ಸೋಮವಾರದ 'ಅಗ್ನಿ ಪರೀಕ್ಷೆ' ಗೆದ್ದ 'ಕೆಜಿಎಫ್-2'; ಮಕಾಡೆ ಮಲಗಿದ ತಮಿಳು ಚಿತ್ರ 'ಬೀಸ್ಟ್'!!
ಭಾರತೀಯ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್-2 ಕಮಾಲ್ ಮುಂದುವರೆದಿದ್ದು, ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ಪಾಸಾಗಿ ಹಿಂದಿಯಲ್ಲಿ ತನ್ನ ಗಳಿಕೆಯನ್ನು 219 ಕೋಟಿಗೇರಿಸಿಕೊಂಡಿದೆ.
Published: 19th April 2022 02:30 PM | Last Updated: 19th April 2022 02:51 PM | A+A A-

ಕೆಜಿಎಫ್-2
ಬೆಂಗಳೂರು: ಭಾರತೀಯ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್-2 ಕಮಾಲ್ ಮುಂದುವರೆದಿದ್ದು, ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ಪಾಸಾಗಿ ಹಿಂದಿಯಲ್ಲಿ ತನ್ನ ಗಳಿಕೆಯನ್ನು 219 ಕೋಟಿಗೇರಿಸಿಕೊಂಡಿದೆ.
ಇದನ್ನೂ ಓದಿ: ಬಾಹುಬಲಿ-2 ಸೇರಿ ಹಲವು ದಾಖಲೆ ಛಿದ್ರ; ವೇಗದ 200 ಕೋಟಿ ರೂ. ಗಳಿಕೆ ಕಂಡ ಮೊದಲ ಚಿತ್ರ ಕೆಜಿಎಫ್-2, ಒಟ್ಟು ಗಳಿಕೆ 551 ಕೋಟಿ ರೂ.?
#KGF2 is UNSTOPPABLE... SUPERB HOLD on a working day [Mon]... Eyes ₹ 270 cr [+/-] in *extended Week 1*... Should cross #Dangal *lifetime biz*, if it maintains the pace... Thu 53.95 cr, Fri 46.79 cr, Sat 42.90 cr, Sun 50.35 cr, Mon 25.57 cr. Total: ₹ 219.56 cr. #India biz. pic.twitter.com/MFUVWTXTJB
— taran adarsh (@taran_adarsh) April 19, 2022
ಹೌದು.. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬಿಡುಗಡೆ ಆಗಿ 6ನೇ ದಿನಕ್ಕೆ ಕಾಲಿಟ್ಟಿದ್ದು, 5 ದಿನ ಕಲೆಕ್ಷನ್ ರಿಪೋರ್ಟ್ ನಲ್ಲಿ ಪ್ರಶಾಂತ್ ನೀಲ್ ನೇತೃತ್ವದ ಕೆಜಿಎಫ್-2 ಫುಲ್ ಮಾರ್ಕ್ಸ್ ಪಡೆದುಕೊಂಡಿದ್ದು, ಹಿಂದಿ ಭಾಷೆಯೊಂದರಲ್ಲಿಯೇ ಕೆಜಿಎಫ್ 219.57 ಕೋಟಿ ಬಾಚಿದೆ. ಉಳಿದಂತೆ ತಮಿಳಿನಲ್ಲಿ 50.27 ಕೋಟಿ ರೂ ಗಳಿಕೆ ಕಂಡಿದ್ದು, ಕೇರಳದಲ್ಲಿ 32.50 ಕೋಟಿ ರೂ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 97 ಕೋಟಿ ರೂ ಗಳಿಕೆ ಮಾಡಿದೆ. ಒಟ್ಟಾರೆ ಈ ವರೆಗೂ ಕೆಜಿಎಫ್ 2 ಚಿತ್ರ ವಿಶ್ವಾದ್ಯಂತ 635 ಕೋಟಿ ರೂ ಗಳಿಕೆ ಕಂಡಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಕನ್ನಡ ಚಿತ್ರವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಯಶ್: ಕೆಜಿಎಫ್-2 ಸಿನಿಮಾ ಹಾಡಿಹೊಗಳಿದ ವಿಶಾಲ್
Monday report
— Manobala Vijayabalan (@ManobalaV) April 18, 2022
Multiple theatres are reporting show cancellations for #Beast due to ultra low/no crowd turn out from Morning.
