
ಗಣೇಶ್, ಪ್ರೀತಂ ಗುಬ್ಬಿ
ಪ್ರೀತಂ ಗುಬ್ಬಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮುಂದಿನ ಚಿತ್ರ ಬಾನದಾರಿಯಲ್ಲಿಯ ನಾಯಕಿ ರುಕ್ಮಿಣಿ ವಸಂತ್.
ಬೀರಬಲ್ ಮತ್ತು ಹೇಮಂತ್ ಎಂ ರಾವ್ ಅವರ ಮುಂಬರುವ ಚಿತ್ರ ರಕ್ಷಿತ್ ಶೆಟ್ಟಿಯವರ ಜೊತೆಗೆ ಸಪ್ತ ಸಾಗರದಾಚೆ ಎಲ್ಲೋ ನಂತರ ರುಕ್ಮಿಣಿಯವರ ಮುಂದಿನ ಚಿತ್ರವಿದು. ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವುದಕ್ಕೆ ರುಕ್ಮಿಣಿ ವಸಂತ್ ಗೆ ಬಹಳ ಖುಷಿಯಿದೆ.

ಪ್ರೀತಂ ಗುಬ್ಬಿಯವರು ಈ ಚಿತ್ರದಲ್ಲಿ ನಟಿಸುವ ಬಗ್ಗೆ ಕೇಳಿಕೊಂಡಾಗ ಕಥೆ ಕೇಳಿ ಖುಷಿಪಟ್ಟೆ, ಕಥೆ ಬಹಳ ಇಷ್ಟವಾಗಿದ್ದು ಮಾತ್ರವಲ್ಲದೆ ಪ್ರೀತಂ ಗುಬ್ಬಿ ಮತ್ತು ಗಣೇಶ್ ಕಾಂಬಿನೇಷನ್ ಜೊತೆಗೆ ನಟಿಸುವುದು ಮತ್ತಷ್ಟು ಸಂತೋಷ ತಂದಿದೆ ಎನ್ನುತ್ತಾರೆ. ಉತ್ತಮ ಚಿತ್ರತಂಡದ ಜೊತೆಗೆ ಕೆಲಸ ಮಾಡುವ ಖುಷಿಯಿದೆ, ಅವರಿಂದ ಕಲಿಯುವುದು ಸಾಕಷ್ಟಿದೆ ಎನ್ನುತ್ತಾರೆ.
ಸ್ಯಾಂಡಲ್ ವುಡ್ ಗೆ ಗಣೇಶ್-ರುಕ್ಮಿಣಿ ಜೋಡಿ ಹೊಸದು. ಕ್ಯಾಮರಾ ಎದುರಿಸುವುದನ್ನು ನಾನು ಎಂಜಾಯ್ ಮಾಡುತ್ತೇನೆ. ಬಾನದಾರಿಯಲ್ಲಿ ಚಿತ್ರದ ಕಥೆ ಮತ್ತು ಸ್ಕ್ರಿಪ್ಟ್ ಸೊಗಸಾಗಿದೆ ಎನ್ನುತ್ತಾರೆ. ಕ್ರೀಡೆಗೆ ಹತ್ತಿರವಾದ ಪಾತ್ರ ಚಿತ್ರದಲ್ಲಿ ನನ್ನದಾಗಿರುತ್ತದೆ ಎಂದಷ್ಟೇ ಹೇಳಿದರು ರುಕ್ಮಿಣಿ. ಮೇ ಕೊನೆಯ ವೇಳೆಗೆ ಶೂಟಿಂಗ್ ಆರಂಭವಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: 'ಬಾನದಾರಿಯಲ್ಲಿ' ಸಿನಿಮಾದಲ್ಲಿ ಒಂದಾದ 'ಮುಂಗಾರು ಮಳೆ' ಜೋಡಿ: ಮರುಕಳಿಸಲಿದೆಯೇ ಗಣೇಶ್- ಪ್ರೀತಂ ಗುಬ್ಬಿ ಮ್ಯಾಜಿಕ್?
ಮುಂಗಾರು ಮಳೆ, ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದ ಗಣೇಶ್ ಮತ್ತು ಪ್ರೀತಂ ಗುಬ್ಬಿ ಇದೀಗ ಬಾನದಾರಿಯಲ್ಲಿ ಮತ್ತೆ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಪ್ರೀತಂ ಜಯರಾಂ ಅವರ ಛಾಯಾಗ್ರಹಣವಿದೆ.
ಬಾನದಾರಿಯಲ್ಲಿ ಪ್ರೀತಂ ಗುಬ್ಬಿಯವರದ್ದು ಚಿತ್ರಕಥೆ ಇದ್ದರೆ ಸಂಗೀತವನ್ನು ವಿ ಹರಿಕೃಷ್ಣ ನೀಡಲಿದ್ದಾರೆ. ಅಭಿಲಾಷ್ ಕಲತಿಯವರ ಛಾಯಾಗ್ರಹಣವಿದೆ. ಬೆಂಗಳೂರು, ಕೇರಳ ಹಾಗೂ ಆಫ್ರಿಕಾದ ಕೆಲವು ನಿರ್ದಿಷ್ಟ ಭಾಗಗಳ ಚಿತ್ರೀಕರಣವಾಗಲಿದೆ.