ಬೇಡಿಕೆ ಮುಂದಿಟ್ಟಾಗ ನಮ್ಮ ಮನವಿ ಸ್ವೀಕರಿಸಿ ಅದಕ್ಕೆ ಒಪ್ಪಿದರು. ಇದೀಗ ಅಪ್ಪು ಧ್ವನಿಯನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಇದಕ್ಕಾಗಿ ನಾವು ಅವರಿಗೆ ಅಪ್ಪು ಗಾಯನದ ಸುಮಾರು 15 ಗಂಟೆಗಳ ಆಡಿಯೋಗಳನ್ನು ಒದಗಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: 'ಜೇಮ್ಸ್' ಪ್ರದರ್ಶನಕ್ಕೆ ಅಡ್ಡಿಯಾಗಲು ಬಿಡುವುದಿಲ್ಲ, ಆತಂಕ ಬೇಡ: ಸಿಎಂ ಬೊಮ್ಮಾಯಿ- ನಟ ಶಿವರಾಜ್ ಕುಮಾರ್ ಭರವಸೆ
ಧ್ವನಿಯನ್ನು ಆಧರಿಸಿ, ಶಿವರಾಜಕುಮಾರ್ ಅವರ ಡಬ್ಬಿಂಗ್ ಟ್ರ್ಯಾಕ್‌ನ ಉಲ್ಲೇಖದ ಜೊತೆಗೆ, ಅವರು ಅಪ್ಪು ಅವರ ಧ್ವನಿಯನ್ನು ಮರುಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾವು ಶನಿವಾರ ಔಟ್‌ಪುಟ್ ಪಡೆದುಕೊಂಡಿದ್ದೇವೆ ಮತ್ತು ಅಪ್ಪು ಅವರ ಧ್ವನಿಯೊಂದಿಗೆ ಜೇಮ್ಸ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಚೇತನ್ ಹೇಳಿದ್ದಾರೆ.
ಜಗತ್ತಿನಲ್ಲೇ ಮೊದಲ ಪ್ರಯತ್ನ
ಇನ್ನು ಜೇಮ್ಸ್ ಚಿತ್ರದ ಈ ಪ್ರಯತ್ನ ಜಗತ್ತಿನ ಸಿನಿಮಾ ಇತಿಹಾಸದಲ್ಲೇ ಮೊದಲು ಎನ್ನಲಾಗಿದೆ. ದಿವಂಗತ ನಟನ ಆಡಿಯೋ ಮುದ್ರಿಕೆಗಳನ್ನು ಇಟ್ಟುಕೊಂಡು ಮತ್ತೊಂದು ಚಿತ್ರಕ್ಕೆ ಧ್ವನಿ ಸಂಯೋಜನೆ ಮಾಡುತ್ತಿರುವುದು ಇದೇ ಮೊದಲಾಗಿದೆ.
ಇದನ್ನೂ ಓದಿ: 88 ವರ್ಷದ ಎಲ್ಲಾ ದಾಖಲೆ ಉಡೀಸ್, ನಾಲ್ಕು ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದ ಜೇಮ್ಸ್!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನದ ನಂತರ ಬಿಡುಗಡೆಯಾದ ಜೇಮ್ಸ್ ಚಿತ್ರದಲ್ಲಿ, ಅವರ ಸಹೋದರರಾದ ಶಿವರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಪುನೀತ್ ಅನುಪಸ್ಥಿತಿಯಲ್ಲಿ ನಟ ಶಿವರಾಜ್ ಕುಮಾರ್ ಪುನೀತ್ ಪಾತ್ರಕ್ಕೆ ಧ್ವನಿ ನೀಡಿದ್ದರು.
ಇದನ್ನೂ ಓದಿ: ಐಎಂಡಿಬಿ ರೇಟಿಂಗ್ ನಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಹಿಂದಿಕ್ಕಿದ ಜೇಮ್ಸ್!
ಇನ್ನು ಕಿಶೋರ್ ಪತ್ತಿಕೊಂಡ ಅವರು ಬಂಡವಾಳ ಹೂಡಿದ್ದು, ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಜೆ ಸ್ವಾಮಿ ಅವರ ಛಾಯಾಗ್ರಹಣವನ್ನು ಹೊಂದಿದ್ದಾರೆ. ಪ್ರಿಯಾ ಆನಂದ್ ಅವರು ಪುನೀತ್ ಎದುರು ತೆರೆ ಹಂಚಿಕೊಂಡಿದ್ದು, ಚಿತ್ರದಲ್ಲಿ ಶೈನ್ ಶೆಟ್ಟಿ, ಉಗ್ರಂ ಖ್ಯಾತಿಯ ತಿಲಕ್, ಚಿಕ್ಕಣ್ಣ, ಶ್ರೀಕಾಂತ್ ಮೇಕಾ, ಮುಖೇಶ್ ರಿಷಿ, ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣ ರಘು, ಹರ್ಷ ಮತ್ತು ಸುಚೇಂದ್ರ ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.