On the other hand, #KGFChapter2 is being reported with SPLENDID crowd & sold out shows even on a big screen from Morning.
ಸೋಮವಾರದ ಅಗ್ನಿ ಪರೀಕ್ಷೆ
ಯಾವುದೇ ಸಿನಿಮಾ ವೀಕೆಂಡ್ನಲ್ಲಿ ಚೆನ್ನಾಗಿ ಕಮಾಯಿ ಮಾಡಬಹುದು. ಆದರೆ ಆ ಚಿತ್ರದ ಮುಂದಿನ ಭವಿಷ್ಯ ನಿರ್ಧಾರ ಆಗುವುದು ಸೋಮವಾರದ ಗಳಿಕೆ ಆಧಾರದ ಮೇಲೆ. ಹಾಗಾಗಿ ಸೋಮವಾರದ ಪರೀಕ್ಷೆಯಲ್ಲಿ ಬಹುತೇಕ ಸಿನಿಮಾಗಳು ಫೇಲ್ ಆಗಿಬಿಡುತ್ತವೆ. ಆದರೆ ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ ಚಿತ್ರ ಇದಕ್ಕೆ ತದ್ವಿರುದ್ಧವಾಗಿದೆ. ಸೋಮವಾರದ ಪರೀಕ್ಷೆಯಲ್ಲಿ ಈ ಚಿತ್ರ ಯಶಸ್ವಿಯಾಗಿ ಪಾಸ್ ಆಗಿದ್ದು, ನಿನ್ನೆ (ಏ.18) ವರ್ಕಿಂಗ್ ಡೇ ಆಗಿದ್ದರೂ ಕೂಡ ಜನರು ಭಾರಿ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದ್ದಾರೆ.
ಇದನ್ನೂ ಓದಿ: ಚೆನ್ನೈ: ಕನ್ನಡದಲ್ಲೇ ಕೆಜಿಎಫ್ 2 ಸಿನಿಮಾ ವೀಕ್ಷಿಸಿದ ರಜನಿಕಾಂತ್
ಪರಿಣಾಮವಾಗಿ ಸೋಮವಾರ ಬರೋಬ್ಬರಿ 25.57 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಈ ಕುರಿತು ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರು ಮಾಹಿತಿ ಹಂಚಿಕೊಂಡಿದ್ದು, ಹಿಂದಿ ಗಲ್ಲಾ ಪೆಟ್ಟಿಗೆಯಲ್ಲಿ ಮೊದಲ ದಿನ 53.95 ಕೋಟಿ ರೂಪಾಯಿ, ಎರಡನೇ ದಿನ 46.79 ಕೋಟಿ ರೂಪಾಯಿ, ಮೂರನೇ ದಿನ 42.90 ಕೋಟಿ ರೂಪಾಯಿ, ನಾಲ್ಕನೇ ದಿನ 50.35 ಕೋಟಿ ರೂಪಾಯಿ ಹಾಗೂ ಐದನೇ ದಿನ 25.57 ಕೋಟಿ ರೂಪಾಯಿ ಹರಿದು ಬಂದಿರುವ ಬಗ್ಗೆ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: 'RRR', 'ಜೈ ಭೀಮ್' ಹಿಂದಿಕ್ಕಿ IMDb ಯಲ್ಲಿ ಕೆಜಿಎಫ್ 2 ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಿತ್ರ!
3 mins to the 11:45 AM show and still the #Beast is in Green. pic.twitter.com/0CySYyiTVT
— Manobala Vijayabalan (@ManobalaV) April 19, 2022
#Beast TN Box Office
— Manobala Vijayabalan (@ManobalaV) April 19, 2022
FAILS the Monday test, PLUMMETS with a fall of another 65.38%.
Day 1 - ₹ 26.40 cr
Day 2 - ₹ 10.15 cr
Day 3 - ₹ 7.21 cr
Day 4 - ₹ 6.04 cr
Day 5 - ₹ 5.46 cr
Day 6 - ₹ 1.89 cr
Total - ₹ 57.15 cr#Vijay
ತಮಿಳುನಾಡಿನಲ್ಲೇ ಮಕಾಡೆ ಮಲಗಿದ ತಮಿಳು ಚಿತ್ರ ಬೀಸ್ಟ್
ಇನ್ನು ಕೆಜಿಎಫ್ 2 ಜೊತೆ ಠಕ್ಕರ್ ಗೆ ಇಳಿದಿದ್ದ ತಮಿಳು ಸೂಪರ್ ಸ್ಟಾರ್ ವಿಜಯ್ ರ ಬೀಸ್ಟ್ ಚಿತ್ರ ಗಳಿಕೆಯಲ್ಲಿ ಕೆಜಿಎಫ್ ಎದುರು ಅಕ್ಷರಶಃ ಮಕಾಡೆ ಮಲಗಿದೆ. ಈ ಹಿಂದೆ ಕೆಜಿಎಫ್ ಚಾಪ್ಟರ್ 1 ವೇಳೆ ಶಾರುಖ್ ಖಾನ್ ರ ಜೀರೋ ಚಿತ್ರ ಬಿಡುಗಡೆಯಾಗಿತ್ತು. ಆದರೆ ಕೆಜಿಎಫ್ ಎದುರು ಚಿತ್ರ ಸೋತಿತ್ತು. ಇದೀಗ ಬೀಸ್ಟ್ ಗೂ ಅದೇ ಪರಿಸ್ಥಿತಿ ಎದುರಾಗಿದೆ ಎನ್ನಲಾಗಿದೆ. ಸೋಮವಾರದ ಪರೀಕ್ಷೆಯಲ್ಲಿ ಬೀಸ್ಟ್ ಸೋತಿದ್ದು, ಗಣನೀಯ ಪ್ರದರ್ಶನಗಳ ಇಳಿಕೆಯಿಂದಾಗಿ ಚಿತ್ರದ ಗಳಿಕೆ ಗಣನೀಯವಾಗಿ ಇಳಿಕೆಯಾಗಿದೆ.
ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ 2: ಹಿಂದಿ ಚಿತ್ರರಂಗದಲ್ಲಿ ಎಲ್ಲಾ ದಾಖಲೆ ಉಡೀಸ್, ಕಲೆಕ್ಷನ್ ಗೆ ಆರ್ ಜಿವಿ ಪಿಧಾ!
ಈ ಕುರಿತಂತೆ ತಮಿಳು ಬಾಕ್ಸ್ ಆಫೀಸ್ ತಜ್ಞ ಮನೋಬಲ ವಿಜಯಬಾಲನ್ ಅವರು ಟ್ವೀಟ್ ಮಾಡಿದ್ದು, ಬೀಸ್ಟ್ ಚಿತ್ರ ಸೋಮವಾರ ತಮಿಳುನಾಡಿನಲ್ಲಿ ಕೇವಲ 1.89 ಕೋಟಿ ರೂಪಾಯಿ ಗಳಿಸಿದೆ. ತಮಿಳುನಾಡಿನಲ್ಲಿ ಸಿನಿಮಾದ ಒಟ್ಟೂ ಗಳಿಕೆ 57.15 ಆಗಿದೆ. ಬೀಸ್ಟ್ ಮತ್ತು ಕೆಜಿಎಫ್ ಎರಡೂ ಸಿನಿಮಾಗಳ ನಡುವೆ ಸುಮಾರು 7 ಕೋಟಿ ರೂಪಾಯಿ ಅಂತರ ಇದ್ದು, ಇದನ್ನು ಕೆಲವೇ ದಿನಗಳಲ್ಲಿ ಈ ಚಿತ್ರವನ್ನು ‘ಕೆಜಿಎಫ್ 2’ ಹಿಂದಿಕ್ಕುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
Same time, same theatre #KGFChapter2 SOLD OUT. pic.twitter.com/rvaXgud2e2
— Manobala Vijayabalan (@ManobalaV) April 19, 2022
ತಮಿಳಿನಲ್ಲಿ ಅರ್ಧಶತಕ ಭಾರಿಸಿದ ಮೊದಲ ಕನ್ನಡ ಚಿತ್ರ
ತಮಿಳುನಾಡಿನಲ್ಲಿ ಮೊದಲ ದಿನ (ಏಪ್ರಿಲ್ 14) ಈ ಚಿತ್ರ 8.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಅಭಿಮಾನಿಗಳು ಚಿತ್ರಮಂದಿರದತ್ತ ಹೆಚ್ಚೆಚ್ಚು ಹೆಜ್ಜೆ ಹಾಕಿದ್ದಾರೆ. ಹೀಗಾಗಿ, ಎರಡನೇ ದಿನ 10.61 ಕೋಟಿ ರೂಪಾಯಿ, ಮೂರನೇ ದಿನ 11.50 ಕೋಟಿ ರೂಪಾಯಿ ಹಾಗೂ ನಾಲ್ಕನೇ ದಿನವಾದ ಭಾನುವಾರ ಈ ಸಿನಿಮಾ 12.38 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವೀಕೆಂಡ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವ ಚಿತ್ರಗಳು ಸೋಮವಾರ ಸೊರಗುತ್ತವೆ.
ಇದನ್ನೂ ಓದಿ: 'ಅಧೀರ' ನಾನು ಮಾಡಿದ ಶ್ರೇಷ್ಠ ಪಾತ್ರಗಳಲ್ಲಿ ಒಂದು: ಸಂಜಯ್ ದತ್
ಆದರೆ, ‘ಕೆಜಿಎಫ್ 2’ ವಿಚಾರದಲ್ಲಿ ಹಾಗಾಗುವ ಮಾತೇ ಇಲ್ಲ. ಈ ಸಿನಿಮಾ ಐದನೇ ದಿನ (ಏಪ್ರಿಲ್ 18) 7.54 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಈ ಮೂಲಕ ತಮಿಳುನಾಡಿನಲ್ಲಿ 50 ಕೋಟಿ ರೂಪಾಯಿ ಕ್ಲಬ್ ಸೇರಿದೆ. ತಮಿಳಿನಲ್ಲಿ ಅರ್ಧ ಶತಕ ಬಾರಿಸಿದ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿ ‘ಕೆಜಿಎಫ್ 2’ಗೆ ಸಿಕ್ಕಿದೆ.
#KGFChapter2 TN Box Office
— Manobala Vijayabalan (@ManobalaV) April 19, 2022
PASSESS the crucial Monday test by crossing ₹50 cr milestone mark.
Day 1 - ₹ 8.24 cr
Day 2 - ₹ 10.61 cr
Day 3 - ₹ 11.50 cr
Day 4 - ₹ 12.38 cr
Day 5 - ₹ 7.54 cr
Total - ₹ 50.27 cr
EXTRAORDINARY#Yash #KGF2
ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ 2: ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ, ನೆಟ್ಟಿಗರು ಏನಂತಾರೆ? ರೇಟಿಂಗ್ ಎಷ್ಟು....
ಕೇರಳದಲ್ಲೂ ದಾಖಲೆ
ಹಿಂದಿ, ತಮಿಳಿನಲ್ಲಿ ಮಾತ್ರವಲ್ಲದೇ ಕೇರಳದಲ್ಲೂ ಕೆಜಿಎಫ್ 2 ದಾಖಲೆ ಬರೆದಿದ್ದು, ಕೇರಳದಲ್ಲಿ ಚಿತ್ರದ ಗಳಿಕೆ 30 ಕೋಟಿ ರೂ ದಾಟಿದೆ. ಚಿತ್ರ ಬಿಡುಗಡೆಯಾಗಿ 5ನೇ ದಿನದ ಅಂತ್ಯಕ್ಕೆ ಚಿತ್ರ ಕೇರಳದಲ್ಲಿ ಒಟ್ಟು 32.50 ಕೋಟಿ ರೂ ಗಳಿಕೆ ಮಾಡಿದ್ದು, ಆ ಮೂಲಕ ಕೇರಳದಲ್ಲಿ ವೇಗವಾಗಿ 30 ಕೋಟಿ ರೂ ಗಳಿಕೆ ಕಂಡ ಮೊದಲ ಚಿತ್ರ ಎಂಬ ಖ್ಯಾತಿಗೆ ಕೆಜಿಎಫ್ ಪಾತ್ರವಾಗಿದೆ.
#KGFChapter2 creates HISTORY at the Kerala Box Office.
— Manobala Vijayabalan (@ManobalaV) April 19, 2022
Becomes the FASTEST film ever to cross ₹30 cr gross mark in the state within 5 days.
Total - ₹ 32.50 cr#KGF2